ಅರಕಲಗೂಡು: ದೇವಾಲಯಗಳ ಊರು ರಾಮನಾಥಪುರದಲ್ಲಿ ವಿಜಯದಶಮಿ ಪ್ರಯುಕ್ತ ಶುಕ್ರವಾರ ದೇವರ ಉತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.
ಶ್ರೀರಾಮೇಶ್ವರ, ಶ್ರೀ ಅಗಸ್ತೆö್ಯÃಶ್ವರ ಹಾಗೂ ಶ್ರೀ ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇವರ ಉತ್ಸವ ಮೂರ್ತಿಗಳನ್ನು ಅಲಂಕೃತ ಅಡ್ಡೆ ಮೇಲೆ ಕೂರಿಸಿ ಶಿರಧನಹಳ್ಳಿ ಬಳಿಯ ಬನ್ನಿ ಮಂಟಪಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಯಿತು. ಭಕ್ತರಿಗೆ ಬನ್ನಿ ಪತ್ರೆ ವಿತರಿಸಲಾಯಿತು.
ನಂತರ ಊರಿನ ದೇವಸ್ಥಾನ ರಸ್ತೆಯ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಲಾಯಿತು. ಪ್ರತಿ ಮನೆಗಳವರು ಹಣ್ಣು ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿ ಶಮಿ ಪತ್ರೆ ಸ್ವೀರಿಸಿ ಧನ್ಯತಾಭಾವ ಹೊಂದಿದರು.
0 Comments