ಅರಕಲಗೂಡು: ರಾಜಕೀಯ ಜೀವನದುದ್ದಕ್ಕೂ ನಾಡಿನ ರೈತರ ಹಿತ ಬಲಿ ಕೊಡದೆ ನೀರಾವರಿ ಸೌಲಭ್ಯಕ್ಕಾಗಿ ಹಾಗೂ ಜನಪರ ಯೋಜನೆಗಳ ಜಾರಿಗಾಗಿ ಹೋರಾಟ ನಡೆಸಿರುವೆ ಹೊರತು ಅಧಿಕಾರದ ಆಸೆಯಿಂದಲ್ಲ, ನನ್ನ ತಾತ್ವಿಕ ಹೋರಟ ಮುಂದುವರಿಯಲಿದ್ದು ಚುನಾವಣೆ ಸಮಯದಲ್ಲಿ ಮತದಾರರ ಬಳಿಗೆ ಬರುವೆ, ನಿವೇಲ್ಲಾ ಆಶೀರ್ವದಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮನವಿ ಮಾಡಿದರು.
ಹಳ್ಳಿಮೈಸೂರು ಹೋಬಳಿಯ ಟಿ. ಮಾಯಗೌಡನಹಳ್ಳಿ ಗ್ರಾಮದಲ್ಲಿ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯ ಉದ್ಘಾಟನೆ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಅವರು, ರಾಜಕೀಯ ರಂಗದಲ್ಲಿ ಎಲ್ಲವನ್ನೂ ಅರಿತಿದ್ದು ನಿಜಲಿಂಗಪ್ಪ ಅವರ ಕಾಲದಿಂದಲೂ ನಿಷ್ಪಕ್ಷಪಾತ ರಾಜಕಾರಣ ನಡೆಸಿಕೊಂಡು ಬಂದು ಈಗಲೂ ಜೆಡಿಎಸ್ ಪಕ್ಷದಲ್ಲೇ ಉಳಿದುಕೊಂಡಿದ್ದೇನೆ. ಕಾವೇರಿ, ಕೃಷ್ಣಾ ನದಿ ನೀರಾವರಿ ವಿಚಾರದಲ್ಲಿ ನಮ್ಮ ರೈತರಿಗೆ ಅನುಕೂಲ ಕಲ್ಪಿಸಿರುವೆ. ಅಭಿವೃದ್ಧಿ ಪರ ಹೋರಾಟ ಮಾಡಿಕೊಂಡು ಬಂದಿರುವ ರಾಜಕಾರಣ ನನ್ನದು. ಚುನಾವಣೆಯಲ್ಲಿ ಒಮ್ಮೆ ಸೋಲುವುದು ಸಹಜ, ಆದರೆ ಜಿಲ್ಲೆಯಲ್ಲಿ ಎಲ್ಲ ವರ್ಗದವರು ನನಗೆ ಮತ ನೀಡಿದ್ದಾರೆ. ಮುಂದೆಯೂ ನಿಮ್ಮ ಬೆಂಬಲದ ಅವಶ್ಯಕತೆ ಬೇಕಿದೆ ಎಂದು ಕೇಳಿಕೊಂಡರು.
ನನ್ನ ರಾಜಕೀಯ ಏಳಿಗೆಗೆ ಕಾರಣವಾಗಿ ಪ್ರಧಾನಿ ಹುದ್ದೆಗೇರಲು ಮಹಿಳಾ ಮತದಾರರ ಪಾಲು ಮರೆಯುವಂತಿಲ್ಲ. ಶೇ. 33ರಷ್ಟು ಮಹಿಳಾ ಮೀಸಲಾತಿಗೆ ನನ್ನದ ದೃಢ ನಿರ್ಧಾರ. ಎಚ್.ಡಿ. ಕುಮಾರ ಸ್ವಾಮಿ ಕೂಡ ಮುಖ್ಯಮಂತ್ರಿಯಾಗಿದ್ದ ವೇಳೆ ಮಹಿಳೆಯರ ಉನ್ನತಿಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ನಿಮ್ಮೆಲ್ಲರ ವಿಶ್ವಾಸಕ್ಕೆ ನಮ್ಮ ಕುಟುಂಬ ಋಣಿಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯರ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಮಹತ್ತರವಾದ ಸ್ಥಾನವಿದೆ. ಯಾರೊಂದಿಗೂ ಹಂಚಿಕೊಳ್ಳದ ದುಖಃ, ದುಮ್ಮಾನಗಳನ್ನು ಮನುಷ್ಯ ದೇವಸ್ಥಾನಕ್ಕೆ ಬಂದು ನಿವೇದಿಸಿಕೊಳ್ಳುತ್ತಾನೆ. ಜಗತ್ತನ್ನು ಆವರಿಸಿರುವ ಭಗವಂತ ಮನುಷ್ಯನ ಅಂತರAಗದ ಪ್ರಾರ್ಥನೆಗಳಿಗೆ ದೇವಸ್ಥಾನದಲ್ಲಿ ಸದ್ಭಾವನಾತ್ಮಕ ಸಂಬAಧ ಕಲ್ಪಿಸಿ ಒಳಿತು ಹರಸುತ್ತಾನೆ. ನಂಜುAಡೇಶ್ವರಸ್ವಾಮಿ ಅಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಹರಸಿದರು.
ದೇವೇಗೌಡರು ರೈತರ ಮೇಲೆ ಅತೀವ ಕಾಳಜಿ ವಹಿಸಿ ದೇಶದ ಘನತೆ ಹೆಚ್ಚಿಸಿದ್ದಾರೆ. ಕುಮಾರಸ್ವಾಮಿ ಅವರು ಸಹ ಎರಡು ಬಾರಿ ಮುಖ್ಯಮಂತ್ರಿ ಆಗಿರುವುದು ಹೊಳೆನರಸೀಪುರ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಟಿ. ರಾಮಸ್ವಾಮಿ, ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಐದು ಕೋಟಿ ಮಂಜೂರು ಮಾಡಲಾಗಿದೆ ಎಂದರು.
ಸAಸದ ಪ್ರಜ್ವಲ್ ರೇವಣ್ಣ, ಬಿಬಿಎಂಪಿ ಮಾಜಿ ಸದಸ್ಯೆ ಗಂಗಾಭಿಕೆ ಮಲ್ಲಿಕಾರ್ಜುನ, ಶಿಕ್ಷಕಿ ಮಂಜುಳ, ಚಟ್ನಹಳ್ಳಿ ಮಹೇಶ್ ಮಾತನಾಡಿದರು. ಶ್ರೀ ಸೋಮಶೇಖರ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ಶ್ರೀ ವಿಜಯಕುಮಾರ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಸವರಾಜೇಂದ್ರ ಸ್ವಾಮೀಜಿ, ಚನ್ನಬಸವದೇಶಿ ಕೇಂದ್ರ ಸ್ವಾಮೀಜಿ, ವೀರಶೈವ ಮಹಾಸಭಾ ಅಧ್ಯಕ್ಷರಾದ ಎಸ್.ಎನ್. ನಂಜಪ್ಪ, ಎನ್. ರವಿಕುಮಾರ್, ಬೆಂಗಳೂರು ಕೆಎಸ್ ಆರ್ ಟಿಸಿ ಉಪಾಧ್ಯಕ್ಷ ಈಶ್ವರಪ್ಪ, ಉದೇಶ್, ಹೇಮಂತಕುಮಾರ್, ಗುರುಮೂರ್ತಿ, ಎಚ್.ಎನ್. ದೇವೇಗೌಡ ಇತರರಿದ್ದರು.
0 Comments