ಮಜ್ಜನಹಳ್ಳಿಯಲ್ಲಿ ತಲೆಎತ್ತಿದ ಗಾಂಧೀಜಿ, ಅಂಬೇಡ್ಕರ್ ಪುತ್ಥಳಿ ಅನಾವರಣಗೊಂಡ ಐತಿಹ್ಯ ಕ್ಷಣಗಳು

ಅರಕಲಗೂಡು: ಅಹಿಂಸೆ ಮೂಲಕ ರಾಷ್ಟçಕ್ಕೆ ಸ್ವಾತಂತ್ರö್ಯ ಗಳಿಸಲು ಕಾರಣಕರ್ತರಾದ ಮಹಾತ್ಮಾ ಗಾಂಧೀಜಿ ಹಾಗೂ ಭಾರತಕ್ಕೆ ಉತ್ಕೃಷ್ಟ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯನ್ನು ಮಜ್ಜನಹಳ್ಳಿಯ ಒಂದೇ ಊರಿನಲ್ಲಿ ಸ್ಥಾಪಿಸಿ ಸುವರ್ಣಾಕ್ಷರಗಳನ್ನು ಬರೆದಿಡುವ ಇತಿಹಾಸ ನಿರ್ಮಿಸಲಾಗಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ತರಿಗಳಲೆ ಗ್ರಾಪಂ ವ್ಯಾಪ್ತಿಯ ಮಜ್ಜನಹಳ್ಳಿ ಗ್ರಾಮದ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ಥಾಪಿಸಿರುವ ರಾಷ್ಟçಪಿತ ಮಹಾತ್ಮಾ ಗಾಂಧೀಜಿ ಪುತ್ಥಳಿಯನ್ನು ಶನಿವಾರ ಅನಾವರಣಗೊಳಿಸಿ ಮಾತನಾಡಿದ ಅವರು, 
ಅಂಬೇಡ್ಕರ್ ಮತ್ತು ಗಾಂಧೀಜಿ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದ್ದಾರೆ. ವಿಶ್ವವೇ ಮೆಚ್ಚುವ ರೀತಿಯಲ್ಲಿ ದೇಶಕ್ಕೆ ಸಂವಿಧಾನ ನೀಡಿದ ಕೊಟ್ಟವರು ಡಾ. ಅಂಬೇಡ್ಕರ್ ಒಂದು ಜಾತಿ, ಮತ, ಧರ್ಮಕ್ಕೆ ಸೀಮಿತವಾಗಿ, ಸಂವಿಧಾನ ರಚಿಸಿದವರಲ್ಲ. 

ಇಡೀ ಭಾರತ ರಾಷ್ಟçದ ಜನತೆಗೆ ಸರ್ವಸಮ್ಮತವಾಗಿರುವಂತಹ ಸಂವಿಧಾನ ನೀಡಿದ್ದಾರೆ. ಇವರ ಬದುಕಿನ ಮೌಲ್ಯಗಳು ಹಾಗೂ ತತ್ವಾದರ್ಶಗಳನ್ನು ಪ್ರಸ್ತುತ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಸಾಗುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಮಜ್ಜನಹಳ್ಳಿ ಗ್ರಾಮದ ದೇವಸ್ಥಾನಕ್ಕೆ 3.5 ಲಕ್ಷ ರೂ, ಗೇರುಬಾರೆ ದೇವಸ್ಥಾನಕ್ಕೆ 6 ಲಕ್ಷ ರೂ ಹಾಗೂ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ಮಂಜೂರು ಮಾಡಿಸಿರುವೆ. ಮಜ್ಜನಹಳ್ಳಿ ಹಾಗೂ ಗೇರುಬಾರೆ ಗ್ರಾಮಕ್ಕೆ ಹೈಮಾಸ್ಟ್ ದೀಪ ನೀಡಲಾಗಿದ್ದು ಇನ್ನೊಂದು ತಿಂಗಳೊಳಗೆ ಅಳವಡಿಕೆಯಾಗುತ್ತದೆ.

 ಕ್ಷೇತ್ರದಲ್ಲಿ ಎಲ್ಲೆಲ್ಲಿ ಅಂಬೇಡ್ಕರ್ ಭವನ ಅಪೂರ್ಣವಾಗಿದೆಯೋ ಅವೆಲ್ಲವನ್ನೂ ಪೂರ್ಣಗೊಳಿಸಲು ಅನುದಾನದ ಒದಗಿಸುವುದಾಗಿ ಭರವಸೆ ನೀಡಿದರು.
ಗ್ರಾ.ಪಂ ಸದಸ್ಯ ಶ್ರೀನಾಥ್, ಅಂಬೇಡ್ಕರ್ ವಾದ ದಸಂಸ ಮುಖಂಡ ದುಮ್ಮಿ ಕೃಷ್ಣ, ಮಾತನಾಡಿದರು. ಗ್ರಾ.ಪಂ ಅಧ್ಯಕ್ಷೆ ಪ್ರೇಮಾಮಂಜು, ಸದಸ್ಯರಾದ ಮಂಜುನಾಥ್, ಶ್ರೀನಾಥ್, ವೀಣಾ ಪ್ರಕಾಶ್, ಪಿಡಿಒ ಮಹದೇವಪ್ಪ, ಮುಖಂಡರಾದ ಸೋಮಣ್ಣ, ಸಂಜೀವಣ್ಣ, ಧರ್ಮಣ್ಣ, ಧರ್ಮೇಶ್, ಯಜಮಾನ್ ಕೃಷ್ಣ, ಹನುಮೇಗೌಡ, ತಮ್ಮೇಗೌಡ, ಸಣ್ಣೇಗೌಡ, ಗೋವಿಂದಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಧು, ಹೆಗ್ಗತ್ತೂರು ರಮೇಶ್, ಹಂಡ್ರಂಗಿ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments