ಅರಕಲಗೂಡು: ರಾಗಿ ಖರೀದಿ ಪುನರಾರಂಭ

ಅರಕಲಗೂಡು : ರಾಗಿಯನ್ನು ಕ್ವಿಂಟಾಲ್ ಗೆ ರೂ 3377  ಬೆಂಬಲ ಬೆಲೆಯಲ್ಲಿ  ಖರೀದಿಸುವ ಪ್ರಕ್ರಿಯೆ ಪುನರಾರಂಭವಾಗಿದ್ದು ರೈತರು ಇದರ ಉಪಯೋಗ ಪಡೆದುಕೊಳ್ಳುವಂತೆ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು. 

ಪಟ್ಟಣದ  ಎಪಿಎಂಸಿ ಯಾರ್ಡ್ ನಲ್ಲಿ ರಾಗಿ  ಖರೀದಿ ಕೇಂದ್ರದ ಪುನರಾರಂಭಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ 25568 ಕ್ವಿಂಟಾಲ್ ರಾಗಿ ಯನ್ನು ಖರೀದಿಸಲು ಅವಕಾಶ ನಿಡಲಾಗಿದೆ. ಆದರೆ ಬಹಳಷ್ಟು ರೈತರ ಬಳಿ ರಾಗಿ ದಾಸ್ತಾನು ಇದ್ದು ಬೆಂಬಲ ಬೆಲೆಯ ಪ್ರಯೋಜನ ಇವರಿಗೂ ದೊರಕಬೇಕು. ಎಲ್ಲ ರೈತರಿಂದಲೂ ರಾಗಿ  ಖರೀದಿಸುವ ಕಾರ್ಯಕ್ಕೆ ಸರ್ಕಾರ  ಅವಕಾಶ ನೀಡಿ ನೊಂದಣೆ ಕಾರ್ಯವನ್ನು ವಿಸ್ತರಣೆ ಮಾಡುವಂತೆ ಆಗ್ರಹಿಸಿದರು.

ರೈತರು  ದೇಶದ ಬೆನ್ನೆಲುಬು ಎಂದು ಬಾಯಿಯಲ್ಲಿ ಹೇಳಿದರಷ್ಟೆ ಸಾಲದು, ಅವರಿಗೆ ತೊಂದರೆಯಾಗದಂತೆ  ಖರೀದಿ ಪ್ರಕ್ರಿಯೆಗಳು ನಡೆಯಬೇಕು ಹಾಗೂ ನಿಗದಿತ ಸಮಯದೊಳಗೆ ಹಣ ಪಾವತಿಸಲು ಕ್ರಮ ವಹಿಸುವಂತೆ ಸೂಚಿಸಿದರು.

ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್,, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ, ವಕೀಲ ಎ.ಆರ್.ಜನಾರ್ಧನ ಗುಪ್ತ, ಮುಖಂಡ  ಎನ್.ರವಿಕುಮಾರ್, ಎಪಿಎಂಸಿ ಕಾರ್ಯದರ್ಶಿ ಸೋಮಶೇಖರಪ್ಪ, ಖರೀದಿ ಕೇಂದ್ರದ ಮೇಲ್ವಿಚಾರಕ ವೆಂಕಟ್, ಸಹಾಯಕ ಕೃಷಿ ಅಧಿಕಾರಿ ಕೃಷ್ಣಪ್ಪ ಇದ್ದರು.

Post a Comment

0 Comments