ಅಶ್ವತ್ ನಾರಾಯಣ ಟಮಟಮ ನನ್ನ ಬಗ್ಗೆ ಎಚ್ಚರಿಕೆಯಿಂದ ಮಾತನಾಡಲಿ ಎಂದು ಕೆಂಡಕಾರಿದ ಎಚ್.ಡಿ.ಕೆ

ಅರಕಲಗೂಡು: ರಾಜ್ಯದ ಬೊಕ್ಕಸ ಲೂಟಿ ಹೊಡೆದು ಅಧಿಕಾರದ ಲಾಲಾಸೆಯಲ್ಲಿ ಮುಳುಗಿರುವ ಸಚಿವ ಅಶ್ವತ್ ನಾರಾಯಣ್ ನನ್ನ ವಿರುದ್ದ ಎಚ್ಚರಿಕೆಯಿಂದ ಮಾತನಾಡುವುದನ್ನು ಕಲಿಯದಿದ್ದರೆ ಜನರೇ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ತಾಲೂಕಿನ ಜಿಟ್ಟೇನಹಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀ ವೀರಾಂಜನೇಯಸ್ವಾಮಿ ಹಾಗೂ ಮಾರಮ್ಮ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಶ್ವತ್ ನಾರಾಯಣ್ ಟಮಟಮ ಹೇಳಿಕೆಗೆ ಕೆಂಡಾಮAಡಲವಾಗಿ, ಅವರ ದುರಹಂಕಾರಕ್ಕೆ ಜನ ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ. ನಾನು ವಿಧಾನಸೌಧದಲ್ಲಿ ಯಾವ ರೀತಿ ಮಾತನಾಡಬೇಕು ಎಂದು ಇವರಿಂದ ಕಲಿಯಬೇಕಿಲ್ಲ. ವಿಧಾನಸೌಧಲ್ಲಿ ನಾನು ಬಂದಾಗ ಯಾವ ರೀತಿ ಸದನ ಹಾಳುಮಾಡುತ್ತೀರಿ ಎಂಬುದನ್ನ ಗಮನಿಸಿದ್ದೇನೆ. ನಾವು ಸದನ್ನಕ್ಕೆ ಬರೋದು ಡಿ.ಎ ಡಿಎಬಿಲ್ ತೆಗೆದುಕೊಳ್ಳೋದಕ್ಕಲ್ಲ. ನಿಮ್ಮ ಅಧ್ಯಕ್ಷರೇ ನನ್ನ ಬಗ್ಗೆ ಯಾವ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕಡತದಲ್ಲೇ ಇದೆ ತೆಗೆದು ನೋಡಪ್ಪ ಎಂದು ಏಕವಚನದಲ್ಲಿ ವಾಗ್ದಾಳಿದರು.

ನಾನು ಇವರಿಂದ ಕಲೊಯಬೇಕಾಗಿಲ್ಲ. ನಾನು ನಿನ್ನತರ ನಕಲಿ ಸರ್ಟಿಫಿಕೇಟ್ ಸೃಷ್ಟಿಮಾಡಿ ದಂದೆ ನಡೆಸಿ ಬಂದಿಲ್ಲ. ಎಲ್ಲಿ ತನಿಖೆ ಆಗುತ್ತೋ ಅಂತಾ ಕಾರ್ಪೊರೇಷನ್ ಕಚೇರಿಯಲ್ಲಿ ಪಟಾಲಂ ಜೊತೆ ರಾತ್ರೋರಾತ್ರಿ ಸುಡುವ ಕೆಲಸ ಮಾಡಿದಲ್ಲಾ, ನನ್ನ ಸರ್ಕಾರ ತೆಗೆಯಬೇಕಾದರೆ ಲಾಟರಿ ದಂದೆ ಮಾಡೋರು, ಕ್ರಿಕೆಟ್ ಬೆಟ್ಟಿಂಗ್ ದಂದೆ ಮಾಡೋರು, ಬೆಂಗಳೂರಿನಲ್ಲಿ ಲೂಟಿ ಹೊಡೆಯೋರ ಜೊತೆ ಸೇರಿ ಏನೇನು ನಡೆಸಿದ್ದೀಯ ನನಗೆ ಗೊತ್ತಿಲ್ವಾ. ನನ್ನ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆ ಇರಲಿ, ಲೂಟಿ ಹೊಡೆದುಕೊಂಡು ರಾಜ್ಯ ಹಾಳು ಮಾಡುತ್ತಿದ್ದಾನೆ. ನನ್ನ ಪರ್ಫಾಮೆನ್ಸ್ ಬಗ್ಗೆ ಚರ್ಚೆ ಮಾಡುವ ಯೋಗ್ಯತೆ ನಿನಗೆಲ್ಲಿದೆ. ನಾಲಿಗೆ ಮೇಲೆ ನಿಗಾ ಇಟ್ಟು ಮಾತನಾಡಲಿ ಎಂದು ಟಾಂಗ್ ನೀಡಿದರು.

ಜೆಡಿಎಸ್ ನ ಕೆಲ ಶಾಸಕರು ಪಕ್ಷ ಬಿಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ನನಗೆ ಅದರ ಬಗ್ಗೆ ಚಿಂತೆ ಆತಂಕವಿಲ್ಲ ಎಲ್ಲಿಯವರೆಗೆ ಪಕ್ಷವನ್ನ ಬೆಳಸುವ ಕಾರ್ಯಕರ್ತರಿದ್ದಾರೆ ಅಲ್ಲಿಯವರೆಗೂ ಪಕ್ಷವನ್ನ ಉಳಿಸಿಕೊಳ್ಳುತ್ತಾರೆ. ವ್ಯಕ್ತಿಗಳ ಬಗ್ಗೆ ಚರ್ಚೆ ಮಾಡಲು ನನಗೆ ಆಸಕ್ತಿಯಿಲ್ಲ, ಪಕ್ಷದ ಬಗ್ಗೆ ಗೌರವ ಋಣ ಇರುವಂತಹವರು ಸರಿಯಾಗಿ ನಡೆದುಕೊಳ್ಳೋದು ಅವರಿಗೆ ಬಿಟ್ಟಿದ್ದು. ಅದು ಅವರಲ್ಲೇ ಇಲ್ಲದಿರದಿದ್ದರೆ ನಾನೇನು ಮಾಡಲಿಕ್ಕಾಗುತ್ತದೆ ಎಂದರು.
ಶಾಸಕ ಜಿ.ಟಿ. ದೇವೇಗೌಡರ ಬಗ್ಗೆ ಈಗಾಗಲೇ ನಾನೇ ಮಾತನಾಡಿದ್ದೇನೆ, ಅವರೂ ಮಾತನಾಡಿದ್ದಾರೆ. ಕಾರ್ಯಕರ್ತರು ಜನಾಭಿಪ್ರಾಯದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಅಲ್ಲಿಯವರೆಗೂ ಕಾದು ನೋಡೋಣ ಎಂದರು.

ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ನಿಮ್ಮ ಸಂಪರ್ಕ ಮಾಡಿದ್ದಾರ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಗೊತ್ತಿಲ್ಲ ನನ್ನ ಫೋನ್ ನಂಬರ್ ಅವರಿಗೆ ಮರೆತು ಹೋಗಿದೆ ಎಂದು ವ್ಯಂಗ್ಯವಾಡಿದರು.

ಮುಂದಿನ ವಿಧಾಸಭಾ ಚುನಾವಣೆಯಲ್ಲಿ ಜೆಡಿಎಸ್ ಏನು ಎಂಬುದನ್ನ ತೋರಿಸುತ್ತೇವೆ. ಬಿಜೆಪಿ ಎಲ್ಲಿರುತ್ತದೆ ಎಂಬುದನ್ನ ಕಾದು ನೋಡುವಿರಂತೆ, ಈಗ ದುಡ್ಡಿನ ಮದದಲ್ಲಿರುವ ಅಶ್ವತ್ ನಾರಾಯಣ್‌ಗೆ ಹೇಳುತ್ತೇನೆ, ಮುಂದೆ ಇದಕ್ಕೆಲ್ಲಾ ಪ್ರಾಯಶ್ಚಿತ್ತ ಅನುಭವಿಸುವ ಕಾಲ ಬರುತ್ತದೆ. ಕೆಲವು ಕಡೆ ಯಾರನ್ನ ಮುಖ್ಯಮಂತ್ರಿ ಮಾಡಬೇಕು ಎಂದು ಹಿಂದುತ್ವದ ಸಂಪ್ರದಾಯದAತೆ ಹುಡುಕಾಡ ನಡೆಯುತ್ತಿದೆ. ಅದೇ ನಮ್ಮ ರಾಜ್ಯಕ್ಕೆ ಬಂದಿರುವ ದುರ್ಗತಿ. ಇವತ್ತು ಮುಖ್ಯಮಂತ್ರಿ ಸರಿಯಾದ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೆ ಎಂಬ ಭಾವನೆ ಜನರಲ್ಲಿ ಇಲ್ಲ. ಇದಕ್ಕೆ ಕಾರಣ ಬಿಜೆಪಿಯ ನಡವಳಿಕೆಗಳು ಮತ್ತು ಕಾಣದ ಶಕ್ತಿಗಳ ನಡವಳಿಕೆ ಯಾವವುದೋ ರಿಮೋಟ್‌ನಲ್ಲಿ ನಡೆಯುತ್ತಿರೋ ಸರ್ಕಾರ ಇದು, ಬೆರೆ ಬಂದಾಗಲೇ ಈ ಸರ್ಕಾರಕ್ಕೆ ತಲೆನೋವು ಶುರುವಾಗೋದು, ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ 40 ಜನ ಹೈದರಾಬಾದ್‌ಗೆ ಹೋಗಿ ಕುಳಿತಿದ್ದರು. ಸುತ್ತೂರು ಮಠದಲ್ಲಿ ಯೋಗ ಮಾಡಿಕೊಂಡು ಕುಳಿತಿದ್ದರು. ಇವರಿಗೆ ಜನಗಳ ಸಮಸ್ಯೆಗಿಂತ ಚೇರು ಮತ್ತು ಸರ್ಕಾರ ಉಳಿಸಿಕೊಳ್ಳುವುದೇ ಮುಖ್ಯವಾಗಿದೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದ ಅನಾಗರಿಕ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

Post a Comment

0 Comments