ಹೊಗೆಸೊಪ್ಪು ಬೆಳೆಗಾರರ ಬೇಡಿಕೆ ಈಡೇರಿಸುವಂತೆ ಪ್ರತಿಭಟಿಸಿ ಮನವಿ

ಅರಕಲಗೂಡು: ಹೊಗೆಸೊಪ್ಪು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ಹಾಗೂ ರೈತರು ರಾಮನಾಥಪುರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ರಾಮನಾಥಪುರ ಮುಖ್ಯ ಸರ್ಕಲ್‌ನಿಂದ ಪ್ರತಿಭಟನಾ ಮೆರವಣಿಗೆ ಹೊರಟು ತಂಬಾಕು ಮಾರುಕಟ್ಟೆ ಕಚೇರಿ ಮುಂದೆ ಧರಣಿ ಕುಳಿತ ಕಾರ್ಯಕರ್ತರು ಬೆಳೆಗಾರರ ಬೇಡಿಕೆಗಳನ್ನು ಬಗೆಹರಿಸುವಂತೆ ಘೋಷಣೆ ಕೂಗಿದರು.

ಅತಿವೃಷ್ಟಿಯಿಂದಾಗಿ ಈ ಬಾರಿ ಹೊಗೆಸೊಪ್ಪು ಇಳುವರಿ ಕುಂಠಿತಗೊAಡಿದ್ದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ತಂಬಾಕಿಗೆ ಉತ್ತಮ ಬೆಲೆ ನೀಡಬೇಕು. ಮಾರಾಟದ ಉತ್ಪನ್ನಕ್ಕೆ ವಿಧಿಸುವ ದಂಡ ಕೈಬಿಡಬೇಕು. ಶೀಘ್ರವೇ ಹರಾಜು ಪ್ರಕ್ರಿಯೆ ಆರಂಭಿಸಬೇಕು. ಜಿಎಸ್‌ಟಿ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಂಬಾಕು ಮಾರುಕಟ್ಟೆ ಪ್ರಾದೇಶಿಕ ವ್ಯವಸ್ಥಾಪಕ ಲಕ್ಷö್ಮಣ್ ರಾವ್, ಹರಾಜು ಅಧೀಕ್ಷಕರಾದ ಸಿದ್ದರಾಮು ಡಾಂಗೆ, ಶಂಭುಲಿAಗೇಗೌಡ, ಬಿರಜ್ ಭೂಷನ್, ನಿವೇಶ್ ಕುಮಾರ್, ಪಾಂಡೆ, ಐಸಾಕ್ ಸ್ವರ್ಣ ದತ್ ಅವರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮನವಿ ಆಲಿಸಿದರು. ಬೆಳೆಗಾರರ ಬೇಡಿಕೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ರೈತ ಸಂಘದ ಮುಖಂಡರಾದ ಯೋಗಣ್ಣ, ಹೊನಗಾನಹಳ್ಳಿ ಜಗದೀಶ್, ಮುಗಳೂರು ಕೃಷ್ಣೇಗೌಡ, ರವಿ, ವೀರೇಂದ್ರ, ಕಾರ್ತಿಕ್, ಪರಮೇಶ್, ಲೋಕೇಶ್, ಮಹೇಶ್, ರಾಜೇಗೌಡ, ಜಗನ್ನಾಥ್, ಮಲ್ಲೇಶ್ ಹಾಗೂ ಕೆಆರ್‌ಎಸ್ ಅಧ್ಯಕ್ಷ ಕೇಶವಮೂರ್ತಿ, ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
.

Post a Comment

0 Comments