ಮಕ್ಕಳಿಗೆ ಬಿಸಿಯೂಟ ಬಡಿಸಿದ‌ ಶಾಸಕ; ಗುಣಮಟ್ಟದ ಆಹಾರ ಕೊಡಲು ಸೂಚನೆ

ಅರಕಲಗೂಡು: ವಿದ್ಯಾರ್ಥಿಗಳಿಗೆ ಕರೊನಾ ಕಾರಣಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಬಿಸಿಯೂಟ ಯೋಜನೆಯನ್ನು ಪುನರಾರಂಭಿಸಲಾಗಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಗುರುವಾರ ಬಿಸಿಯೂಟ ಬಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ಹಸಿವಿನಿಂದ ಬಳಲದಂತೆ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಬಿಸಿಯೂಟ ಯೋಜನೆ ಜಾರಿಗೊಳಿಸಿದ್ದು ಇದರ ಸದುಪಯೋಗ ಆಗುವಂತೆ ನೋಡಿಕೊಳ್ಳಬೇಕು. ಯಾವ ಮಕ್ಕಳು ಯೋಜನೆಯಿಂದ ವಂಚಿತವಾಗುವಂತಿಲ್ಲ.

ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಿ ಆರೋಗ್ಯವಂತರಾಗಿರಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕಿನಲ್ಲಿ 6ರಿಂದ 10ನೇ ತರಗತಿವರೆಗೆ ಸದ್ಯ 156 ಶಾಲೆಗಳ 8670 ಮಕ್ಕಳಿಗೆ ಬಿಸಿಯೂಟ ಆರಂಭಿಸಲಾಗಿದೆ. ಬರುವ ದಿನಗಳಲ್ಲಿ ಆರಂಭವಾಗುವ 1ರಿಂದ 5 ತರಗತಿವರೆಗೆ 176 ಶಾಲೆಗಳ 8122 ಮಕ್ಕಳು ಸೇರಿದಂತೆ ಒಟ್ಟು 16798 ಮಕ್ಕಳಿಗೆ ಬಿಸಿಯೂಟ ಸಿಗಲಿದೆ, ಮಕ್ಕಳಿಗೆ ಗುಣಮಟ್ಟದ ಬಿಸಿಯೂಟ ದೊರಕುವಂತಾಗಬೇಕು ಎಂದು ತಿಳಿಸಿದರು.

ಡಿಡಿಪಿಐ ಮಂಜುಳಾ, ಬಿಇಒ ಮನ ಮೋಹನ್, ಪ್ರಾಂಶುಪಾಲ ಮಹದೇವ, ಉಪ ಪ್ರಾಂಶುಪಾಲ ಮಹಾಲಿಂಗಪ್ಪ, ಶಿವಕುಮಾರ್ ಇತರರು ಇದ್ದರು.

Post a Comment

0 Comments