ಅರಕಲಗೂಡು: ತಾಲೂಕು ಕುರುಬರ ಸಂಘದ ಅಧ್ಯಕ್ಷ ತಿಪ್ಪೇಗೌಡರ ನಿಧನದ ಹಿನ್ನಲೆಯಲ್ಲಿ ಶನಿವಾರ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
ರಾಮನಾಥಪುರದ ಕನಕ ಭವನದಲ್ಲಿ ನಡೆದ ಸಭೆಯಲ್ಲಿ ಸಮಾಜದ ಮುಖಂಡರು, ಗಣ್ಯರು ತಿಪ್ಪೇಗೌಡರ ಆತ್ಮಕ್ಕೆ ಶಾಂತಿ ಕೋರಿ ಕೆಲಹೊತ್ತು ಮೌನಾಚರಿಸಿ ಸಂತಾಪ ಸೂಚಿಸಿದರು.
ರಾಮನಾಥಪುರ ಗ್ರಾಪಂ ಅಧ್ಯಕ್ಷರಾಗಿದ್ದ ವೇಳೆ ಬಸ್ ನಿಲ್ದಾಣ ಸರ್ಕಲ್‌ನಲ್ಲಿ ವ್ಯಾಪಾರಿ ಮಳಿಗೆಗಳು ಹಾಗೂ ಪ್ರಸಿದ್ಧ ಜಾನುವಾರುಗಳ ವಾರದ ಸಂತೆ ನಿರ್ಮಾಣಕ್ಕೆ ದೂರದೃಷ್ಟಿ ಇಟ್ಟುಕೊಂಡು ತಿಪ್ಪೇಗೌಡ ಅವರು ಅವಿರತವಾಗಿ ಶ್ರಮಿಸುವ ಮೂಲಕ ಊರಿನ ಅಭಿವೃದ್ಧಿಗೆ ಕಾರಣರಾಗಿದ್ದರು ಎಂದು ಸ್ಮರಿಸಿದರು.
ಮುಖಂಡರಾದ ಮುತ್ತಿಗೆ ರಮೇಶ್, ಕೂಡಲೂರು ಮೊಗಣ್ಣ, ಶಿವಕುಮಾರ್, ಮಹದೇಶ್, ನಾಗರಾಜ್, ಮಹೇಶ್, ಮಲ್ಲೇಶ್, ಮಹಾದೇವು, ಸಿದ್ದರಾಮೇಗೌಡ ಮುಂತಾದವರು ಪಾಲ್ಗೊಂಡಿದ್ದರು.
0 Comments