ಉನ್ನತ ಶಿಕ್ಣಣಕ್ಕೆ ಆದ್ಯತೆ ಅಗತ್ಯ
ಅರಕಲಗೂಡು: ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಗಳಿಸಿ ಸಮಾಜಕ್ಕೆ ಉತ್ತಮ ಹೆಸರು, ಕೀರ್ತಿ ತರಲು ಸಂಕಲ್ಪ ಮಾಡಬೇಕು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ತಿಪ್ಪೇಗೌಡ ಮನವಿ ಮಾಡಿದರು.
ತಾಲೂಕಿನ ರಾಮನಾಥಪುರದ ಕನಕದಾಸ ಸಮುದಾಯ ಭವನದಲ್ಲಿ ತಾಲೂಕು ಕನಕ ನೌಕರರ ಸಂಘದ ವತಿಯಿಂದ ಭಾನುವಾರ 2019- 20 ಮತ್ತು 20- 21 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತಕ ಯುಗದಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಒಳಿತು. ನೌಕರ ವರ್ಗದವರು ಸಮುದಾಯದ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಮಹತ್ವದ ಸಂಗತಿಯಾಗಿದೆ ಎಂದರು.
ತಾಲೂಕು ಕನಕ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ವರ್ಷದಿಂದ ಸಂಘದ ವತಿಯಿಂದ ಎಲ್ಲಾ ವಿಧದÀ ಉನ್ನತ ಶಿಕ್ಷಣ ಪಡೆಯವÀ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ತಿಳಿಸಿದರು.
ಸಬ್ ಇನ್ಸ್ಪೆಕ್ಟರ್ ಸತೀಶ್ ವಿ. ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಪಶು ವೈದ್ಯಾಧಿಕಾರಿ ಡಾ. ಆಕರ್ಷ್, ಸೆಸ್ಕ್ ಕಿರಿಯ ಇಂಜಿನಿಯರ್ ರಂಗೇಗೌಡ, ಕೆ.ಎಂ. ಕನಕ, ಯಶಸ್‌ಗೌಡ ಮಾತನಾಡಿದರು. ಡಾ. ಸ್ವಾಮಿಗೌಡ, ಬಿ.ಜೆ. ಮಂಜೇಗೌಡ, ಕೆ.ಎಂ ಕೃಷ್ಣ, ಶಿಕ್ಷಕ ಬಸವರಾಜು, ಅರುಣ್ ಕುಮಾರ್, ನಿಂಗೇಗೌಡ, ಕೆ.ಜೆ. ಮೊಗಣ್ಣ, ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಮುತ್ತಿಗೆ ರಮೇಶ್, ಗ್ರಾ.ಪಂ ಅಧ್ಯಕ್ಷೆ ಹೇಮಲತಾ ಸಣ್ಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. 71 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಸಂಘಕ್ಕೆ 5 ವರ್ಷದ ಅವಧಿ ಪೂರ್ಣಗೊಂಡಿದ್ದರಿAದ ಪದಾಧಿಕಾರಿಗಳ ಮರು ನೇಮಕ ಮಾಡಲಾಯಿತು.
0 Comments