ಅರಕಲಗೂಡು: ಪಿಎಸ್ಸೈ ಹಗರಣದ ತನಿಖೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸ್ತಕ್ಷೇಪ ಮಾಡದೆ ಸತ್ಯಾಂಶ ಮುಚ್ಚಿಡದೆ ಪ್ರಕರಣದಲ್ಲಿ ಭಾಗಿಯಾದವರ ಹೆಸರನ್ನು ಸಿಐಡಿ ಬಯಲು ಪಡಿಸಬೇಕು ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಶ್ರೀಧರ್‌ಗೌಡ ಅಭಿಮಾನಿ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅವರು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದ ಹೆಲಿಪ್ಯಾಡ್‌ನಲ್ಲಿ ಮಾತನಾಡಿ, ಸಿಒಡಿ ಮುಕ್ತವಾಗಿ ತನಿಖೆ ಮಾಡಬೇಕು. ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡಬಾರದು. ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ಇದು ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಪಿಎಸ್ಸೆöÊ ಹಗರಣದಲ್ಲಿ ಸಚಿವ ಅಶ್ವಥ್ ನಾರಾಯಣ್ ಸಹೋದರ ಭಾಗಿ ವಿಚಾರ ಕುರಿತು ಪ್ರಸ್ತಾಪಿಸಿ, ಅಶ್ವಥ್ ನಾರಾಯಣ್ ಅವರನ್ನು ಸರ್ಕಾರದ ಎಲ್ಲಾ ಸಚಿವರು ವಹಿಸಿಕೊಳ್ಳಬೇಕು, ವಹಿಸಿಕೊಳ್ಳದಿದ್ದರೆ ಆಗುತ್ತಾ. ಅವರ ಮೇಲೆಯೇ ಎಲ್ಲಾ ಆರೋಪಗಳು ಬರುತ್ತಿವೆ ಎಂದು ಮುಚ್ಚಿ ಕೊಳ್ತಿದ್ದಾರೆ. ಯಾರಾದರೂ ಲಂಚ ಪಡೆದವನು ಪಡೆದಿದ್ದಾನೆ ಅಂತ ಹೇಳ್ತನಾ, ಲಂಚ ಕೊಟ್ಟವನು ಲಂಚ ಕೊಟ್ಟಿದ್ದೀನಿ ಅಂತ ಹೇಳ್ತನಾ. ಈಗೆಲ್ಲಾ ಆಚೆ ಬಂದಿಲ್ವ, ಜೈಲಿಗೆ ಹಾಕಿರುವ ಹುಡುಗರನ್ನು ಕೇಳಿ ಎಂದು ಗುಡುಗಿದರು.
ಪಿಎಸ್‌ಐ ಹಗರಣ ತಾತ್ವಿಕ ಕಾಣಲ್ಲ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಹೋರಾಟ ಮಾಡಲು ಅವರದ್ದು ಒಂದು ಪಾರ್ಟಿ ಇದೆ. ಅವರು ಈ ವಿಚಾರದಲ್ಲಿ ಹೋರಾಟ ಮಾಡಬೇಕು. ಅವರ ಪಕ್ಷದ ಒಂದು ಬದ್ಧತೆ ಇದ್ದರೆ ಈ ವಿಚಾರದಲ್ಲಿ ಹೋರಾಟ ನಡೆಸಬೇಕು ಎಂದರು.
ಪಿಎಸ್‌ಐ ಹಗರಣದ ಕಿಂಗ್‌ಪಿನ್ ಇದ್ದಾರೆ ಎಂಬ ಮಾಜಿ ಸಿಎಂ ಎಚ್.ಡಿ.ಕೆ. ಹೇಳಿಕೆ ವಿಚಾರ ಕುರಿತು, ಕುಮಾರಸ್ವಾಮಿ ಹೇಳಿರುವುದರಲ್ಲಿ ಸತ್ಯ ಕಾಣ್ತಿದೆ. ಪಿಎಸ್ಸೆöÊ ಹಗರಣದಲ್ಲಿ ಕಿಂಗ್‌ಪಿನ್ ಇರೋದು ಸತ್ಯನೆ. ಕಿಂಗ್‌ಪಿನ್ನೇ ಕೆಲವರನ್ನೆಲ್ಲ ಬಿಡಿಸುತ್ತಿದ್ದಾರೆ. ಬರಿ ಆಫೀಸರ್, ಪೊಲೀಸ್ ಕಾನ್ಸ್ಟೇಬಲ್‌ಗಳನ್ನು ಬಂಧಿಸುತ್ತಿದ್ದಾರೆ. ಅಂಗಡಿ ಓಪನ್ ಮಾಡಿದ್ದಾರಲ್ಲ, ಆ ಅಂಗಡಿಯಲ್ಲಿ ಏನಾದರೂ ಸಾಮಾನು ಖರೀದಿ ಮಾಡಲು ಹೋಗಿರುವ ಹುಡುಗರುಗಳನ್ನು ಬಂಧಿಸುತ್ತಿದ್ದಾರೆ. ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಕೆಲವು ಮಂತ್ರಿಗಳ ಕೈವಾಡವಿದೆ. ಮಂತ್ರಿಗಳ ರಕ್ಷಣೆ ಇಲ್ಲದೆ, ಮಂತ್ರಿಗಳ ಮಾರ್ಗದರ್ಶನ ಇಲ್ಲದೆ ಈ ಹಗರಣ ಆಗಲು ಸಾಧ್ಯವಿಲ್ಲ. ಗೃಹ ಸಚಿವರು ಕೂಡ ಕೆಲವರನ್ನು ಬಿಡಿಸಿದ್ದಾರೆ. ಅಶ್ವಥ್ ನಾರಾಯಣ್ ಫೋನ್ ಮಾಡಿ ಹೇಳಿ ಕೆಲವರನ್ನು ಬಿಡಿಸಿದ್ದಾರೆ.
ಅಶ್ವಥ್ ನಾರಾಯಣ್ ಸಂಬಂಧೀಕರು ಅಂತ ಕೆಲವರು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಇದ್ದಾರೆ, ಆ ಹೆಸರುಗಳೆಲ್ಲ ಹೊರ ಬರುತ್ತವೆ. ಅವರ ಆರೋಪಗಳನ್ನು ಬಿಡಿಸಿದ ತಕ್ಷಣ ಕೆಲವು ಪೊಲೀಸ್ ಅಧಿಕಾರಿಗಳ ಎತ್ತಂಗಡಿ ಆಗಿದೆ. ಅವರ ರಿಪೋರ್ಟ್ ಕೊಟ್ಟಿದ್ದಕ್ಕೆ ಇವೆಲ್ಲ ಹೆಚ್ಚುಕಮ್ಮಿ ಆಗಿದೆ ಅಂತ ನನಗೆ ಮಾಹಿತಿಯಿದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿಗೆ ಪುಸ್ತಕ ಓದಲು ಹೋಗಿದ್ದರಾ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಶಿವಕುಮಾರ್, ಯಡಿಯೂರಪ್ಪ, ಅಮಿತ್ ಷಾ, ಅವರ ಪಾರ್ಟಿಯ ಎಂಎಲ್‌ಎಗಳು ಮಾಜಿ ಮಂತ್ರಿಗಳೆಲ್ಲ ಏತಕ್ಕೆ ಜೈಲಿಗೆ ಹೋಗಿದ್ದರು. ಅವರು ಯಾವ ವಚನ ಓದಲು ಹೋಗಿದ್ದರು, ಏನು ಜ್ಞಾನ ಕಲಿಯಲು ಹೋಗಿದ್ದರು. ಅವರ ರೀತಿ ನಾನು ಯಾವುದೇ ಆರೋಪಗಳನ್ನು ಹೊತ್ತು ಹೋಗಿಲ್ಲ. ರಾಜಕೀಯ ಷಡ್ಯಂತ್ರದ ರೂಪಿಸಿ ನನ್ನನ್ನು ಕಳುಹಿಸಿಕೊಟ್ಟಿದ್ದರು ಎಂದರು.
2000 ಕೋಟಿಗೆ ಸಿಎಂ ಪೋಸ್ಟ್, 100 ಕೋಟಿಗೆ ರೂ ಮಂತ್ರಿ ಪೋಸ್ಟ್. ಒಂದು ಕೋಟಿ ಯಾವ ಉದ್ಯೋಗ, ಐವತ್ತು, ಇಪ್ಪತ್ತು ಲಕ್ಷಕ್ಕೆ ಯಾವ ಉದ್ಯೋಗ ಎಲ್ಲಾ ಬಿಲ್ ಹಾಕಿದ್ದಾರೆ. ಇದು ಮಾಧ್ಯಮಗಳಲ್ಲಿ ಬಂದಿದೆ. ಸರ್ಕಾರಕ್ಕೆ ತಾಕತ್ತಿದ್ದರೆ ಅವರಿಗೆ ನೋಟೀಸ್ ನೀಡಲಿ ಎಂದು ಸವಾಲು ಹಾಕಿದರು.
ಯತ್ನಾಳ್ ಹೇಳಿಕೆ ಬಗ್ಗೆ ಪ್ರಶ್ನಿಸುತ್ತಿದ್ದಂತೆ ಮಾತನಾಡದೆ ಕಾರಿನಲ್ಲಿ ಹೊರಟ ಡಿ.ಕೆ.ಶಿವಕುಮಾರ್ ಅವರು, ನಾಳೆಯಿಂದ ಹಿಂದೂ ದೇವಾಲಯಗಳಲ್ಲಿ ಹನುಮಾನ್ ಚಾಲೀಸ್ ಹಾಕುವ ವಿಚಾರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
0 Comments