ಅರಕಲಗೂಡು: ತಾಲೂಕಿನಲ್ಲಿ ರಾಜಕೀಯಕ್ಕೆ ಧುಮುಕಿ ಜನಸೇವಾ ಸಂಘಟನೆಯಲ್ಲಿ ತೊಡಗಿಕೊಂಡು ಈಗಾಗಲೇ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆಮಾತಾಗಿರುವ ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್ ಗೌಡ ಅವರ ಹುಟ್ಟು ಹಬ್ಬದ ಸಂಭ್ರಮವನ್ನು ಇಂದು ಅವರ ಅಭಿಮಾನಿಗಳು ಇನ್ನಷ್ಟು ವಿಭಿನ್ನ ಸೇವಾ ಕಾರ್ಯಗಳ ಮೂಲಕ ಆಚರಿಸುತ್ತಿದ್ದಾರೆ.
ಕಾಂಗ್ರೆಸ್ ಮುಖಂಡ ಶ್ರೀಧರ್ ಗೌಡ ಅವರ 40ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ವಿಶೇಷ ರೀತಿಯಲ್ಲಿ ಅರ್ಥಪೂರ್ಣ ಆಚರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಗ್ರಾಮದೇವತೆ ದೊಡ್ಡಮ್ಮ ದೇವಸ್ಥಾನ, ಅರಸಿಕಟ್ಟೆಯಮ್ಮ, ರಾಮನಾಥಪುರದ ಸುಬ್ರಹ್ಮಣ್ಯ ಸ್ವಾಮಿ, ರಮೇಶ್ವರ ದೇವಸ್ಥಾನ ಸೇರಿದಂತೆ 101 ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿ ಮುಂದಿನ ಶಾಸಕರಾಗಿ ಮಾಡಬೇಕೆಂದು ದೇವರಲ್ಲಿ ಅಭಿಮಾನಿಗಳು ಪ್ರಾರ್ಥಿಸುತ್ತೇವೆ ಎಂದು ಶ್ರೀಧರ್ ಗೌಡ ಅಭಿಮಾನಿ ಬಳಗದ ಗುರುಮೂರ್ತಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಶ್ರೀಧರ್ ಗೌಡ ಅವರ ಹುಟ್ಟುಹಬ್ಬ ಆಚರಣೆಯು ಮೊದಲಿಗೆ ಕೊಣನೂರಿನ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಲಾಗುವುದು. ಬಳಿಕ ರಾಮನಾಥಪುರ, ದೊಡ್ಡಮಗ್ಗೆ, ದೊಡ್ಡಬೆಮ್ಮತ್ತಿ, ಮಲ್ಲಿಪಟ್ಟಣ ಬಳಿಕ ಅರಕಲಗೂಡು ದೊಡ್ಡಮ್ಮ ದೇವಸ್ಥಾನದಲ್ಲಿ ಶ್ರೀಧರ್ ಗೌಡರು ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಲಿದ್ದಾರೆ. ಬಳಿಕ ಅನ್ನಸಂತರ್ಪಣೆ ನೆರವೇರಲಿದೆ. ಬಳಿಕ ಹಳ್ಳಿ ಮೈಸೂರು, ಕೇರಳಾಪುರದಲ್ಲಿ ಹುಟ್ಟುಹಬ್ಬ ಆಚರಿಸಲಾಗುವುದು ಎಂದರು.
ತಾಲೂಕಿನ ಹೋಬಳಿ ಮಟ್ಟದಲ್ಲಿ ಆಯಾ ಹೋಬಳಿಯ ಕಾರ್ಯಕರ್ತರು ಒಂದೆಡೆ ಸೇರಿ ಶ್ರೀಧರ್ ಗೌಡರಿಂದ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಿ, ಕೇಕ್ ಕತ್ತರಿಸುವ ಮೂಲಕ ವಿಶೇಷವಾಗಿ ಆಚರಿಸಲಿದ್ದಾರೆ ಎಂದರು. ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಎಲ್ಲಾ ಆಟೋ ಚಾಲಕರಿಗೆ ಪ್ಯಾಂಟ್, ಟಿ. ಶರ್ಟ್, ಜರ್ಕಿನ್ ಹಾಗೂ ಅಲೆಮಾರಿ ಮಹಿಳೆಯರಿಗೆ ಸೀರೆ, ಪೌರಕಾರ್ಮಿಕರಿಗೆ ಹೊಡಿಕೆ ಹಾಗೂ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ವಿತರಿಸಲಾಗುವುದು ಎಂದರು. ಅರೋಗ್ಯ ಶಿಬಿರದ ಮೂಲಕ ಇದುವರೆಗೆ 9 ಸಾವಿರಕ್ಕೂ ಹೆಚ್ಚು ಜನರಿಗೆ ಅರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗಿದೆ. ಇದುವರೆಗೆ 10 ತಂಡದ ಕಣ್ಣಿನ ಶಸ್ತ್ರ ಚಿಕಿತ್ಸೆ ಮುಗಿದಿದ್ದು, ಹುಟ್ಟುಹಬ್ಬದ ದಿನದಂದು 11 ನೇ ತಂಡ ಶಸ್ತ್ರ ಚಿಕಿತ್ಸೆಗೆ ಹೋಗುತ್ತಿದೆ. ಇದುವೆರೆಗೂ 900 ಕನ್ನಡಕ ವಿತರಿಸಲಾಗಿದೆ ಎಂದು ವಿವರಿಸಿದರು.
ಗೋಷ್ಟಿಯಲ್ಲಿ ಕಬ್ಬಳಿಗೆರೆ ಸೋಮಶೇಖರ್, ಬನ್ನೂರು ಗ್ರಾಪಂ ಮಾಜಿ ಉಪಾಧ್ಯಕ್ಷ ದಶರಥ, ಸೋಮ ಮತ್ತಿತರಿದ್ದರು.
0 Comments