ಮನುಷ್ಯರ ಮೇಲೆರಗಿ ಅನಾಹುತ ಬಂದೊದಗುವ ಮುನ್ನ ಚಿರತೆ ಸೆರೆ ಹಿಡಿಯಲು ಯೋಗಾರಮೇಶ್ ಒತ್ತಾಯ

ಅರಕಲಗೂಡು: ಚಿರತೆ ಸುತ್ತಾಟಕ್ಕೆ ಜನರಲ್ಲಿ ಜೀವಭಯ ಮನೆ ಮಾಡಿದೆ, ಇದರ ಸೆರೆಗೆ ತಕ್ಷಣ ಮುಂದಾಗಬೇಕು ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಚ್. ಯೋಗಾರಮೇಶ್ ಆಗ್ರಹಪಡಿಸಿದರು.

ತಾಲೂಕಿನ ಕಸಬಾ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ಕರು ಮೇಲೆ ಚಿರತೆ ದಾಳಿ ಮಾಡಿದ ಸ್ಥಳಕ್ಕೆ ಹಾಸನ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಹೆಚ್.ಯೋಗಾರಮೇಶ್ ಭೇಟಿ ನೀಡಿ ಮಾತನಾಡಿ ಜಗದೀಶ್ ಎಂಬುವರ ಮನೆಯ  ಕರುವಿನ‌ ಮೇಲೆ ಬೆಳಗಿನ ಜಾವ ಚಿರತೆ ದಾಳಿ ಮಾಡಿದ್ದು ಕರುವನ್ನು ಕೊಂದು ತಿಂದು ಹೋಗಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. 

ಇದೇ ರೀತಿಯಲ್ಲಿ ಕಳೆದ ಒಂದು ವಾರದಿಂದ ಹೊನ್ನವಳ್ಳಿ ದೊಡ್ಡಕೊಪ್ಪಲು, ಗರಿಘಟ್ಟ ಇತರೆ ಕಡೆಯಲ್ಲೂ ಸಾಕುನಾಯಿ, ಆಡು, ಕುರಿಗಳು ಮತ್ತು ಕರುಗಳ‌ ಮೇಲೆ ದಾಳಿ ಮಾಡಿ ಕೊಂದು ತಿನ್ನುತ್ತಿದ್ದು ಬೈಚನಹಳ್ಳಿ, ವಡಕೆಕಟ್ಟೆ, ದೇವರಹಳ್ಳಿ, ಗರಿಘಟ್ಟ, ಶಣವಿನಕುಪ್ಪೆ, ನೈಗೆರೆ, ಹೊನ್ನವಳ್ಳಿ ಸುತ್ತಮುತ್ತಲಿನ ಇತರೆ ಗ್ರಾಮಗಳಲ್ಲಿಯೂ ಆತಂಕ ಹೆಚ್ಚಾಗಿದೆ.

ಕಳೆದ ಒಂದು ವಾರದಿಂದ ಚಿರತೆ ದಾಳಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಪ್ರಾಣಿಗಳ ಮೇಲೆ ಪದೇ ಪದೇ ಚಿರತೆ ದಾಳಿ ಮಾಡುತ್ತಿದ್ದು ಮುಂದೆ ಮನುಷ್ಯರ ಮೇಲೂ ದಾಳಿ ಮಾಡುವ ಎಲ್ಲಾ ಸಾಧ್ಯತೆ ಇದೆ. ಯಾವುದೇ ಜೀವಕ್ಕೆ ಅನಾಹುತ ಆದರೆ ಬೆಲೆ ಕಟ್ಟಕು ಅಸಾಧ್ಯ. ಇದರಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಘಟನೆ ನಡೆದ ಸ್ಥಳಕ್ಕೆ  ಆರ್.ಎಫ್.ಓ, ಡಿ.ಎಫ್.ಓ ಸೇರಿದಂತೆ ಉನ್ನತ ಅಧಿಕಾರಿಗಳು ಭೇಟಿ‌ ನೀಡಿ ಸೂಕ್ತ ಕ್ರಮ ಕೈಗೊಂಡಿಲ್ಲ.

ಅರಣ್ಯ ಇಲಾಖೆಯವರು ಚಿರತೆ ದಾಳಿ ಮಾಡಿದ ಕಡೆಯಲ್ಲಿ ಮಾತ್ರ ಬೋನು ಇಡುತ್ತಿದ್ದಾರೆ. ದಾಳಿ‌ಮಾಡಿದ ಕಡಗೆ ಬಂದು ಬೋನು ಇಟ್ಟರೆ ಚಿರತೆ ಹಿಡಿಯಲು ಸಾಧ್ಯವಿಲ್ಲ. ಚಿರತೆ ನಿರಂತರವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುತ್ತಾ ಇದೆ.  ಚಿರತೆ ಹಿಡಿಯುವ ನುರಿತ ತಜ್ಞರ ತಂಡ ‌ಕರೆಸಿ, ಚಿರತೆಯನ್ನು ಪತ್ತೆಹಚ್ಚಿ ಆದಷ್ಟು ಬೇಗ ಚಿರತೆ ಹಿಡಿದು ಮುಂದೆ ಆಗುವ ಅನಾಹುತವನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಚಿಕ್ಕನಹಳ್ಳಿ ಗ್ರಾಮಸ್ಥರಾದ ಜಗದೀಶ್, ಯೋಗೇಶ್, ರಾಮೇಗೌಡ, ಮಂಜುನಾಥ್, ಸಂತೋಷ, ನಂಜುಂಡ ಇತರರು ಹಾಜರಿದ್ದರು.

Post a Comment

0 Comments