ಅರಕಲಗೂಡು: ಕೆಶಿಪ್ ರಸ್ತೆ ಹಾದು ಹೋಗುವ ಬಸವಾಪಟ್ಟಣದಲ್ಲಿ ಚರಂಡಿ ಮತ್ತು ಮೋರಿಗಳನ್ನು ನಿರ್ಮಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕೈಗೊಳ್ಳಬೇಕು ಎಂದು ಶಾಸಕ ಎ.ಟಿ. ರಾಮಸ್ವಾಮಿ ಸೂಚಿಸಿದರು.
ತಾಲೂಕಿನ ಬಸವಾಪಟ್ಟಣ ಗ್ರಾಪಂ ಆವರಣದಲ್ಲಿ ಬುಧವಾರ ಮಳೆ ನೀರು ಮನೆಗೆ ನುಗ್ಗಿ ಆಹಾರ ಪದಾರ್ಥಗಳು ಹಾನಿಗೀಡಾದ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಅವರು, ಜೋರು ಮಳೆ ಒಂದೇ ಸಮನೆ ಬಿದ್ದ ಕಾರಣಕ್ಕಾಗಿ ಮನೆಗಳಿಗೆ ನೀರು ನುಗ್ಗಿದೆ. ಇನ್ನು ಮುಂದೆ ಚರಂಡಿಗಳಲ್ಲಿ ನೀರು ವೇಗವಾಗಿ ಹರಿದು ವಾಸದ ಮನೆಗಳನ್ನು ನುಗ್ಗದಂತೆ ನಿಗಾ ವಹಿಸಬೇಕು ಎಂದು ಪಿಡಿಒ ಅವರಿಗೆ ಸೂಚನೆ ನೀಡಿದರು.
ಸರ್ಕಾರ 36 ಫಲಾನುಭವಿಗಳಿಗೆ ತಲಾ 10 ಸಾವಿರ ರೂ ನಂತೆ 3.60 ಲಕ್ಷ ರೂ ಪರಿಹಾರ ಒದಗಿಸಿದೆ. ಸದ್ಯಕ್ಕೆ 10 ಮಂದಿಗೆ ಚೆಕ್ ವಿತರಿಸಲಾಗುತ್ತಿದ್ದು ಇನ್ನುಳಿದ 26 ಮಂದಿಯ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದೆ. ಇದು ದೊಡ್ಡ ಮೊತ್ತದ ಪರಿಹಾರವಲ್ಲದಿದ್ದರೂ ಸಂತ್ರಸ್ತರಿಗೆ ನೈತಿಕ ಸ್ಥೆöÊರ್ಯ ತುಂಬುವ ನಿಟ್ಟಿನಲ್ಲಿ ನೀಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಷಾ ಯೋಗೇಶ್, ಸದಸ್ಯರಾದ ರಾಣಿ ಮಂಜು, ವಸಂತಕುಮಾರ್, ಮಂಜುನಾಥ್, ಚಂದ್ರಶೇಖರ್, ಪಿಡಿಒ ಮಂಜುನಾಥ್, ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಉಪ ತಹಸೀಲ್ದಾರ್ ರವಿ, ರಾಜಸ್ವ ನಿರೀಕ್ಷಕ ಸಿ. ಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಮದನ್, ಕೃಷ್ಣ, ವೀರೇಶ್ ಮುಂತಾದವರು ಉಪಸ್ಥಿತರಿದ್ದರು.
ಸಂಪಾದಕ ರವಿ
0 Comments