ಅರಕಲಗೂಡು; ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಸೇರಿಕೊಂಡಿದ್ದರಿಂದ ಅವರು ಸಿಎಂ ಆದರು, ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಹೇಗೆ ಸಾಧ್ಯವಾಗುತ್ತಿತ್ತು. ಎಲ್ಲ ವರ್ಗಕ್ಕೂ ಕಾಂಗ್ರೆಸ್ ಅಧಿಕಾರ ಕೊಟ್ಟಿದೆ, ಚುನಾವಣೆಯಲ್ಲಿ ಮತದಾರರು ಕೈ ಬಿಡಬೇಡಿ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಕೇಳಿಕೊಂಡರು.
ಪಟ್ಟಣದ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಚುನಾಯಿತ ಪ್ರತನಿಧಿಗಳು ಮತ್ತು ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಷದ ಸಮಾರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಪ್ರಸನ್ನ ಕುಮಾರ್ ರವರ ನೇತೃತ್ವದಲ್ಲಿ ಅರಕಲಗೂಡು ಪಟ್ಟಣದ ಚನ್ನ ಬಸವೇಶ್ವರ ಕಲ್ಯಾಣ ಮಂಟಪ ವಿಧಾನ ಪರಿಷತ್ ಚುನಾವಣೆ ಸಂಭಂದ ಪಟ್ಟಂತೆ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಗೆ ಕಾಂಗ್ರೆಸ್ ಪಕ್ಷದ ಸಂಸದರಾದ ಡಿ ಕೆ ಸುರೇಶ್, ಹಾಸನ ಉಸ್ತುವಾರಿ ಮಾಜಿ ಸಂಸದರಾದ ಧ್ರುವನಾರಾಯಣ್ , ವಿಧಾನ ಪರಿಷತ್ ಮಾಜಿ ಸದಸ್ಯರಾದ ಗೋಪಾಲಸ್ವಾಮಿ , ಜಿಲ್ಲಾ ದ್ಯಕ್ಷರಾದ ಮಂಜುನಾಥ್, ರವರು ಆಗಮಿಸಿ ಕಾರ್ಯಕ್ರಮ ಉದ್ಛಾಟನೆ ಮಾಡಿದರು.
MLC ಅಬ್ಯರ್ಥಿಯಾದ ಶಂಕರ್ ಮಾತನಾಡಿ, ಈ ದಿನ ನನಗೆ ಸಂತೋಷವಾಗಿದೆ. ಅರಕಲಗೂಡು ಕ್ಷೇತ್ರ ನನಗೆ ನಿರ್ಣಯವಾಗಿದೆ. ಎ.ಮಂಜು ರವರಿಗೆ ಕೊಡಿಗಿನಲ್ಲಿ ಟಿಕೆಟ್ ಸಿಕ್ಕಿದೆ ಅವರು ಕೂಡ ಪಕ್ಷಕ್ಕೆ ಕೊಡಗಿನಲ್ಲಿ ಶ್ರಮಿಸುತ್ತಿದ್ದಾರೆ, ನನಗೆ ಅರಕಲಗೂಡು ಬೇರೆ ಅಲ್ಲ ಚನ್ನರಾಯಪಟ್ಟಣ ಬೇರೆ ಅಲ್ಲ ಎಲ್ಲರ ಸೇವೆ ಮಾಡಿಕೊಂಡು ಪಕ್ಷದ ಏಳಿಗೆಗಾಗಿ ದುಡಿಯುತ್ತೇನೆ ನನ್ನನ್ನು ಕೈ ಬಿಡಬೇಡ .ನನಗೆ ಆಶೀರ್ವಾದ ಮಾಡಿ ಎದುರಾಳಿ ಪಕ್ಷದ ಯಾವುದೇ ಅಮಿಷಗಳಿಗೆ ಬಲಯಾಗಬೇಡಿ ಎಂದರು.
ನಂತರ ಜವರೇಗೌಡರವರು ಮಾತನಾಡಿ ವಾತಾವರಣ ನೋಡಿದರೆ ಕಾಂಗ್ರೆಸ್ ಪಕ್ಷ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ, ಈ ತಾಲ್ಲೂಕು ಎಲ್ಲ ರೀತಿಯಲ್ಲೂ ತನ್ನದೇ ಛಾಪು ಮೂಡಿಸಿದೆ,ಅದರಲ್ಲೂ ರಾಜಕೀಯ, ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಗಣ್ಯರು ಹುಟ್ಟಿ ಜಿಲ್ಲೆಯ ಹೆಸರು ಕೊಂಡಾಡಿದ್ದಾರೆ, ಅದ್ದರಿಂದ ದಯಮಾಡಿ ನಮ್ಮೆಲ್ಲರ ಅಭ್ಯರ್ಥಿ ಶಂಕರ್ ರವರನ್ನು ಗೆಲ್ಲಿಸೋಣ ಎಂದರು.
ಧ್ರುವ ನಾರಾಯಣ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 20 ಸ್ಥಾನ ಬಿಜೆಪಿ 20 ,ಸ್ಥಾನ ಜೆಡಿಸ್ 6 ಸ್ಥಾನಗಳಲ್ಲಿ ಸ್ಪರ್ದಿಸಿದ್ದೇವೆ , ನಮ್ಮ ಪಕ್ಷದ ಸರ್ವ ದರ್ಮಿಯರಿಗೆ ಮನ್ನಣೆ ನೀಡಿ ರಾಜ್ಯದ ವಿವಿಧ ಭಾಗಗಳಲ್ಲಿ ಅವಕಾಶ ನೀಡಿದ್ದೇವೆ.ಸಾಮಾಜಿಕ ನ್ಯಾಯ ಒದಗಿಸಿದ್ದೇವೆ.ಬಿಜೆಪಿ ಮಾತ್ರ ಈ ರೀತಿ ಮಾಡಿಲ್ಲ, ಜೆಡಿಸ್ ಪಕ್ಷ ಹೆಸರಿಗೆ ಮಾತ್ರ ಜಾತ್ಯಾತೀತ ಅಲ್ಲಿಯೂ ಸಹ ಯಾವುದೇ ಸರ್ವ ದರ್ಮ ಸಮನ್ವಯ ಕಾಪಾಡಿಲ್ಲ . ಹಾಸನ ಜಿಲ್ಲೆಯಲ್ಲಿ ಒಂದು ಮನೆಯ ರಾಜಕೀಯಕ್ಕೆ ಅವಕಾಶ ಕೊಡಬೇಕಾ ಒಂದು ಪಕ್ಷಕ್ಕೆ ಕೊಡವೇಕಾ .ನೀವೆ ಆಯ್ಕೆ ಮಾಡಿ .ಎಲ್ಲರಿಗೂ ಸಮಾನ ಅವಕಾಶ ನೀಡಿರುವ ಕಾಂಗ್ರೆಸ್ ಪಕ್ಷಕ್ಕೇ ನೀಡಿ ಶಂಕರ್ ರವರನ್ನು ಗೆಲ್ಲಿಸಿ,
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಪಂಚಾಯತ್ ರಾಜ್ಯ ವ್ಯವಸ್ಥೆಗೆ ಅನುಮೋದನೆ ಸಿಗಲಿಲ್ಲ ಅವತ್ತು ಕಣ್ಣೀರು ಹಾಕಿದರು ಆದರೆ ಇಂದಿರಾಗಾಂಧಿ ಹತ್ಯೆ ಯಾದಗಲೂ ಅವರು ಕಣ್ಣೀರು ಹಾಕಲಿಲ್ಲ. ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಗಳಾಗಿದ್ದಾಗ 50 ಲಕ್ಷ ಮನೆಗಳನ್ನು ಕೊಟ್ಟಿದ್ದಾರೆ. ಹೆಚ್ ಡಿ ರೇವಣ್ಣನವರು ಹೇಳುತ್ತಾರೆ ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಉಳಿಯೋದಿಲ್ಲ ಅಸ್ಥಿರ ವಾಗಿದೆ ಎಂದರು ಆದರೆ ಹೆಚ್ ಡಿ ರೇವಣ್ಣನವರು ತಿಳಿದುಕೊಳ್ಳಿ ಇದು ಬಡವರ ಪಕ್ಷ ಯಾರು ಅಸ್ಥಿರ ಗೊಳಿಸಲು ಸಾದ್ಯವಿಲ್ಲ ಅಸ್ಥಿರವಾಗಿರೋದು ನಿಮ್ಮ ಪಕ್ಷ, ನಿಮ್ಮ ಪಕ್ಷದಲ್ಲಿ ಯಾರಿಗೂ ಅವಕಾಶ ನೀಡದೆ ಕೇವಲ ನಿಮ್ಮ ಕುಟುಂಬದವರಿಗೆ ಮಾತ್ರ ನೀಡಿ ಅವರ ಏಳಿಗೆಗೆ ಪಕ್ಷ ಮಾಡಿಕೊಂಡಿದ್ದಾರೆ.ನಿಮಗೆ ಯಾವುದೇ ಸಿದ್ದಾಂತ ಇಲ್ಲ ಅಧಿಕಾರಕ್ಕಾಗಿ ರಾಜಕಾರಣ, ಅವಕಾಶವಾದಿ ರಾಜಕಾರಣ ನಿಮ್ಮದು, 20 ತಿಂಗಳು ಕುಮಾರ ಸ್ವಾಮಿ ಮುಖ್ಯಮಂತ್ರಿ ಪದವಿ ಅನುಭವಿಸಿ ಮೋಸ ಮಾಡಿದ್ದಿರಿ ನಿಮಗೆ ಯಾವ ಸಿದ್ದಾಂತ ಇಲ್ಲ ಆದ್ದರಿಂದ ಕುಟುಂಬ ರಾಜಕಾರಣದಿಂದ ಮುಕ್ತಿ ಮಾಡಿ ಶಂಕರ್ ನನ್ನು ಗೆಲ್ಲಿಸಿ ಎಂದರು.
ಜಿಲ್ಲಾದ್ಯಕ್ಷ ಜಾವಗಲ್ ಮಂಜುನಾಥ್ಮಾ ತನಾಡಿ
ಕಾಂಗ್ರಸ್ ಪಕ್ಷಕ್ಕೆ ಅರಕಲಗೂಡಿನಲ್ಲಿ ತನ್ನದೇ ಆದ ಮಹತ್ವ ಹೊಂದಿದೆ, ಇಲ್ಲಿ ಪಕ್ಷಕ್ಕೆ ಕೊಡುಗೆ ಅಪಾರವಾಗಿದೆ, ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ ಹಾಕಿ ನಮ್ಮ ಶಂಕರ್ ಗೆಲ್ಲಿಸಿ ಇಡೀ ರಾಜ್ಯಕ್ಕೆ ಪಾಠವಾಗಿ ಕುಟುಂಬ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಿ ಶ್ರೀ ಸಾಮಾನ್ಯನ ಗೆಲುವೆಗೆ ಕಾರಣವಾಗಬೇಕು ಎಂದರು.
ಕಾಂಗ್ರೆಸ್ ಮುಖಂಡ ಶೇಷೇಗೌಡ ಮಾತನಾಡಿ ಕಾಂಗ್ರೆಸ್ ಪಕ್ಷ ಯೊಗ್ಯತೆ ಕೊಟ್ಟಿದೆ ಅಧಿಕಾರ ಕೊಟ್ಟಿದೆ , ಸ್ಥಾನಮಾನ ಕೊಟ್ಟಿದೆ,ಅದನ್ನು ಮಾರುವುದು ಬೇಡ , ಹೈಕಮಾಂಡ್ ನಮ್ಮ ಗಣನೆಗೆ ತೆಗೆದುಕೊಳ್ಳದೆ ಕೊಡಗಿನಲ್ಲಿ ಮಂಥರ್ ಗೌಡರಿಗೆ ಟಿಕೆಟ್ ನೀಡಿದೆ, ನಾವುಗಳು ಅರಕಲಗೂಡಿನಲ್ಲಿ ಕಾಂಗ್ರೆಸ್ ಉಳಿಸಲು ಶತಾಯ ಗತಾಯ ಹೋರಾಟ ಮಾಡಿದ್ದೇವೆ ಕುಟುಂಬ ದುರಾಸೆಯ ರೇವಣ್ಣನವರಿಗೆ ತಕ್ಕ ಪಾಠ ಕಲಿಸೋಣ ಎಂದರು.ಬಸಂಸದ ಡಿ.ಕೆ ಸುರೇಶ್ವ ಭಾಷಣದ ವೇಳೆ ಮಾತನಾಡಿ.
ಕಷ್ಟದ ಕಾಲದಲ್ಲಿ ಪಕ್ಷ ಕಟ್ಟಿ ಬೇಳೆಸಿದ್ದಿರಿ, ಕಾಂಗ್ರೆಸ್ ದ್ವಜವನ್ನು ಎತ್ತಿ ಹಿಡಿದ್ದಿರಿ.ಅದಕ್ಕೆ ನಾನು ಚಿರಖುಣಿಯಾಗಿದ್ದೇನೆ,
ಮುಂಬರುವ ಪರಿಷತ್ ಚುನಾವಣೆ ಗೆಲ್ಲಲು ಗ್ರಾಮ ಪಂಚಾಯತಿ ಸದಸ್ಯರು ಮನಸ್ಸು ಮಾಡಿ ಗೆಲ್ಲಿಸಬೇಕು, ಈ ಸರ್ಕಾರ ಅನುದಾನಗಳನ್ನು ಮೊಟಕು ಗೊಳಿಸಿ, ಅಭಿವೃದ್ಧಿ ಕುಂಠಿತವಾಗಿದೆ, ಸರ್ಕಾರ ಬ್ರಷ್ಟಚಾರದಲ್ಲಿರುವುದು ,ರೈತರು ,ಬಡವರಿಗೆ ತೆರಿಗೆ ವಸೂಲಿ ಮಾಡುತ್ತಿರುವುದು, ಗೊಬ್ಬರದ ಬೆಲೆ ನಿಯಂತ್ರಣ ಇಲ್ಲ, ಬೆಲೆ ಏರಿಕೆ ಹೆಚ್ಚಾಗಿದೆ, ನಿರುದ್ಯೋಗ ತಾಂಡವಾಡುತ್ತಿದೆ, ಸುಳ್ಳು ಭರವಸೆಗಳ ಮೋದಿ ಸರ್ಕಾರ ನೋಡಿದ್ದಿರಿ, ಕಪ್ಪು ಹಣ ಇಲ್ಲದ ಹಾಗೆ ಮಾಡುತ್ತೇವೆ, ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಜಾತಿಯ ಹೆಸರಿನಲ್ಲಿ ಭರವಸೆಗಳ ಹೆಸರಿನಲ್ಲಿ ಅದಿಕಾರ ಹಿಡಿದ್ದಿದ್ದಾರೆ, ಮುಂದಿನ ಬದಲಾವಣೆ ಕಾಂಗ್ರೆಸ್ ಆಗಿದೆ ಎಂದರು.
ಇನ್ನು ಜೆಡಿಎಸ್ ಕುಟುಂಬದವರನ್ನು ಬಿಟ್ಟರೆ ನಾಯಕತ್ವದ ಗುಣ ಇರುವ ಒಬ್ಬರು ಇಲ್ಲ, ಶಾಸಕರು ಗಾಂದಿ ತತ್ವದ ಬಗ್ಗೆ ಮಾತನಾಡುತ್ತಿರಿ ಆದರೆ MLC ಗೆ ನಿಲ್ಲಿಸಲು ಬೇರೆಯೊಬ್ಬರು ಇಲ್ಲವಾ ,ಭ್ರಷ್ಟ ಚಾರ ಬಗ್ಗೆ ಮಾತನಾಡು ನೀವು ಈ ಜಿಲ್ಲೆಯಲ್ಲಿ ಹೊಸ ನಾಯಕ ಉಳಿವಿಗೆ, ಪ್ರಜಾಪ್ರಭುತ್ವ ಉಳಿಯಲು, ಕಾಂಗ್ರೆಸ್ ಗೆ ಮತ ಹಾಕಿಸಿ, ನಿಮ್ಮಲ್ಲಿ ಮನವಿ ಮಾಡುತ್ತೇನೆ , ಕುಟುಂಬದ ಸದಸ್ಯರನ್ನು ಬಿಟ್ಟು ಒಬ್ಬ ಬಡವನಿಗೆ ನೀಡಿ ಗೆಲಿಸಲು ನಿಮಗೆ ಶಕ್ತಿ ಇಲ್ಲವೆ,ಇದೆ ಆದರೆ ನೀವು ಮನಸ್ಸು ಮಾಡುತ್ತಿಲ್ಲ ಮುಂದಾದರೂ ಮಾಡಿ ರಾಮಸ್ವಾಮಿರವರು, ಶಿವಲಿಂಗೇಗೌಡರು ಮನಸ್ಸು ಮಾಡಿ ಕಾಂಗ್ರೆಸ್ ಗೆಲ್ಲಿಸಿ, ಜೆ ಡಿ ಎಸ್ ಗೆಲ್ಲಿಬಾರದು ,ಪ್ರತಿಯೋಬ್ಬರ ಭಾವನೆ ಎಂದರೆ ಕಾಂಗ್ರೆಸ್ ಅಬ್ಯರ್ಥಿ ಶಂಕರ್ ಗೆಲ್ಲಬೇಕು ಎಂದರು.
ಅ ಗೆಲವು ಸಿದ್ದರಾಮಯ್ಯ ಡಿಕೆಶಿಯವರು ಗೆಲವು, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ, ತಂದೆ ಯಾವುದೇ ಪಕ್ಷದಲ್ಲಿದ್ದರೂ , ಅವರ ಮಗನ ಪಕ್ಷ ನಿಷ್ಟೆ ನೋಡಿ ಮಂಥರ್ ಗೌಡರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಪಕ್ಷ ನಿಷ್ಠಾ ಪಕ್ಷಪಾತವಾಗಿ ಮಾಡಿದೆ.ನಿಮ್ಮ ಗುರಿ ವ್ಯಕ್ತಿ ಯಾಗಿರದೆ ಪಕ್ಷವಾಗಿರಬೇಕು ಮುಂದಿನ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಕಾಂಗ್ರೇಸ್ ಮತ ನೀಡಿ, ಸ್ವಾಬಿಮಾನಿ ಪಕ್ಷಕ್ಕೆ ಮತ ನೀಡಿ ಶಂಕರ್ ನನ್ನು ಗೆಲ್ಲಿಸೋಣ, ಯಾವುದೇ ಪಕ್ಷದಿಂದ ಹೊಸಬರು ಬಂದರೆ ಸೇರಿಸಿಕೊಂಡು ಒಗ್ಗಟ್ಟಾಗಿ ದುಡಿದು ಪಕ್ಷ ಬೆಳೆಸೋಣ , ಪಕ್ಷ ಬೆಳೆದರೆ ಅಧಿಕಾರ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿ ಹುರುದುಂಬಿಸಿದರು.
ಪ್ರಮುಖರಾದ ಕಾಂಗ್ರೆಸ್ ಮುಖಂಡ ಡಾ. ದಿನೇಶ್ ಭೈರೇಗೌಡ ಮಾತನಾಡಿದರು.
0 Comments