ಅರಕಲಗೂಡು: ವಿದ್ಯಾರ್ಥಿಗಳು ಉತ್ತಮ ನಡವಳಕೆ ರೂಢಿಸಿಕೊಳ್ಳದೆ ಎಷ್ಟೇ ಶಿಕ್ಷಣ ಗಳಿಸಿದರೂ ಪ್ರಯೋಜನವಿಲ್ಲ, ರಾಷ್ಟ್ರೀಯತೆ ಮೈಗೂಡಿಸಿಕೊಂಡು ಕಾನೂನು ಅರಿವು ಹೊಂದುವ ಮೂಲಕ ಹೆಚ್ಚಿನ ಜ್ಞಾನಾರ್ಜನೆ ಸಂಪಾದಿಸಲು ಪ್ರಯತ್ನಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಹರೀಶ್ ಹೇಳಿದರು.
ಪಟ್ಟಣದ ಯುನಿಟಿ ಕಾಮರ್ಸ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಾರತದ 75ನೇ ವರ್ಷದ ಸ್ವಾತಂತ್ರö್ಯದ ಅಮೃತ ಮಹೋತ್ಸವ ಅಂಗವಾಗಿ ದೇಶವಾಸಿಗಳಿಗೆ ರಾಷ್ಟಿçÃಯ ಜಾಗೃತಿ ಮತ್ತು ಅಪರಮಿತ ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಹುಟ್ಟಿದಾಗಿನಿಂದಲೇ ಕಾನೂನು ವ್ಯಾಪ್ತಿಗೆ ಒಳಪಡಬೇಕಾಗುತ್ತದೆ. ಜೀವನದ ಪ್ರತಿ ಹಂತದಲ್ಲೂ ಕಾನೂನು ಬೆರೆತು ಹೋಗಿದೆ. ಹೀಗಾಗಿ ಕಾನೂನು ಉಲ್ಲಂಘಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದರು.
ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಪ್ರಧಾನಿ ಹುದ್ದೆವರೆಗೂ ಏರಲು ಸಹ ಅವಕಾಶವಿದೆ. ಆದರೆ ಈ ದೇಶದ ಕಾನೂನು ಮಾತ್ರ ಎಲ್ಲರಿಗೂ ಒಂದೇ ತೆರನಾದ ರೀತಿಯಲ್ಲಿ ಅನ್ವಯವಾಗಲಿದೆ. ಹದಿನೆಂಟು ವರ್ಷದೊಳಗಿನವರು ಲೈಂಗಿಕವಾಗಿ ಅಸಭ್ಯ ವರ್ತನೆಯಲ್ಲಿ ತೊಡಗಿಕೊಂಡರೂ ಅಪರಾಧವಾಗುತ್ತದೆ. ವಾಹನ ಚಾಲನಾ ಪರವಾನಗಿ ಮಾಡಿಸದೆ ಅಪಘಾತವೆಸಗಿದರೆ ಅಂತಹವ ಪಾಲಕರು ಕಾನೂನಿನಡಿ ಶಿಕ್ಷೆಗೆ ಹೊಣೆಗಾರರಾಗಬೇಕಾಗುತ್ತದೆ. ಪೋಷಕರು ಮತ್ತು ಮದುವೆಯಾದ ಹೆಂಡತಿಯನ್ನು ಸಾಕಲಾಗದಿದ್ದರೆ ಜೀವನಾಂಶ ನೀಡಬೇಕಾಗುತ್ತದೆ.
ಪ್ರಾಂಶುಪಾಲ ಎಂ.ಡಿ. ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ದತ್ತು ವಿಷಯ ಕುರಿತು ವಕೀಲ ಎ.ಪಿ. ಲೋಕೇಶ್ ಹಾಗೂ ಜೀವನಾಂಶ ನಿರ್ವಹಣೆ ಬಗ್ಗೆ ವಕೀಲೆ ಎಚ್.ಎಂ. ಪಲ್ಲವಿ ಉಪನ್ಯಾಸ ನೀಡಿದರು. ಹಿರೀಯ ವಕೀಲ ಶಂಕರಯ್ಯ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಗೋವಿಂದ, ಕಾರ್ಯದರ್ಶಿ ದೊರೆಸ್ವಾಮಿ, ಉಪನ್ಯಾಸಕರಾದ ಮಂಜು, ರಕ್ಷಿತ, ಮಾದುರಿ, ಗಿರೀಶ್ ಮುಂತಾದವರು ಉಪಸ್ಥಿತರಿದ್ದರು.
0 Comments