ಅರಕಲಗೂಡು: ಸುಪ್ರಸಿದ್ದ ಅರಕಲಗೂಡು ದಸರಾ ಉತ್ಸವ ಶುಕ್ರವಾರ ವೈಭವದಿಂದ ನಡೆಯಿತು. ಮಳೆಯಲ್ಲೇ ಸಾಗಿದ ಉತ್ಸವಕ್ಕೆ ಅಪಾರ ಜನರು ಸಾಕ್ಷಿಯಾದರು.
ಗ್ರಾಮ ದೇವತೆ ದೊಡ್ಡಮ್ಮ ದೇವತೆ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಾಸಕ ಎ.ಟಿ.ರಾಮಸ್ವಾಮಿ ಹಾಗೂ ವಿವಿಧ ಮಠಾಧೀಶರು ಉತ್ಸವಗಳ ಮೆರವಣಿಗೆ ಚಾಲನೆ ನೀಡಿದರು.
ವಿದ್ಯುತ್ ದೀಪಗಳಿಂದ ಅಲಂಕೃತ ಗೊಂಡಿದ್ದ ವಿವಿಧ ದೇವಾಲಯಗಳ ಉತ್ಸವಗಳು ಸರತಿ ಸಾಲಿನಲ್ಲಿ ಬನ್ನಿ ಮಂಟಪದತ್ತ ಸಾಗಿದವು. ಉತ್ಸವಗಳ ಮುಂದೆ ಕೀಲು ಕುದುರೆ, ಪಠಕುಣಿತ, ಮಹಿಳಾ ಚಂಡೆವಾದ್ಯ ಮೇಳ, ಡೊಳ್ಳು ಕುಣಿತ, ಗಾರುಡಿ ಗೊಂಬೆ , ತಮಟೆ ವಾದ್ಯ, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ತಂಡಗಳು ಪ್ರದರ್ಶನ ನೀಡುತ್ತಾ ಸಾಗಿದವು.
ಉತ್ಸವಗಳ ಮೆರವಣಿಗೆ ಬಸ್ ನಿಲ್ದಾಣದ ರಸ್ತೆ ಯಲ್ಲಿ ಸಾಗಿ ಅನಕೃ ವೃತ್ತದ ಮೂಲಕ ಪೇಟೆ ಮೂಕ್ಯ ರಸ್ತೆಯಲ್ಲಿ ಸಾಗಿ ಬನ್ನಿ ಮಂಟಪವನ್ನು. ಸೇರಿತು. ಎರಡೂ ಬದಿಗಳ ರಸ್ತೆ ಹಾಗೂ ಕಟ್ಟಡಗಳ ಮೇಲೇರಿ ಜನರು ಉತ್ಸವ ಹಾಗೂ ಕಲಾ ತಂಡಗಳ ಪ್ರದರ್ಶನ ವೀಕ್ಷಿಸಿ ಸಂತಸ ಪಟ್ಟರು.
ಪ್ರಮುಖ ವೃತ್ತಗಳಲ್ಲಿ ಕಲಾ ತಂಡಗಳ ಕುಣಿತಕ್ಕೆ ಜನರೂ ಹೆಜ್ಜೆ ಹಾಕಿ ಸಂಭ್ರಮಿಸದಿದರು. ಉತ್ಸವ ಸಾಗುವ ದಾರಿಯಲ್ಲಿ ಸಂಘ ಸಂಸ್ಥೆಗಳು ಉಚಿತ ಉಪಹಾರ ಹಾಗೂ ತಂಪು ಪಾನೀಯಗಳನ್ನು ಕಲಾ ತಂಡಗಳಿಗೆ ಹಾಗೂ ಸರ್ವಾಜನಿಕರಿಗೆ ನೀಡುವ ಮೂಲಕ ಜನರ ಹಸಿವಿನ ದಾಹ ತಣಿಸಿದರು.
ಮೆರವಣಿಗೆಯಲ್ಲಿ ಬನ್ನಿ ಮಂಟಪಕ್ಕೆ ಬಂದ ಉತ್ಸವಗಳನ್ನು ಸ್ವಾಗತಿಸಿ ಸಾಲಿನಲ್ಲಿ ನಿಲ್ಲಿಸಲಾಯಿತು. ಬಳಿಕ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಬನ್ನಿ ಪೂಜೆ ನಡೆಸಲಾಯಿತು. ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಕದಳಿ ಛೇಧನ ನಡೆಸಿದರು.
ಉತ್ಸವದಲ್ಲಿ ಬಂದಿದ್ದ ದೇವತೆಗಳಿಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಬನ್ನಿ ಸಮರ್ಪಣೆ ಕಾರ್ಯ ನಡೆಯಿತು.
ಅರೇ ಮಾದನಹಳ್ಳಿ ವಿಶ್ವಕರ್ಮ ಮೂಲ ಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ದಸರಾ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಚಿಲುಮೆ ಮಠದ ಮಠಾಧೀಶ ಜಯದೇವ ಸ್ವಾಮೀಜಿ, ಬಸವಾ ಪಟ್ಟಣ ತೋಂಟದಾರ್ಯ ಸಂಸ್ಥಾನ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ಫಾದರ್ ಜಾನ್ ವಿನ್ ನಟರಾಜ್, ಪಪಂ ಅಧ್ಯಕ್ಷ ಹೂವಣ್ಣ, ಉಪಾಧಕ್ಷ ನಿಖಿಲ್ ಕುಮಾರ್, ಸದಸ್ಯರಾದ ಪ್ರದೀಪ್ ಕುಮಾರ್, ಅನಿಕೇತನ್, ಬಾಸಿದ್, ಅನಸೂಯ, ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿ ಸುದರ್ಶನ್, ಮುಖಂಡರಾದ ಜನಾರ್ದನ ಗುಪ್ತ, ಶಶಿಕುಮಾರ್ ಇದ್ದರು. ಬನ್ನಿ ಮಮಟಪದ ಆವರಣದಲ್ಲಿ ಕಲಾತಂಡಗಳು ಪ್ರದರ್ಶನ ನೀಡಿ ಜನರನ್ನು ರಂಜಿಸಿದವು.
ಸಂಪಾದಕ ರವಿ
0 Comments