ಅರಸೀಕಟ್ಟೆಯಮ್ಮ ಸಮಿತಿ ಹಣದ ದಂದೆ ನಡೆಸುತ್ತಿಲ್ಲ; ದೇವರ ಸನ್ನಿಧಿಯಲ್ಲಿ ಎ. ಮಂಜು ಹೇಳಿಕೆ ಸುಳ್ಳು

ಅರಕಲಗೂಡು: ತಾಲೂಕಿನ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿಯನ್ನು ಕಾನೂನು ಚೌಕಟ್ಟಿನಲ್ಲಿ ರಚಿಸಲಾಗಿದೆ. ಮಾಜಿ ಸಚಿವ ಎ. ಮಂಜು ದೇವಸ್ಥಾನ ಸನ್ನಿದಿಯಲ್ಲಿ ನಿಂತು ಹಣದ ದಂದೆ ನಡೆಸುತ್ತಿರುವ ಸುಳ್ಳು ಹೇಳಿಕೆ ಬಾಲಿಶತನದಿಂದ ಕೂಡಿದೆ ಎಂದು ಸಮಿತಿ ಕಾರ್ಯದರ್ಶಿ ಕೃಷ್ಣೇಗೌಡ ತಿರುಗೇಟು ನೀಡಿದರು.

ಸುಕ್ಷೇತ್ರದ ಅಭಿವೃದ್ಧಗೆ ದೇವಾಲಯ ಸಮಿತಿ ಶ್ರಮಿಸುತ್ತಿದೆ. ಎ. ಮಂಜು ಶಾಸಕರಾಗಿದ್ದಾಗಲೂ ಸಮಿತಿ ಇತ್ತು. ಆಗ ಅಭಿವೃದ್ಧಿ ಪಡಿಸಲು  ಅವರಿಗೆ ಸಾಧ್ಯವಾಗಲಿಲ್ಲ. ಇದೀಗ ಕೆರೆ ಏರಿ ವಿಸ್ತರಿಸಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಅನೈರ್ಮಲ್ಯ ಹೋಗಲಾಡಿಸಿ ದೇವಸ್ಥಾನ ಸನ್ನಿಧಿಯ ಪಾವಿತ್ರ್ಯತೆ ಕಾಪಾಡಲಾಗಿದೆ. ಸಮಿತಿ ನಯಾ ಪೈಸೆ ದುರುಪಯೋಗ ಪಡಿಸಿಕೊಂಡಿಲ್ಲ. ದೇವರ ಸನ್ನಿದಿಯಲ್ಲಿ ನಿಂತು ಹಸಿ‌ ಸುಳ್ಳು ಹೇಳುವ ಎ. ಮಂಜು ಮಾಜಿ ಸಚಿವರಾಗಿದ್ದುಕೊಂಡು ಜನರ ಮುಂದೆ ಇನ್ನೆಷ್ಟು ಸುಳ್ಳು ಹೇಳಿಕೆ ನೀಡಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಬಾಲಿಶತನದ ಹೇಳಿಕೆ ನೀಡಿದರೆ ಜನರ ವಿರೋಧ ಎದುರಿಸಬೇಕಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿಬಎಚ್ಚರಿಕೆ ನೀಡಿದರು.

ಹಂದಿ ಮತ್ತಿತರ ಮಾರಾಟದ ಅಂಗಡಿಗಳ ಬಾಡಿಗೆ ವಿಧಿಸುವ ಅಧಿಕಾರ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಬಿಟ್ಟಿದ್ದಾಗಿದ್ದು ಸಮಿತಿಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಆರದ. ಜನಾರ್ಧನ ಗುಪ್ತ ಮಾತನಾಡಿ, ಸಮಿತಿ ರಚಿಸಿದ ನಾಲ್ಕು ವರ್ಷದ ತನಕ‌ ಸುಮ್ಮನಿದ್ದು ಈಗ ಚುನಾವಣೆ ಹತ್ತಿರಕ್ಕೆ ಬರುತ್ತಿರುವ ಸಮಯದಲ್ಲಿ ಗಿಮಿಕ್ ರಾಜಕಾರಣ ಮಾಡುತ್ತಿರುವ ಎ. ಮಂಜು ಅವರಿಗೆ ಸಜ್ಜನಿಕೆಯ ರಾಜಕಾರಣಿ ಎ.ಟಿ. ರಾಮಸ್ವಾಮಿ ವಿರುದ್ದ ಮಾತನಾಡುವ ನೈತಿಕತೆಯಿಲ್ಲ. ಟ್ರಸ್ಟ್‌ ರಚಿಸಿಕೊಂಡಿರುವುದಾಗಿ ಸುಳ್ಳು ಹೇಳಿಕೆ ನೀಡಿದ್ದಾರೆ. ಅನ್ಯಾಯವಾಗಿದ್ದರೆ ದಾಖಲೆ ಸಹಿತ ತೋರಿಸಲಿ, ಭಕ್ತರ ದಿಕ್ಕು ತಪ್ಪಿಸುವುದನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದರು.

ತಾಪಂ ಮಾಜಿ ಅಧ್ಯಕ್ಷ ಎಚ್. ಮಾದೇಶ್, ಸಿದ್ದರಾಮೇಗೌಡ ಗೋಷ್ಠಿಯಲ್ಲಿದ್ದರು.

Post a Comment

0 Comments