ರಾಮನಾಥಪುರ ಸುಕ್ಷೇತ್ರದ ಪ್ರಗತಿ ಪ್ರವಾಸಿ ತಾಣವಾಗಿ ರೂಪುಗೊಳ್ಳಬೇಕಿತ್ತು: ಎಂಟಿಕೆ

ಅರಕಲಗೂಡು: ಸಹಸ್ರಾರು ಭಕ್ತರು ಹಾಗೂ ಪ್ರವಾಸಿಗರ ತಾಣವಾಗಬೇಕಿದ್ದ ಸುಕ್ಷೇತ್ರ ರಾಮನಾಥಪುರ ಅಭಿವೃದ್ಧಿ ಕಾಣಬೇಕಿತ್ತು ಎಂಬ ಆಶಯವನ್ನು ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ ವ್ಯಕ್ತಪಡಿಸಿದರು.

ರಾಮನಾಥಪುರ ದಲ್ಲಿ ಕಾವೇರಿ ನದಿಗೆ ಬಾಗಿನ ಅರ್ಪಣೆಗೂ ಮುನ್ನ ಶ್ರೀ ರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡಿ,

ಪ್ರವಾಸಿ ತಾಣವಾಗಿ ರೂಪುಗೊಳ್ಳಬೇಕಿದ್ದ ಐತಿಹಾಸಿಕ ದೇವಾಲಯಗಳ ಖ್ಯಾತಿಯ ದಕ್ಷಿಣ ಕಾಶಿ ರಾಮನಾಥಪುರ ಪ್ರಗತಿ ಕಾಣದಾಗಿದೆ. ಅನೇಕ ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿದ್ದು ಅಭಿವೃದ್ಧಿ ಭಾಗ್ಯದಿಂದ ವಂಚಿತಗೊಂಡಿವೆ.

 ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದ್ದರೆ ನಾಡಿನ ವಿವಿಧೆಢಯಿಂದ ಬರುವ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಅನುಕೂಲ ಆಗುತ್ತಿತ್ತು. ನಾನು ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಈ ಕುರಿತು ಪ್ರಣಾಳಿ ಸಿದ್ದಪಡಿಸಿದ್ದೆ, ಮುಂದಿನ ದಿನಗಳಲ್ಲಿ ಜನರು ಆಶೀವರ್ದಿಸಿದರೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಅನೇಕ ಬೆಂಬಲಿಗರು, ಮುಖಂಡರು ಇದ್ದರು.

Post a Comment

0 Comments