ಅರಕಲಗೂಡು ತಾಲೂಕು ಕಚೇರಿ ಬಾಗಿಲು ಮುಂದೆ ರಾಗಿ ತುಂಬಿದ ಚೀಲಗಳನ್ನು ಇಟ್ಟುಕೊಂಡು ಪ್ರತಿಭಟನೆ ಆರಂಭಿಸಿದ ರೈತ ಸಂಘದ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ರವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ ಸಚಿವರು ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ಮುಂದುವರಿಸುವ ಕುರಿತು ಮುಖ್ಯಮಂತ್ರಿಗಳೊAದಿಗೆ ಈಗಾಗಲೇ ಚರ್ಚೆ ನಡೆದಿದೆ. ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸಲಿದೆ. ರೈತರು ಪ್ರತಿಭಟನೆ ಹಿಂಪಡೆಯಬೇಕು ಎಂದು ಮನವಿ ಮಾಡಿದ ಪ್ರತಿಭಟನೆ ಕೈಬಿಡಲಾಯಿತು.
ಶೀಘ್ರವಾಗಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು. ರಾಗಿ ಬೆಂಬಲ ಬೆಲೆಯಡಿ ಖರೀದಿಗೆ ನೋಂದಣಿ ಪುನರಾರಂಭಿಸದಿದ್ದರೆ ರೈತ ಸಂಘದ ಹೋರಾಟ ತೀವ್ರಗೊಳಿಸುವುದಾಗಿ ರೈತ ಸಂಘದ ಮುಖಂಡ ಸ್ವಾಮೀಗೌಡ ಸಚಿವರ ಸಮ್ಮುಖದಲ್ಲಿ ಎಚ್ಚರಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ, ಮುಖಂಡರಾದ ಕೃಷ್ಣೇಗೌಡ, ಹೊಂಬೇಗೌಡ, ರವಿ, ಶಿವಣ್ಣ, ಜಗದೀಶ್ ಮುಂತಾದವರು ಪಾಲ್ಗೊಂಡಿದ್ದರು.
0 Comments