ಅರಕಲಗೂಡು: ತಾಲೂಕಿನ ಪ್ರಭಾವಿ ಮುಖಂಡ ಮಾಜಿ ಸಚಿವ ಎ. ಮಂಜು ಶನಿವಾರ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರುವ ಮೂಲಕ ಕ್ಷೇತ್ರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅಖಾಡ ಸಿದ್ದಪಡಿಸಿಕೊಂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ. ಮಂಜು ಜೆಡಿಎಸ್‌ನ ಎ.ಟಿ. ರಾಮಸ್ವಾಮಿ ವಿರುದ್ದ ಸೋಲನುಭವಿಸಿದ್ದರು. ತದನಂತರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಬಿಜೆಪಿಗೆ ಜಿಗಿದು ಆ ಪಕ್ಷದಿಂದಲೇ ಸ್ಪರ್ಧಿಸಿದ್ದ ಎ. ಮಂಜು ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ವಿರುದ್ದವೂ ಪರಾಭವಗೊಂಡಿದ್ದರು. ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ಸುಳ್ಳು ಮಾಹಿತಿ ಸಲ್ಲಿಸಿದ್ದಾರೆಂದು ನ್ಯಾಯಲಯದಲ್ಲಿ ಮೊಕದ್ದಮೆ ಹೂಡಿದ್ದ ಎ. ಮಂಜು ಇದೀಗ ಜೆಡಿಎಸ್ ಪಕ್ಷವನ್ನೆ ಅಪ್ಪಿಕೊಂಡಿರುವುದು ರಾಜಕೀಯ ವಲಯದಲ್ಲಿ ಮುಜುಗರಕ್ಕೀಡಾಗುವಂತಾಗಿದೆ.
ಕಳೆದ ಲೊಕಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿದ್ದ ಎ. ಮಂಜು ಅವರನ್ನು ಪಕ್ಷ ನಿರ್ಲಕ್ಷ್ಯಿಸಿ ಮಂಡ್ಯ ಉಸ್ತುವಾರಿ ಹೊಣೆಯಿಂದ ಮುಕ್ತಿಗೊಳಿಸಿ ನೋಟಿಸ್ ನೀಡಿದ ನಂತರ ರಾಜಕೀಯವಾಗಿ ತೀವ್ರ ಹತಾಶ ಸ್ಥಿತಿಗೆ ತಲುಪಿದ್ದ ಎ. ಮಂಜು ಕಳೆದ ವರ್ಷ ಅರಕಲಗೂಡಿನಲ್ಲಿ ತನ್ನ ಬೆಂಬಲಿಗರ ಸಭೆ ಕರೆದು ಕಣ್ಣೀರು ಹಾಕಿದ್ದರು.
ಈ ಬೆಳವಣಿಗೆ ನಂತರ ಎ. ಮಂಜು ಕಾಂಗ್ರೆಸ್ ಸೇರಲು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ ತನ್ನ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದು ಅಧಿಕಾರ ಅನುಭವಿಸಿ ಕಾಂಗ್ರೆಸ್ ತೊರೆದ ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎ. ಮಂಜು ಅವರನ್ನು ಕಾಂಗ್ರೆಸ್ ಗೆ ಮರು ಸೇರ್ಪಡೆ ಮಾಡಿಕೊಳ್ಳಲು ಅಡ್ಡಗಾಲಾಗಿದ್ದರು. ಇಷ್ಟರಲ್ಲಾಗಲೇ ಕ್ಷೇತ್ರದಲ್ಲಿ ಡಾ. ದಿನೇಶ್ ಭೈರೇಗೌಡ, ಎಂ.ಟಿ. ಕೃಷ್ಣೇಗೌಡ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಎಂ.ಟಿ. ಕೃಷ್ಣೇಗೌಡ ಅವರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವ ಮೂಲಕ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಿ ರಾಜಕೀಯವಾಗಿ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿದ್ದರು. ಕೋಟಿ ಕುಳಗಳು ಕಾಂಗ್ರೆಸ್ ಪ್ರವೇಶಿಸಿದ್ದರಿಂದ ಎ. ಮಂಜು ಅವರಿಗೆ ಪಕ್ಷದ ವರಿಷ್ಠರು ಸಹ ಮಣೆ ಹಾಕಲು ಹಿಂದೇಟು ಹಾಕಿದರು. ಅನಿವಾರ್ಯವಾಗಿ ಎ. ಮಂಜು ತನ್ನ ರಾಜಕೀಯ ಕಡುವೈರಿಯಾಗಿದ್ದ ಜೆಡಿಎಸ್ ಸಖ್ಯ ಬೆಳೆಸಲು ಆಸಕ್ತಿ ತೋರಿದರು.
‘ಒಕ್ಕಲಿಗ ಸಮುದಾಯದ ನಾಯಕರಾಗಿ ಎಚ್.ಡಿ. ದೇವೇಗೌಡರು ಹೊರಹೊಮ್ಮಿದ್ದರು. ಹೀಗಾಗಿ ದೇವೇಗೌಡರನ್ನು ಹಿಂದಿಕ್ಕಿ ರಾಜಕೀಯವಾಗಿ ಸಮುದಾಯದ ಮತದಾರರನ್ನು ಒಲಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ಎ. ಮಂಜು, ಒಕ್ಕಲಿಗ ಸಮುದಾಯದ ಮುಖಂಡರು ಕಾರ್ಯಕರ್ತರ ಮುಂದೆ ಒಕ್ಕಲಿಗ ಗೌಡರು ದೇವೇಗೌಡರು ಮಾತ್ರ ಅಲ್ಲ ನಾನೂ ಕೂಡ ಗೌಡನೆ ಎನ್ನುತ್ತಾ, ಜಿಲ್ಲೆಯಲ್ಲಿ ದೊಡ್ಡಗೌಡರ ಕುಟುಂಬದ ವಿರುದ್ದ ತೊಡೆತಟ್ಟಿ ರಾಜಕಾರಣ ಮಾಡುತ್ತಿದ್ದ ಹಿರಿಯ ರಾಜಕಾರಣಿ ಎ. ಮಂಜು ಇದೀಗ ಯಾವ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಿದ್ದರೋ ಅದೇ ಪಕ್ಷದ ಹೊರೆ ಹೊತ್ತುಕೊಂಡಿರುವುದು ಕೂಡ ಸೋಜಿಗವೆನಿಸಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಕಾಲಿಗೆ ಬಿದ್ದು ರಾಜಕೀಯ ಚಾಣಾಕ್ಷತೆ ಮೆರೆದಿರುವುದು ರಾಜಕೀಯದಲ್ಲಿ ಯಾರೂ ಕೂಡ ಶ್ರತ್ರುಗಳಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಕ್ಷೇತ್ರದಲ್ಲಿ ರಾಜಕೀಯವಾಗಿ ನೆಲೆ ಇಲ್ಲದೆ ಪರಿತಪಿಸುತ್ತಿದ್ದ ಎ. ಮಂಜು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕಿಳಿಯಲು ತಯಾರಿ ನಡೆಸಿದ್ದರು. ಇದಕ್ಕಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರAತೆ ಕಳೆದೊಂದು ವರ್ಷದಿಂದ ಹಳ್ಳಿ ಹಳ್ಳಿ ಸುತ್ತುತ್ತಿದ್ದರು. ಆದರೆ ಕ್ಷೇತ್ರದಲ್ಲಿ ಪಕ್ಷಗಳ ಆಸರೆ ಇಲ್ಲದೆ ಗೆಲ್ಲುವುದು ಕಷ್ಟ ಸಾಧ್ಯ ಎನ್ನುವುದನ್ನರಿತು ಎ. ಮಂಜು ರಾಜಕೀಯ ಅಧಿಕಾರಕ್ಕಾಗಿ ಜೆಡಿಎಸ್‌ತ್ತ ಒಲವು ತೋರಿದರು. ಶಾಸಕ ಎ.ಟಿ. ರಾಮಸ್ವಾಮಿ ಪಕ್ಷದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದರಿAದ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಪ್ರಭಾವಿ ಮುಖಂಡನ ಅವಶ್ಯಕತೆ ಇದ್ದ ಕಾರಣಕ್ಕಾಗಿ ಹಾಗೂ ಜಿಲ್ಲೆಯಲ್ಲಿ ಸಂಘಟನೆ ದೃಷ್ಟಿಯಿಂದ ಪಕ್ಷದ ವರಿಷ್ಠರು ಸಹ ಎ. ಮಂಜು ಸೇರ್ಪಡೆಗೆ ಹಸಿರು ನಿಶಾನೆ ತೋರಿದರು. ಕಳೆದ ವಾರ ಸ್ವಗ್ರಾಮ ಹನ್ಯಾಳು ಗ್ರಾಮದಲ್ಲಿ ಬೆಂಬಲಿಗರ ಸಭೆ ಕರೆದಿದ್ದ ಎ. ಮಂಜು ಜೆಡಿಎಸ್ ಎಂದು ಸ್ವಯಂ ಘೋಷಿಸಿಕೊಂಡು ಪಕ್ಷದಿಂದ ನನ್ನನ್ನು ಗೆಲ್ಲಿಸುವಂತೆ ಬೆಂಬಲಿU್ಪರಿAದ ಸಾಮೂಹಿಕವಾಗಿ ಪ್ರತಿಜ್ಞೆ ಕೂಡ ಮಾಡಿಸಿದ್ದರು. ಸದ್ಯದಲ್ಲೇ ಪಕ್ಷಕ್ಕೆ ಅಧಿಕೃತವಾಗಿ ಸೇರುವುದಾಗಿ ಘೋಷಿಸಿದ್ದರು.
ಎ. ಮಂಜು ಅವರೊಂದಿಗೆ ತಾಲೂಕಿನ ಅದಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಸಿಂಗನಕುಪ್ಪೆ ಅವರು ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇದ್ದರು.
0 Comments