ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣೇಗೌಡರನ್ನು ಬೆಂಬಲಿಸುವಂತೆ ರಾಮಸ್ವಾಮಿಯವರಿಗೆ ಮನವಿ?

ಅರಕಲಗೂಡು: ಇದೀಗ ಎಲ್ಲೆಡೆ ಚುನಾವಣೆಯದೆ ಸದ್ದು ಗದ್ದಲ, ಅದರಲ್ಲೂ ಅರಕಲಗೂಡು ಕ್ಷೇತ್ರದ‌ತ್ತ ಗಮನ ಹೆಚ್ಚಿನದಾಗಿ ಕೇಂದ್ರೀಕೃತವಾಗಿದೆ. 

ಅಂತೆಯೇ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ತಮ್ಮ ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಬದಲಾಗುತ್ತಿದ್ದಾರೆ ಅಂತೆಯೇ ಅರಕಲಗೂಡು ಕ್ಷೇತ್ರದ ಹಾಲಿ ಶಾಸಕ ಎ ಟಿ ರಾಮಸ್ವಾಮಿಯವರು ಕಾಂಗ್ರೆಸ್ ಪಕ್ಷ ಸೇರಲು ಉತ್ಸುಕರಾಗಿದ್ದು ತಮ್ಮ ಅದೃಷ್ಟ ಪರೀಕ್ಷೆ ನಡೆಸಲು ಕಾಂಗ್ರೆಸ್ ಸೇರುತ್ತಿದ್ದಾರೆ ಎನ್ನಲಾಗುತ್ತಿದೆ .ಆದರೆ ಇನ್ನೊಂದೆಡೆ ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿರುವ ತಾಲ್ಲೂಕಿನ ಕಾಂಗ್ರೆಸ್ ಮುಖಂಡರಾದ ಎಂ ಟಿ ಕೃಷ್ಣೇಗೌಡರು ಈ ಬಾರಿಯ ಅರಕಲಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆ ಎನ್ನಲಾಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಅರಕಲಗೂಡು ಕ್ಷೇತ್ರದಲ್ಲಿ ಆಂತರಿಕ ಸಮೀಕ್ಷೆ ನಡೆಸಿದ್ದು ಈ ಸಮೀಕ್ಷೆಯಲ್ಲಿ ಎಂ.ಟಿ. ಕೃಷ್ಣೇಗೌಡರ ಅವರ ಪರವಾಗಿ ತಾಲ್ಲೂಕಿನ  ಮತದಾರರು ಹೆಚ್ಚಿನ ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ .ಇದನ್ನು ಅರಿತ ಸಿದ್ದರಾಮಯ್ಯ ಅವರು ಕ್ಷೇತ್ರದ ಹಾಲಿ ಶಾಸಕ ಎ.ಟಿ.ರಾಮಸ್ವಾಮಿಯವರಿಗೆ 2023 ರ ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಅರಕಲಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬರುವಂತೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅರಕಲಗೂಡು ಕ್ಷೇತ್ರದ ಎಂ ಟಿ ಕೃಷ್ಣೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ,ಮುಂದಿನ ದಿನಗಳಲ್ಲಿ ಎ ಟಿ ರಾಮಸ್ವಾಮಿ ಅವರಿಗೆ ವಿಧಾನ ಪರಿಷತ್ ನಂತಹ ಸ್ಥಾನಮಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ ಎನ್ನಲಾಗಿದ್ದು .ಆದ್ದರಿಂದ ಎ ಟಿ ರಾಮಸ್ವಾಮಿಯವರು ಎಂಟಿ ಕೃಷ್ಣೇಗೌಡರ ಪರವಾಗಿ ಮತಯಾಚಿಸಿ ಅವರನ್ನು ಗೆಲ್ಲಿಸಬೇಕೆಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ .
ಈಗಾಗಲೇ ಪಕ್ಷದ ವರಿಷ್ಠರಿಂದ ತಮಗೆ ಟಿಕೆಟ್ ಸಿಗಲಿದೆ ಎಂದು ಖಚಿತಪಡಿಸಿಕೊಂಡಿರುವ ಎಂಟಿ ಕೃಷ್ಣೇಗೌಡರು ತಾಲ್ಲೂಕಿನಾದ್ಯಂತ ಅಬ್ಬರದ ಪ್ರಚಾರ ನಡೆಸುತ್ತಿದ್ದು ಮತದಾರರ ಮನವೊಲಿಸುತ್ತಿದ್ದಾರೆ.

Post a Comment

0 Comments