ಅರಕಲಗೂಡು: ಸರ್ಕಾರದಿಂದ ನೀಡಲಾಗುವ ಎಲ್ಲ ಸೌಲಭ್ಯಗಳನ್ನು ಮಹಿಳೆಯರ ಹೆಸರಿನಲ್ಲಿ ನೊಂದಾಯಿಸಲು ಕಾಂಗ್ರೆಸ್ ಪಕ್ಷ ಕಾನೂನು ರೂಪಿಸಲಿದೆ. ಇದನ್ನು ಚುನಾವಣಾ ಪ್ರನಾಳಿಕೆಯಲ್ಲೂ ಅಳವಡಿಸಿ ಕೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾಂಗ್ರಸ್ ಮುಖಂಡ ಶ್ರೀಧರ್ ಗೌಡ ಆಭಿಮಾನಿಗಳ ಬಳಗ ಪಟ್ಟಣದ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ತಾಯಂದಿರ ದಿನಾಚರಣೆ ಹಾಗೂ ಉಚಿತ ಆರೋಗ್ಯ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಢಿದರು. ಕಾಂಗ್ರಸ್ ಪಕ್ಷ ಮಹಿಳೆಯರ ಕುರಿತು ಆಪಾರ ಕಾಳಜಿಯನ್ನು ಹೊಂದಿದೆ. ಪಕ್ಷದ ಸಾರಥ್ಯವನ್ನು ಮಹಿಳಯರೆ ನಡೆಸಿದ್ದಾರೆ. ಪಕ್ಷ ಅಧಿಕಾರದಲ್ಲಿದ್ದ ವೇಳೆ ಮಹಿಳಾ ಸಬಲೀಕರಣಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರಾಷ್ಟ್ರ ಹಾಗೂ ರಾಜ್ಯದಲ್ಲಿ ಜಾರಿಗೊಳಿಸಿರುವ ಕೀರ್ತಿ ಪಕ್ಷದ್ದಾಗಿದೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಮಾತ್ರ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ಸಾಧ್ಯ, ಮುಂದಿನ ಒಂದು ವರ್ಷದಲ್ಲಿ ಕಾಂಗ್ರೆಸ್ ಪಕ್ಷದ ಇತಿಹಾಸ ಮರುಕಳಿಸಲಿದೆ. ಪಕ್ಷದ ಸದಸ್ಯತ್ವ ನೊಂದಣಿಗೆ ಿನ್ನೂ ಕಾಲಾವಕಾಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನೊಂಯಾಸಲು ಪಕ್ಷದ ಮುಖಂಡರು ಶ್ರಮವಹಿಸಬೇಕು, ತಾಲ್ಲೂಕು ಸದಸ್ಯತ್ವ ನೊಂದಣೆಯಲ್ಲಿ ಮೂರನೆ ಸ್ತಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜ ಸೇವೆ ಮಾಢುವವರನ್ನು ಸಮಾಜ ಗುರುತಿಸುತ್ತದೆ. ಟೀಕೆ, ಟಿಪ್ಪಣಿ, ಟಿವಿ ಪ್ರಸಾರಗಳಿಗೆ ಹೆದರೆದೆ ಮುನ್ನುಗ್ಗಿ ಹೋರಾಟ ನಡೆಸಿ, ನಾಯಕರನ್ನು ಸೃಷ್ಠಿಸುವ ಶಕ್ತಿ ಕಾಂಗ್ರೆಸ್ ಗಿದೆ, ಜನರ ವಿಶ್ವಾಸ ಗಳಿಸುವವರನ್ನು ಪಕ್ಷ ಗುರತಿಸುತ್ತದೆ ಎಂದು ಶ್ರೀಧರ್ ಗೌಡ ಅವರನ್ನು ಹುರಿದುಂಬಿಸಿದರು.
ಕಾರ್ಯಕ್ರಮವನ್ನು ಉದ್ಗಾಟಿಸಿದ ಮಾಜಿ ಸಚಿವೆ ಹಾಗೂ ಚಿತ್ರ ನಟಿ ಉಮಾಶ್ರೀ ಮಾತನಾಡಿ, ತಾಯಿ ತ್ಯಾಗದ ಸಂಕೇತ, ಮಹಿಳೆ ಕುಟುಂಬವನ್ನು ಕಟ್ಟಲ್ಷಟೆ ಸೀಮಿತಗೊಳ್ಳದೆ ದೇಶ ಹಾಗೂ ಸಮುದಾಯವನ್ನು ಕಟ್ಟುವ ಕಲೆಗಾರಿಕೆಯನ್ನು ಸಿದ್ದಿಸಿಕೊಳ್ಳುವುದು ಅಗತ್ಯ. ರಾಷ್ಟ್ರ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಕುರಿತು ವಿಚಾರ ಶೀಲತೆ ಬೆಳೆಸಿ ಕೊಳ್ಳಬೇಕು, ಧರ್ಮ ಹಾಗೂ ಜಾತಿಗಳ ನಡುವೆ ಬೆಂಕಿ ಹಚ್ಚಿ ಸಮಾಜದ ಸಾಮರಸ್ಯ ಹಾಳು ಮಾಡುವ ಶಕ್ತಿಗಳ ಕುರಿತು ಮಹಿಳೆಯರು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಸಮನ್ವಯತೆಯ ಭಾರತ ರೂಪಿಸುವ ಹೊಣೆಗಾರಿಕೆಗೆ ಕಾಂಗ್ರೆಸ್ ಬದ್ಧವಾಗಿದ್ದು ಇದಕ್ಕೆ ಮಹಿಳೆಯರು ಶಕ್ತಿ ತುಂಬಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಢಿದ ಮುಖಂಡ ಶ್ರೀಧರ್ ಗೌಡ, ತಾವು ನಾಯಕನಾಗಲು ರಾಜಕೀಯಕ್ಕೆ ಬಂದಿಲ್ಲ, ಜನರ ಕಷ್ಟಗಳಿಗೆ ಸ್ಪಂದಿಸಿ ಜನಸಾಮಾನ್ಯರೊಂದಿಗೆ ಬೆರೆಯಲು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವುದಾಗಿ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಚಿತ್ರ ನಟಿಯರಾದ ಮಿಲನ ನಾಗರಾಜ್, ಸಾನ್ವಿ , ಕೆಪಿಸಿ ಕಾರ್ಯದರ್ಶಿ ಅಕ್ಕಯ್ಯ ಪದ್ಮಶಾಲಿ, ಕಾಮಿಡಿ, ಕಿಲಾಢಿ ಖ್ಯಾತಿಯ ಸಂತೋಷ್ ಮಾತನಾ ಡಿದರು.
ಹಾಸ್ಯ ನಟ ಸಾಧು ಕೋಕಿಲಾ, ಪಕ್ಷದ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಮಾಜಿ ರಾಜ್ಯ ಸಭಾ ಸದಸ್ಯ ಹೆಚ್. ಕೆ.ಜವರೇಗೌಡ, ಮಡಿಕೇರಿ ಜಿಪಂ ಸದಸ್ಯೆ ಕುಮುದಾ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಮುಖಂಡರಾದ, ಎಂ.ಕೆ. ಶೇಷೇಗೌಡ, ಎಚ್.ಎಸ್. ವಿಜಯಕುಮಾರ್, ಬಿ.ಕೆ.ರಂಗಸ್ವಾಮಿ, ಎಚ್.ಕೆ.ಮಹೇಶ್, ಮುನಿಸ್ವಾಮಿ, ದೇವರಾಜೇಗೌಡ, ಅಬ್ದುಲ್ ಸಮದ್, ಖಡಾಖಡಿ ಪೀರ್ ಸಾಬ್ ಇದ್ದರು.
ಅನಕೃ ವೃತ್ತದಲ್ಲಿ ಸೆಬಿನ ಹಾರ ಹಾಕಿ ತೆರೆದ ವಾಹನದಲ್ಲಿ ಶ್ರೀಧರ್ ಗೌಡ ಡಿಕೆಶಿ ಯೊಂದಿಗೆ ಮೆರವಣಿಗೆ ಸಾಗಿದರು.
0 Comments