ಅರಕಲಗೂಡು: ಪಟ್ಟಣದ ಶಿಕ್ಷಕರ ಭವನದಲ್ಲಿ ಶುಕ್ರವಾರ ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್ ಅವರಿಗೆ ಜನರು ಮುಗಿಬಿದ್ದು ಸನ್ಮಾನಗಳ ಸುರಿಮಳೆಗೈದರು.
ಮುಂಬಡ್ತಿ ಪಡೆದು ಬೇರೆಡೆಗೆ ವರ್ಗಾವಣೆ ಹೊಂದಿದ ಶ್ರೀನಿವಾಸ್ ಅವರಿಗೆ ವಿವಿಧ ಸಂಘ, ಸಂಸ್ಥೆಗಳು, ರೈತರು ಮತ್ತು ದಲಿತ ಸಂಘಟನೆಗಳು, ನೌಕರ ವರ್ಗದವರು ಹಾಗೂ ಸಾರ್ವಜನಿಕರು ವೇದಿಕೆ ಮೇಲೆ ನೂಕು ನುಗ್ಗಲಿನಲ್ಲಿ ಧಾವಿಸಿ ಶಾಲು ಹೊದಿಸಿ ಹಾರ ಹಾಕಿ ನಾಗರಿಕ ಸನ್ಮಾನ ಮಾಡಿ ಅಭಿಮಾನದ ಹೊಳೆ ಹರಿಸಿದರು.
ತಹಸೀಲ್ದಾರ್ ಶ್ರೀನಿವಾಸ್ ವಾರ ಕಾರ್ಯ ಸಾಧನೆಗಳ ಬಿತ್ತಿಪತ್ರ ಹಿಡಿದು ಬಿಎಸ್ ಪಿ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದಿಂದ ಅನಕೃ ವೃತ್ತ ಮಾರ್ಗವಾಗಿ ಮೆರವಣಿಗೆಯಲ್ಲಿ ಸಾಗಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಶಾಸಕ ಎ.ಟಿ. ರಾಮಸ್ವಾಮಿ, ಪಪಂ ಉಪಾಧ್ಯಕ್ಷೆ ರಶ್ಮಿ, ದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಬಿಇಒ ದೇವರಾಜು, ತಾಲೂಕು ಕೃಷಿ ಸಹಾಯಕ ನಿರ್ದೇಶಕ ರಮೇಶ್ ಕುಮಾರ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ನಿರ್ದೇಶಕ ಮುತ್ತಿಗೆ ರಾಜೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ತಾಲೂಕಿನ ವಿವಿಧೆಡೆಯಿಂದ ಬಂದಿದ್ದ ಜನರು ಕಿಕ್ಕಿರಿದು ಸೇರಿದ್ದರು.
0 Comments