ಅರಕಲಗೂಡು: ಕ್ಯಾನ್ಸರ್‌ ಗೆಲ್ಲುವುದು ಹೇಗೆಂದ ಕಾಂತಮಣಿ

ಅರಕಲಗೂಡು: ಕ್ಯಾನ್ಸರ್ ಕಾಯಿಲೆಗೆ ಭಯಪಡದೆ ಆರೋಗ್ಯಕರ ಜೀವನ ಸಾಗಿಸಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕಾಂತಮಣಿ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕ್ಯಾನ್ಸರ್ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ರೋಗದ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನಾರೋಗ್ಯಕರ ಆಹಾರ ಪದ್ದತಿ, ಆಧುನಿಕ ಜೀವನಶೈಲಿ, ಧೂಮಪಾನ, ಕೆಲವು ರೀತಿಯ ಪೂರ್ವಗ್ರಹಗಳ ಕಾರಣದಿಂದ ಕ್ಯಾನ್ಸರ್ ರೋಗ ಹೆಚ್ಚಾಗಿದೆ. ದೇಶದಲ್ಲಿ ಶೇ. ೩೦ರಷ್ಟು  ಕ್ಯಾನ್ಸರ್ ಗೆ ತಂಬಾಕು ಸೇವನೆ ಕಾರಣ ಧೂಮಪಾನ ಹಾಗೂ ಜಗಿಯುವ ಮೂಲಕ ತಂಬಾಕು ಸೇವನೆ ಮಾಡುತ್ತಿದ್ದು ಮಕ್ಕಳು ತಮ್ಮ ಪೋಷಕರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು.

ಮಕ್ಕಳು ಪ್ರತಿದಿನ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ, ದೈಹಿಕ ವ್ಯಾಯಾಮ ಮಾಡಬೇಕು ಸ್ವಚ್ಛತೆಯಿಂದ ಇರಬೇಕು ಯೋಗ, ಧ್ಯಾನ ಪ್ರಾಣಾಯಾಮಗಳನ್ನು ಮಾಡಿ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಒಂದು ವಾರದ ನಂತರವೂ ವಾಸಿಯಾಗದ ಕೆಮ್ಮು ವಾಂತಿ ಹೊಟ್ಟೆ ನೋವು, ಜ್ವರ, ತೂಕ ಕಡಿಮೆಯಾಗುವುದು ಹಸಿವಾಗದಿರುವುದು ದೇಹದ ಯಾವುದಾದರೂ ಭಾಗದಲ್ಲಿ ಗಂಟುಗಳಿದ್ದಲ್ಲಿ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು ಮದುವೆಯ ವಯಸ್ಸನ್ನು ಮುಂದೂಡಬೇಕು, ೪೦ ವರ್ಷ ಮೇಲ್ಪಟ್ಟ ಮಹಿಳೆಯರು ವರ್ಷಕ್ಕೆ ಒಮ್ಮೆ ಕ್ಯಾನ್ಸರ್ ತಪಾಸಣೆಗೆ ಒಳಪಡಬೇಕು. ಕ್ಯಾನ್ಸರ್ ರೋಗವನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಕಾಯಿಲೆ ವಾಸಿಯಾಗುತ್ತದೆ. ಮಾನಸಿಕ ಕ್ಷಮತೆ ವೈದ್ಯರ ಮಾರ್ಗದರ್ಶನ ಕುಟುಂಬದವರ ಸಹಕಾರದಿಂದ ಕ್ಯಾನ್ಸರನ್ನು ಗೆಲ್ಲಬಹುದು ಎಂದು ತಿಳಿಸಿದರು.

ಮುಖ್ಯ ಶಿಕ್ಷಕ ಬೋರಣ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

Post a Comment

0 Comments