ಅರಕಲಗೂಡು: ಪ್ರಜಾಪ್ರಭುತ್ವ ವ್ಯವಸ್ಥೆ ಇಕ್ಕಟ್ಟಿನಲ್ಲಿದ್ದು ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟಾಗುತ್ತಿದೆ. ಅನ್ಯಾಯ, ಅಕ್ರಮಗಳ ಕುರಿತು ಪ್ರತಿಭಟಿಸದಿದ್ದರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೊಳಗಾಗಲಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಅಭಿಪ್ರಾಯ ಪಟ್ಟರು.
ಪಟ್ಟಣದಲ್ಲಿ ಬುಧವಾರ ನಡೆದ 73ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಡಳಿತದಲ್ಲಿ ಪ್ರಮಾಣಿಕತೆ, ದಕ್ಷತೆ, ಮರೆಯಾಗುತ್ತಿದ್ದು ನಿರೀಕ್ಷಿತ ಮಟ್ಟದ ಸಾಧನೆಯಾಗುತ್ತಿಲ್ಲ. ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ,ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಮಾಧ್ಯಮ ಕ್ಷೇತ್ರ, ರಾಜಕಾರಣದಲ್ಲಿರುವ ವ್ಯಕ್ತಿಗಳು ಆತ್ಮಾವಲೋಕನ ಮಾಡಿಕೊಳ್ಳುವುದು ಆಗತ್ಯ ಎಂದರು.
ಧ್ವಜಾ ರೋಹಣ ನೆರವೇರಿಸಿದ ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ದೇಶದಲ್ಲಿ ಮಹತ್ವದ ಸಾಧನೆಗಳಾಗುತ್ತಿದೆ. ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಗೊಳ್ಳಬೇಕಾಗಿದೆ. ಯುವ ಜನರು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸ ಬೇಕಿದೆ ಎಂದರು.
ಹಾಕಿ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಚಂದನ, ರೇಶ್ಮೆ ಇಲಾಖೆ ಸಹಾಯಕ ನಿರ್ದೇಶಕ ಸೀತಾರಾಮ್ ಭಟ್, ಕಂದಾಯ ಇಲಾಖೆ ಶಿರಸ್ತೆ ದಾರ್ ಅಂಕೇಗೌಡ, 2020-21 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಅಭಿಲಾಷ್, ಪತ್ರಕರ್ತರಾದ ಶಿವಕುಮಾರ್, ಜಗದೀಶ್ ಗೌಡ ಅವರನ್ನು ಗೌರವಿಸಲಾಯಿತು.
ಪಪಂ ಅಧ್ಯಕ್ಷ ಹೂವಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ, ಸದಸ್ಯರಾದ ಅನಿಕೇತನ್, ಅಬ್ದುಲ್ ಬಾಸಿದ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ವೆಂಕಟೇಶ್, ತಾಪಂ ಇಒ ಎನ್.ರವಿಕುಮಾರ್, ಸಿಪಿಐ ಸತ್ಯನಾರಾಯಣ,ಪಿಎಸ್ಐ ಆರ್.ಧನರಾಜ್, ಆರ್ ಎಫ್ ಒ ಅರುಣ್ ಕುಮಾರ್, ಬಿಇಒ ಎಸ್.ಎನ್.ದಿನೇಶ್ , ದೈಹಿಕ ಶಿಕ್ಷಕ ನಾಗರಾಜ್, ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
0 Comments