ಕಾಡಾನೆಗಳು ಮನೆಗೆ ಬಂದು ಧಾಂದಲೆ, ಬೈಕ್ ಜಖಂ, ಬೆಳೆ ತುಳಿದು ನಾಶ

ಅರಕಲಗೂಡು: ತಾಲೂಕಿನ ಮರಿಯಾನಗರ ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಬೆಳೆಗಳನ್ನು ತುಳಿದು ನಾಶಪಡಿಸಿವೆ.

ಕೊಡಗಿನ ಗಡಿ ಭಾಗದ ಕಾಡಿನಿಂದ ಬಂದಿರುವ ಏಳು ಕಾಡಾನೆಗಳ ಹಿಂಡು ಬುಧವಾರ ಸಂಜೆ ಗ್ರಾಮದ ಜಮೀನಿಗೆ ನುಗ್ಗಿ ಬೆಳೆಗಳನ್ನು ಮನಸ್ಸೋ ಇಚ್ಚೆ ತುಳಿದು ನಾಶಪಡಿಸಿವೆ. ಸರೋಜಮ್ಮ ಎಂಬುವರಿಗೆ ಸೇರಿದ ಒಂದು ಎಕರೆಯಲ್ಲಿ ಬಿತ್ತಿದ್ದ ಶುಂಠಿ, ಕ್ಯಾನೆ ಬೆಳೆಯನ್ನು ತುಳಿದು ಹಾನಿಡಿಸಿವೆ.
ಗುಂಪಿನಲ್ಲಿದ್ದ ಆನೆಯೊಂದು ಎಂಬುವರ ವಾಸದ ಮನೆಗೆ ನುಗ್ಗಿ ಕಾಡಾನೆ ದಾಂದಲೆ ನಡೆಸಲು ಯತ್ನಿಸಿದೆ. ಗ್ರಾಮಸ್ಥರು ಹೆದರಿ ಕಿರುಚಾಡಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಗೀಳಿಡುತ್ತಿದ್ದ ಆನೆಯನ್ನು ಬೆದರಿಸಿ ಓಡಿಸಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಗಿರೀಶ್ ಎಂಬುವರಿಗೆ ಸೇರಿದ ಬೈಕ್ ತುಳಿದು ಆನೆ ಜಖಂಗೊಳಿಸಿದೆ.

ಕಾಡಾನೆ ದಾಳಿನಿಂದ ಬೆಳೆ ಕಳೆದುಕೊಂಡು ಜೀವ ಭಯದಲ್ಲಿ ಬದುಕುವಂತಾಗಿದೆ. ಆನೆಗಳ ಹಾವಳಿಗೆ ಕಡಿವಾಣ ಹಾಕದೆ ನಮ್ಮ ಪ್ರಾಣದ ಮೇಲೆ ಚೆಲ್ಲಾಟವಾಡಲಾಗುತ್ತಿದೆ. ಯಾವ ಹೊತ್ತಿನಲ್ಲೆ ಬಂದು ಮೇಲೆರಗುತ್ತವೆ ಎನ್ನುವ ಜೀವ ಭಯ ಕಾಡುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಕAದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Post a Comment

0 Comments