ಅರಕಲಗೂಡು: ಕ್ರೀಡೆಗಳು ಜಾತ್ರೆಗಳ ಮೆರಗು ಹೆಚ್ಚಿಸುವಲ್ಲಿ ಸಹಕಾರಿಯಾಗುವೆ ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಹೇಳಿದರು.
ಗುಡುಗಳಲೆ ಗ್ರಾಮದಲ್ಲಿ ಜಯದೇವ ಜಾತ್ರೆ ಪ್ರಯುಕ್ತ ಎಂ.ಆರ್. ಡೆವಲಪರ್ ವತಿಯಿಂದ ಹಮ್ಮಿಕೊಂಡ್ಡಿದ್ದ ಥ್ರೋ ಬಾಲ್ ಎಸೆತ ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಎಂ.ಆರ್. ಡೆವಲಪರ್ ಮದಲಾಪುರ ಮಂಜುನಾಥ್ ಅವರ ಸಹಕಾರದಿಂದ ನಡೆದ ಕಬ್ಬಡ್ಡಿ, ಥ್ರೋ ಬಾಲ್ ಪಂದ್ಯಾವಳಿ ಜಾತ್ರೆ ಕಳೆ ಹೆಚ್ಚಿಸಿತಲ್ಲದೇ ಸಾವಿರಾರು ಜನರು ಪಂದ್ಯಾವಳಿ ವೀಕ್ಷಿಸಿ ಸಂತಸ ಪಟ್ಟರು. ಇಂತಹ ಕ್ರೀಡೆಗಳಿಗೆ ಪ್ರತಿಯೊಬ್ಬರ ಪ್ರೋತ್ಸಾಹ ಮುಖ್ಯವಾಗಿದೆ ಎಂದರು.
ಬಹುಮಾನ ದಾನಿ ಮದಲಾಪುರ ಗ್ರಾಮದ ಎಂ.ಆರ್. ಮಂಜುನಾಥ್ , ಕ್ರೀಡಾ ಕೂಟದ ಅಧ್ಯಕ್ಷೆ ಚೈತ್ರ, ವೀರೇಂದ್ರ, ಅಶೋಕ್, ಪುನೀತ್ ತಾಳೂರು, ಜಾತ್ರಾ ಸಮಿತಿ ಅಧ್ಯಕ್ಷ ವಿನಯ್, ಗೋವಿಂದು, ಗ್ರಾಪಂ ಅಧ್ಯಕ್ಷೆ ಮಾದೇವಿಮ್ಮ, ಬಸವರಾಜು, ಬಸವಯ್ಯ, ಸುರೇಶ್, ಮೂರ್ತಿ, ಭರತ್, ಮಹೇಂದ್ರ, ಲೋಕೇಶ್ ಇತರರಿದ್ದರು.
.
0 Comments