76ನೇ ಗಣರಾಜ್ಯೋತ್ಸವ, ಹುತಾತ್ಮ ಸಂಗೊಳ್ಳಿ ರಾಯಣ್ಣ ಪುಣ್ಯ ಸ್ಮರಣೆ

ಅರಕಲಗೂಡು: ಸಮಾನತೆಯ ಹರಿಕಾರ ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಿಸುವ ಮಾತುಗಳನ್ನು ನಿಲ್ಲಿಸಿ ಎಲ್ಲರೂ ಒಗ್ಗಟ್ಟಿನಿಂದ ಸಂವಿಧಾನ ಸಂರಕ್ಷಿಸಿ ಬದ್ದತೆಯಿಂದ ನಡೆದುಕೊಳ್ಳಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ ಹೇಳಿದರು.

ಪಟ್ಟಣದ ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಎಂ.ಟಿ. ಕೃಷ್ಣೇಗೌಡರ ಅಭಿಮಾನಿಗಳ ಕಚೇರಿ ಉದ್ಘಾಟಿಸಿ ಭಾನುವಾರ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ಹಾಗೂ ಹುತಾತ್ಮ ಸಂಗೊಳ್ಳಿ ರಾಯಣ್ಣ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಭಾರತ ಸಂವಿಧಾನವನ್ನು ಇಡೀ ವಿಶ್ವವೇ ಮೆಚ್ಚಿ ಕೊಂಡಾಡಿದೆ. ಆದರೆ ಇಂದು ಉಳ್ಳವರದ್ದೇ ಸಂವಿಧಾನವಾಗಿದ್ದು, ಕೆಲವರು ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನಾಡುತ್ತಿರುವುದು ಸರಿಯಲ್ಲ ಎಂದರು.

ದೇಶ ಪರಕೀಯರ ಗುಲಾಮಗಿರಿ ಆಡಳಿತಕ್ಕೆ ಒಳಪಡುವುದನ್ನು ತಪ್ಪಿಸಿ ಸ್ವಾತಂತ್ರö್ಯಕ್ಕಾಗಿ ಆಂಗ್ಲರ ವಿರುದ್ದ ಹೋರಾಡಿ ಪ್ರಾಣತೆತ್ತ ಕಿತ್ತೂರು ರಾಣಿ ಚೆನ್ನಮ್ಮ ಅವರ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ದೇಶಪ್ರೇಮ ಅಪ್ರತಿಮವಾಗಿದ್ದು ಇಂತಹ ಮಹನೀಯರ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪವಾಗಿವೆ ಎಂದು ಹೇಳಿದರು.
ಚಲನಚಿತ್ರ ಸಾಹಿತಿ ಎಂ.ಡಿ. ಹಾಷ್ಯಂ ಮಾತನಾಡಿ, ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಜಾತಿ, ಮತ, ಧರ್ಮದ ಬೇಧ ಮರೆತು ಎಲ್ಲರೂ ಸಾಮರಸ್ಯದಿಂದ ಬದುಕಬೇಕಿದೆ ಎಂದರು.
ತಾಪA ಮಾಜಿ ಸದಸ್ಯ ದೇವರಾಜೇಗೌಡ, ಮುಖಂಡರಾದ ಬಿ.ಜೆ. ರಾಮೇಗೌಡ, ಸುರೇಶ್, ಎಲ್.ಬಿ. ಕೃಷ್ಣ ಮಾತನಾಡಿದರು. ಮುಖಂಡರಾದ ಪುಟ್ಟಬಸಪ್ಪ, ರಾಮಣ್ಣ, ಕೇಶವೇಗೌಡ, ಚಂದ್ರಶೇಖರ್, ಜಮೀರ್ ಪಾಷಾ ಇತರರಿದ್ದರು.

Post a Comment

0 Comments