ಮೈಸೂರಿನ ಇಲವಾಲ ಪಟ್ಟಣದ ಕಲಾಭಾರತಿ ವಿದ್ಯಾಸಂಸ್ಥೆಯಲ್ಲಿ ಇಂದು 73 ನೇ ವರ್ಷದ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 191ನೇ ಪುಣ್ಯಸ್ಮರಣೆ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ಆಚರಣೆ ಕಂಡಿತು.
ಸಂಸ್ಥಾಪಕ ಹಂ. ಲಕ್ಕೇಗೌಡ ಅಧ್ಯಕ್ಷತೆ ವಹಿಸಿದ್ದರು. ಗ.ನಾ.ಭಟ್ಟರು ಸಂಸ್ಕೃತ ವಿದ್ವಾಂಸರು ,ಸಾಹಿತಿಗಳು ಧ್ವಜಾರೋಹಣ ನೆರವೇರಿಸಿದರು.
ಎಂ.ಕೆ ಬೋರೇಗೌಡರು ಮಾಜಿ ಪ್ರೌಢಶಾಲ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರು
ವೇದಿಕೆಯಲ್ಲಿ ಪ್ರಾಂಶುಪಾಲರಾದ ಮಂಜುನಾಥ, ಮುಖ್ಯೋಪಾಧ್ಯಾಯರಾದ ಯ ಶವಂತ್ ಇದ್ದರು.
ಅಂಬೇಡ್ಕರ್ ರಚಿಸಿದ ಸಂವಿಧಾನ ಅಂಗೀಕಾರವಾದ ಮಹತ್ವದ ಹಾಗೂ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಅಮರವಾದ ಬಗ್ಗೆ ಸವಿಸ್ತಾರವಾಗಿ ವಿದ್ಯಾರ್ಥಿಗಳು ಹಾಗೂ ವೇದಿಕೆಯಲ್ಲಿ ಆಸೀನರಾದವರು ವಿದ್ವತ್ ಪೂರ್ಣ ಚರ್ಚೆ ಹಾಗೂ ಭಾಷಣ ಮಾಡಿದ್ದು ವಿಶೇಷವಾಗಿತ್ತು.
0 Comments