ಅರಕಲಗೂಡು: ತಾಲೂಕಿನ ಬಸವಾಪಟ್ಟಣದಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡ ಕಬ್ಬಳಿಗೆರೆ ಡಾ. ದಿನೇಶ್ ಭೈರೇಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮೇಳ ಕಾರ್ಯಕ್ರಮದಲ್ಲಿ 650 ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಹೃದ್ರೋಗ, ಇಸಿಜಿ, ಎಕೋ, ದಂತ ಪರೀಕ್ಷೆ ಸೇರಿದಂತೆ ವಿವಿಧ ಕಾಯಿಲೆಗಳನ್ನು ಪರೀಕ್ಷಿಸಿಕೊಳ್ಳಲು ಅಪಾರ ಜನರು ಮುಗಿಬಿದ್ದರು. ಉಚಿತ ನೇತ್ರ ತಪಾಸಣೆ ನಡೆಸಿ ದೃಷ್ಟಿ ದೋಷ ಇರುವವರಿಗೆ ಕನ್ನಡಕ ವಿತರಿಸಲಾಯಿತು.
ಹಾಸನ ಮಣಿ ಸೂಪರ್ ಸ್ಪೆಷಾಲಿಟಿ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರಾದ ಡಾ. ಬಿಂಬ, ಡಾ. ಮಧುರಾ, ಡಾ. ಸಿದ್ರಾಮು, ಡಾ. ಅನೂಪ್ ಜನರ ಆರೋಗ್ಯ ಪರೀಕ್ಷೆ ನಡೆಸಿ ಮಾತ್ರೆ ಔಷಧಿಗಳನ್ನು ವಿತರಿಸಿದರು. ಆಸ್ಪತ್ರೆ ಸಿಬ್ಬಂದಿ ಸಹಕರಿಸಿದರು.
0 Comments