ಪಪಂ ವಾಹನಗಳಿಗೆ ಸಾಮೂಹಿಕ ಪೂಜೆ ಸಲ್ಲಿಸಿದ ಶಾಸಕ

ಅರಕಲಗೂಡು: ಇಲ್ಲಿಯ ಪಪಂ ಆವರಣದಲ್ಲಿ ಅಯುಧ ಪೂಜೆ ಪ್ರಯುಕ್ತ ಗುರುವಾರ ಶಾಸಕ ಎ.ಟಿ. ರಾಮಸ್ವಾಮಿ ವಾಹನಗಳಿಗೆ ಸಾಮೂಹಿಕ ಪೂಜೆ ನೆರವೇರಿಸಿದರು.

ಪಂಚಾಯತಿಯ ಟ್ರಾö್ಯಕ್ಟರ್, ಅಂಬುಲೆನ್ಸ್, ಅಟೋಗಳು, ಪಟ್ಟಣ ಪಂಚಾಯತಿಯ ನೌಕರರು ಬಳಸುವ ದಿನನಿತ್ಯದ ವಸ್ತುಗಳಿಗೆ ಪೂಜೆ ಸಲ್ಲಿಸಿ ಕುಂಬಳಕಾಯಿ ಒಡೆದರು.

ಪಪಂ ಅಧ್ಯಕ್ಷ ಹೂವಣ್ಣ, ಉಪಾಧ್ಯಕ್ಷ ನಿಖಿಲ್ ಕುಮಾರ್, ಸದಸ್ಯರಾದ ಸುಭಾನ ಷರೀಫ್, ಪ್ರದೀಪ್ ಕುಮಾರ್, ಅನೀಕೆತನ್, ಮುಖ್ಯಾಧಿಕಾರಿ ಶಿವಕುಮಾರ್, ಅರೋಗ್ಯಾಧಿಕಾರಿ ಮಂಜುನಾಥ್, ದಿನೇಶ್, ಮುಖಂಡರಾದ ಜನಾರ್ಧನ ಗುಪ್ತಾ, ಲೋಕೇಶ್, ಶಶಿಕುಮಾರ್, ನೌಕರರು ಹಾಜರಿದ್ದರು.

Post a Comment

0 Comments