ಅರಕಲಗೂಡು: ಜೆಡಿಎಸ್ ತೊರೆಯುವುದಾಗಿ ಶಾಸಕ ಎ.ಟಿ. ರಾಮಸ್ವಾಮಿ ಮತ್ತು ಕೆ.ಎಂ. ಶಿವಲಿಂಗೇಗೌಡ ಅವರು ಎಲ್ಲಿಯೂ ಹೇಳಿಲ್ಲ. ರಾಮಸ್ವಾಮಿ ಅವರನ್ನು ಮುಂದೆ ಮಂತ್ರಿಯಾಗಿ ನೋಡಬೇಕೆನ್ನುವ ಅಭಿಲಾಷೆ ರೇವಣ್ಣ ಅವರಿಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಮಲ್ಲಿತಮ್ಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ದೇವ ದೇವಮ್ಮ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದು ಧಾರ್ಮಿಕ ಕಾರ್ಯಕ್ರಮ, ಇಲ್ಲಿ ರಾಜಕೀಯ ಮಾತನಾಡಬಾರದು. ಆದರೆ ನಾನು ಒಂದು ಮಾತು ಹೇಳುತ್ತೇನೆ. ರೇವಣ್ಣ ಅವರು ಮುಂದೆ ರಾಮಸ್ವಾಮಿ ಅವರನ್ನು ಮಂತ್ರಿಗಳಾಗಿ ನೋಡಬೇಕೆಂದಿದ್ದಾರೆ. ರಾಮಸ್ವಾಮಿ ಸಹ ಯಾರ ಮನೆ ಬಾಗಿಲಿಗೂ ಮಂತ್ರಿ ಸ್ಥಾನ ಕೊಡಿ, ದೊಡ್ಡಮಟ್ಟದಲ್ಲಿ ಆರ್ಥಿಕ ಶಕ್ತಿ ತುಂಬಿ ಕೊಡಿ ಎಂದು ಹೋದವರಲ್ಲ. ರಾಜಕಾರಣದಲ್ಲಿ ಅವರದ್ದೇ ಆದ ರೀತಿಯಲ್ಲಿ ನಡವಳಿಕೆಯನ್ನು ಅಳವಡಿಸಿಕೊಂಡಿದ್ದಾರೆ ಎನ್ನುವ ಮೂಲಕ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ರಾಮಸ್ವಾಮಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕುಮಾರಸ್ವಾಮಿ ಪ್ರಯತ್ನಿಸಿದರು.
ಜೆಡಿಎಸ್ ಇತ್ತೀಚೆಗೆ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮ ಹಾಗೂ ಬೆಂಗಳೂರಿನಲ್ಲಿ ನಡೆದ ಗಂಗಾರತಿ ಕಾರ್ಯಕ್ರಮಕ್ಕೆ ಗೈರಾಗಿದ್ದ ಶಾಸಕದ್ವಯರಾದ ಎ.ಟಿ. ರಾಮಸ್ವಾಮಿ ಮತ್ತು ಕೆ.ಎಂ.ಶಿವಲಿAಗೇಗೌಡ ಅಸಮಾಧಾನ ವಿಚಾರ ಪ್ರಸ್ತಾಪಿಸಿ, ರಾಮಸ್ವಾಮಿ ಅವರು ನಮ್ಮ ಕುಟುಂಬದ ಹಿರಿಯ ಅಣ್ಣ ಇದ್ದ ಹಾಗೆ. ಅವರು ರಾಜಕಾರಣ ಮಾಡಬೇಕಾದರೆ ನಾನಿನ್ನು ರಾಜಕಾರಣಕ್ಕೆ ಬಂದಿರಲಿಲ್ಲ. ಅವರು ಪಕ್ಷ ಬಿಡುತ್ತೇನೆ ಎಂದು ಎಲ್ಲಾದರು ಹೇಳಿದ್ದಾರಾ. ಅವರು ಜನಗಳ ಮಧ್ಯೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರ ನೇಚರ್ ಬೇರೆ, ಬೇರೆಯವರಿಗೆ ದಯವಿಟ್ಟು ರಾಮಸ್ವಾಮಿ ಅವರನ್ನು ಹೋಲಿಸಬೇಡಿ. ಶಿವಲಿಂಗೇಗೌಡ ನಾಳೆ ಬೆಳಿಗ್ಗೆ ಅವರು ನಮ್ಮ ಜೊತೆಯಲ್ಲೇ ಇರಬಹುದು. ಶಿವಲಿಂಗೇಗೌಡರು ಪಕ್ಷ ಬಿಟ್ಟು ಹೋಗುತ್ತೇನೆ ಅಂಥ ಹೇಳಿಲ್ಲ. ಅವರ ಭದ್ರತೆಗೆ ಓಡಾಡಿಕೊಂಡು ಇರಬಹುದು, ಬೇರೆ ಅರ್ಥ ನಾನು ಕಲ್ಪಿಸಲ್ಲ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗುತ್ತೆ. ಕೆಲವು ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲು ಆಗಲ್ಲ. ಜಿಲ್ಲೆ ರಾಜಕಾರಣದಲ್ಲಿ ರೇವಣ್ಣ-ಶಿವಲಿಂಗೇಗೌಡರು ನಿರಂತರ ಸಂಪರ್ಕದಲ್ಲಿದ್ದಾರೆ. ಅವರವರಲ್ಲಿ ವಿಶ್ವಾಸ ಇದ್ದರೆ ನಾನು ಅದಕ್ಕೆ ಧಕ್ಕೆ ತರಲ್ಲ. ನಾನು ಯಾವಾಗ ಮಾತನಾಡಬೇಕು, ಆಗ ಮಾತನಾಡುತ್ತೀನಿ. ನನ್ನ ಬಂದು ಭೇಟಿ ಆಗಲಿ ಅಂತ ಹೇಳಿದ್ದೀನಿ ಎಂದರು.
ಎA.ಎಲ್.ಸಿ. ಮರಿತಿಬ್ಬೇಗೌಡ ಅಸಮಾಧಾನ ವಿಚಾರ ಮಾತನಾಡಿದ ಕುಮಾರಸ್ವಾಮಿ, ಅದರ ಬಗ್ಗೆ ಶಾಸಕ ಅನ್ನದಾನಿ ಅವರು ಹೇಳಿದ್ದಾರೆ. ವಾಸಕ್ಕೆ ಮನೆಯಿಲ್ಲದ ಒಬ್ಬ ದಲಿತ ಸಮಾಜದ ಯುವಕನನ್ನು ಶಾಸಕರನ್ನಾಗಿ ಮಾಡಿದ್ದೇವೆ. *ನಾವೇನು ದುಡ್ಡು ತೆಗೆದುಕೊಂಡು ಮಾಡಿದ್ದೇವಾ. ಮರಿತಿಬ್ಬೇಗೌಡರು ಎಂಎಲ್‌ಸಿ ಟಿಕೆಟ್ ತೆಗೆದುಕೊಳ್ಳಲು ಎಷ್ಟು ದೇಣಿಗೆ ಕೊಟ್ಟರು. ಅವರು ಜೆಡಿಎಸ್‌ನಿಂದ ಎಂ.ಎಲ್.ಸಿ. ಆಗಿದ್ದಾರೆ ಡಿಕೆಶಿ ಹೇಗೆ ಬೆಳೆಸುತ್ತಾರೆ. ಅವರು ಹೇಗೆ ಬೆಳೆಸಲು ಸಾಧ್ಯ, ಆ ಸಮಯಕ್ಕೆ ಹೇಗೆ ಬೇಕು ಹಾಗೆ ಹೇಳಿಕೊಂಡು ಹೋಗುತ್ತಾರೆ. ನಾನು ಹೊರಟ್ಟಿ ಅವರನ್ನು ಅಭಿನಂದಿಸುತ್ತೇನೆ. ಧನ್ಯವಾದ ಹೇಳಿ ದೇವೇಗೌಡರ ಬಗ್ಗೆ ನಾಲ್ಕು ಒಳ್ಳೆಯ ಮಾತು ಹೇಳಿ ಹೋಗಿದ್ದಾರೆ. ಇರತಕ್ಕಂತಹ ನಿಜವಾದ ವಾಸ್ತವಾಂಶ ಅದು. ಅವರಿಗೇನು ಕಿರುಕುಳ ಕೊಟ್ಟಿದ್ದೇವೆ ಹೇಳಲಿ. ಅವರನ್ನೇ ಸಭಾಪತಿ ಮಾಡಿಲ್ಲವೇ ಒಂದು ಭಾರಿ, ಕಿರುಕುಳ ಎಲ್ಲಿ ಕೊಟ್ಟಿದ್ದೀವಿ, ಕಿರಕುಳದ ಅರ್ಥ ಏನು ಅನ್ನೋದು ಹೇಳಲಿ ಎಂದರು.
ಕಳೆದ 2006ರಲ್ಲಿ ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾದೆ. ರಾಜ್ಯದ ಸಂಪತ್ತುನ್ನು ಲೂಟಿ ಮಾಡುತ್ತಿದ್ದರು. ಅದನ್ನು ತಡೆಯಲು ಸದನ ಸಮಿತಿ ರಚನೆ ಮಾಡಿ ಅದರ ಅಧ್ಯಕ್ಷರಾಗಿ ಮಾಡಿದೆವು. ಅದನ್ನು ಅವರು ದುರುಪಯೋಗ ಪಡಿಸಿಕೊಳ್ಳಲು ಹೊರಟಿದ್ದರೆ. ಕೋಟ್ಯಾಂತರ ಹಣ ಸಂಪಾದನೆ ಮಾಡಬಹುದಿತ್ತು. ಅವರ ಮನೆಯ ಮುಂದೆ ಲೂಟಿ ಹೊಡೆದವರು ದುಡ್ಡು ಕೊಡಲು ಕ್ಯೂ ನಿಲ್ಲುತ್ತಿದ್ದರು. ಲೂಟಿ ಹೊಡೆದ ಅಧಿಕಾರಿಗಳನ್ನು ಬಲಿ ಹಾಕಲು ಸರ್ಕಾರಕ್ಕೆ ವರದಿ ಕೊಟ್ಟರು. ದಾಖಲಾತಿಗಳನ್ನು ಕೊಟ್ಟು ಹನ್ನೆರಡು ವರ್ಷ ಕಳೆದರೂ ಇಂದಿಗೂ ಅದನ್ನು ಇಂಪ್ಲಿಮೆAಟ್ ಮಾಡಲು ಆಗಿಲ್ಲ. ಬೆಂಗಳೂರಿನಲ್ಲಿ ಲಕ್ಷಾಂತರ ಕೋಟಿ ಬೆಲೆ ಬಾಳುವ ಆಸ್ತಿ ಲೂಟಿಯಾಗಿದೆ. ಅದರ ಮಾಹಿತಿಗಳನ್ನು ಭದ್ರವಾಗಿ ಇಟ್ಟಿದ್ದಾರೆ. ಇವತ್ತು ಇಂತಹ ವ್ಯಕ್ತಿಗಳು ಅವಶ್ಯಕತೆ ಇದೆ. ಸ್ಥಳೀಯವಾಗಿ ಅವರ ಮನಸ್ಸಿಗೆ ನೋವಿರುವುದು ನಮಗೆ ಗೊತ್ತಿದೆ. ಆದರೆ ಕೆಲವು ಸಣ್ಣಪುಟ್ಟ ದ್ವೇಷ, ಅಸೂಯೆ ಇರುವ ಬಗ್ಗೆ ಸೂಕ್ಷ್ಮವಾಗಿ ಚರ್ಚೆ ಮಾಡಿದ್ದಾರೆ. ಅದನ್ನು ಇಲ್ಲಿ ಚರ್ಚೆ ಮಾಡಲ್ಲ. ಸಣ್ಣಪುಟ್ಟ ಲೋಪದೋಷಗಳಿದ್ದರೆ ಸರಿಪಡಿಕೊಂಡು ಹೋಗೋಣ. ರಾಮಸ್ವಾಮಿ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮದು. ನಾನು ಮಾಡದ ತಪ್ಪಿಗೆ ಅವತ್ತು ಬಲಿಯಾದೆ. ಅವತ್ತಿನ ರಾಜಕೀಯ ಸನ್ನಿವೇಶದಲ್ಲಿ ವಿಧಿಯಿಲ್ಲದೆ ತೆಗೆದುಕೊಂಡ ನಿರ್ಧಾದಿಂದ ಈಗ ಅನುಭವಿಸುತ್ತಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.
ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ನನ್ನ ಸಲಹೆ ಕೇಳಿದ್ರೆ ನೀವು ಶಾಶ್ವತವಾಗಿ ಮುಖ್ಯಮಂತ್ರಿಗಳಾಗಿ ಇರುತ್ತಿದ್ದಿರಿ. ನಾನು ಐವತ್ತು, ನೂರು ಭಾರಿ ಹೇಳಿದೆ. ಆದರೆ ಅವರು ರೇವಣ್ಣ ಅವರ ಮಾತು ಕೇಳಿದ್ರೆನೋ, ನಾನು ಮಂತ್ರಿಯಾಗಬೇಕು ಅಂದಿದ್ದರೆ ಕರೆದು ಮಂತ್ರಿ ಮಾಡುತ್ತಿದ್ದರು. ಅಧಿಕಾರ ಯಾರಿಗೂ ಶಾಶ್ವತವಲ್ಲ, ಆದರೆ ನ್ಯಾಯ, ನೀತಿ, ಧರ್ಮದಿಂದ ನಡೆದುಕೊಂಡು ಹೋಗತ್ತಿದ್ದೇನೆ ಎಂದು ಹೇಳಿದರು.
ನಾನು ಎಂದು ಕೂಡ ಅಧಿಕಾರ, ಹಣ, ಆಸ್ತಿ ಹಿಂದೆ, ಹೋದವನಲ್ಲ. ನಾನು ಬಂದಿದ್ದು ನಮ್ಮ ಬಡವರು, ರೈತರು, ಜನರ ಹಿಂದೆ ಅದು ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ನಾನು ಮಂತ್ರಿಯಾಗಬೇಕು ಮನಸ್ಸು ಮಾಡಿದ್ದರೆ ಕರೆದು ಮಂತ್ರಿ ಮಾಡುತ್ತಿದ್ದರು. ಕುಮಾರಸ್ವಾಮಿ ಅವರೇ ಒಂದು ಸಾರಿ ಕೇಳಿದ್ರು, ಬೇಡ ಅಂತ ಹೇಳಿದ್ದೆ. ಎಂಥೆAಥ ಅವಕಾಶಗಳು ಆಫರ್‌ಗಳು ಬಂದವು, ಅವೆಲ್ಲವನ್ನೂ ಧಿಕ್ಕರಿಸಿದ್ದೇನೆ ಅದು ತತ್ವ ಸಿದ್ಧಾಂತಕ್ಕಾಗಿ ಎಂದರು.
ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದರೆ ಎಂದು ಕೂಡ ನಾನು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ. ಸ್ವಾರ್ಥಕ್ಕಾಗಿ ಎಲ್ಲಿಯೂ ಕೂಡ ನಮ್ಮ ನಾಯಕರಿಗೆ ಕೆಟ್ಟ ಹೆಸರು ಬರದ ರೀತಿ ನಡೆದುಕೊಂಡಿದ್ದೇನೆ ಎಂಬ ವಿಶ್ವಾಸವಿದೆ. ಎಂದೂ ಕೂಡ ಕೈವೊಡ್ಡಿ ಬೇಡಲಿಲ್ಲ. ದುಷ್ಟ, ದುರಾಸೆಯ ಜನ, ಲೂಟಿಕೋರರೇ ಇದ್ದಾರೆ. ಅದೆರಲ್ಲದರ ಮಧ್ಯೆ ಸಾರ್ವಜನಿಕ ಜೀವನದಲ್ಲಿ ಹೇಗಿಕೊಂಡು ಹೋಗುವುದು ಬಹಳ ಕಷ್ಟ ಸಾಧ್ಯ. ಕುಮಾರಸ್ವಾಮಿ, ರೇವಣ್ಣ ಅವರೇ, ನಿಮ್ಮ ಶಕ್ತಿಯಾನುಸಾರ ನೀವು ಕೊಡುಗೆ ಕೊಟ್ಟಿದ್ದೀರಿ ಅದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ರೇವಣ್ಣ ಅವರು ಅಭಿವೃದ್ಧಿಗೆ ಎತ್ತಿದ ಕೈ, ನೀವು ಎಷ್ಟು ಶ್ರಮಜೀವಿ, ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ವೇಳೆ ಮಧ್ಯಪ್ರವೇಶಿದ ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ನಮ್ಮದು ಏನಿಲ್ಲ, ಉಳಿದಿರೋದು ಏನಿಲ್ಲ. ನಾನು ಮಂತ್ರಿ ಆಯ್ತು, 25 ವರ್ಷ ಎಂಎಲ್‌ಎ ಆಗಿದ್ದೇನೆ. ಅಭಿವೃದ್ಧಿಯಲ್ಲಿ ರಾಮಸ್ವಾಮಿ ಅವರನ್ನು ಬಿಟ್ಟು ನಾನೇನು ಮಾಡಲು ಆಗಲ್ಲ. ದೇವರ ಸನ್ನಿಧಿಯಲ್ಲಿ ಹೇಳ್ತಿನಿ, ಮುಂದೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಎಂದರು.
ತಮ್ಮ ಊರು ಹೆಸರು ಹೇಳಿ ಎಂದು ಒತ್ತಾಯಿಸಿದ ಮುದ್ದನಹಳ್ಳಿ ಗ್ರಾಮದ ರಮೇಶ್‌ಗೌಡ ಅವರ ಮಾತಿಗೆ ಹಾಸ್ಯವಾಗಿ ತಿರುಗೇಟು ನೀಡಿದ ರೇವಣ್ಣ ಅವರು, ದೇವಸ್ಥಾನ ಇರೋದು ಮಲ್ಲಿತಮ್ಮನಹಳ್ಳಿಯಲ್ಲಿ, ನೀನು ದೇವಸ್ಥಾನಕ್ಕೆ ದುಡ್ಡು ಕೊಡು, ದೇವಸ್ಥಾನ ಕಟ್ಟೋದು ಅಷ್ಟು ಸುಲಭವಲ್ಲ, ಇಂತಹ ಕಾರ್ಯಕ್ರಮ ಮಾಡೋದು ಎಷ್ಟು ಕಷ್ಟ ಇರುತ್ತೆ ಎಂದರು.
0 Comments