ಕೊರಟಿಕೆರೆಗೆ ಬಂದ ಬಸ್; ಪೂಜೆ ಸಲ್ಲಿಸಿ ಸ್ವಾಗತ ಕೋರಿದ ಜನ

ಅರಕಲಗೂಡು: ತಾಲೂಕಿನ ಕೊರಟಿಕೆರೆ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಲಾಗಿದ್ದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ರಾಮನಾಥಪುರ ಸಮೀಪದ ಕೊರಟಿಕೆರೆಗೆ ಮೊದಲ ಬಾರಿಗೆ ಬಂದ ಬಸ್ ಗಳಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು ಗ್ರಾ.ಪಂ ಅಧ್ಯಕ್ಷ ಪ್ರಕಾಶ್ ರಾಜೇ ಆರಸ್ ಮಾತನಾಡಿ, ಸಾರಿಗೆ ಬಸ್ ಘಟಕವಿರುವ ರಾಮನಾಥಪುರದಿಂದ ಕೆಲವೇ ಕಿ.ಮೀ ದೂರದಲ್ಲಿರುವ ಕೊರಟಿಕೆರೆಗೆ ಇಂದಿನವರೆಗೂ ಸಾರಿಗೆ ಬಸ್ ಭಾಗ್ಯ ದೊರಕಿರಲಿಲ್ಲ. ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಶಾಸಕರಿಗೆ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ ಮೂರೇ ದಿನದಲ್ಲ್ಲಿ ನಮ್ಮ ಗ್ರಾಮಕ್ಕೆ ಬಸ್ ಬರುವಂತೆ ಕ್ರಮಕೈಗೊಂಡಿರುವುದು ಸ್ವಾಗತಾರ್ಹ ಎಂದರು.
ಕೊರಟಿಕೆರೆಯಿAದ ತಾಲೂಕು ಕೇಂದ್ರವಾದ ಅರಕಲಗೂಡು, ಹೋಬಳಿ ಕೇಂದ್ರಗಳಾದ ರಾಮನಾಥಪುರ ಮತ್ತು ದೊಡ್ಡಮಗ್ಗೆಗೆ ಹೋಗಿ ಬರಲು ಖಾಸಗಿ ವಾಹನಗಳನ್ನು ಅವಲಂಭಿಸುವುದನ್ನು ತಪ್ಪಿಸಿದ್ದಾರೆ ಎಂದು ತಿಳಿಸಿದರು.
ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ರಾಮನಾಥಪುರದಿಂದ ದೊಡ್ಡಹಳ್ಳಿ, ಬೆಳವಾಡಿ ಮಾರ್ಗವಾಗಿ ಕೊರಟಿಕೆರೆಗೆ ಮತ್ತು ಅರಕಲಗೂಡಿನಿಂದಲೂ ಬೆಳಗ್ಗೆ 9 ಗಂಟೆಗೆ ಕೊರಟಿಕೆರೆಗೆ ಬಸ್ ಬರಲಿದ್ದು, ಸಂಜೆ 5 ಗಂಟೆಗೂ 2 ಬಸ್ ಗಳು ಸಂಚರಿಸುತ್ತಿವೆ.
ಗ್ರಾಪA ಉಪಾಧ್ಯಕ್ಷೆ ವಿಜಯಲಕ್ಷಿö್ಮÃ ರಾಜಯ್ಯ, ಸದಸ್ಯ ರಾಧಾ ಆನಂದ್ , ನಯನ ನಾಗೇಶ್, ಪ್ರಸನ್ನ, ಗ್ರಾಮದ ಹಿರಿಯ ರಂಗೇಗೌಡ, ರಾಜೇಗೌಡ, ರಂಗಶೆಟ್ರು ಮತ್ತು ಗ್ರಾಮಸ್ಥರಿದ್ದರು.

Post a Comment

0 Comments