ಅರಕಲಗೂಡು: ಪೇಟೆ ಶ್ರೀ ಶನೇಶ್ವರ, ‌ಶ್ರೀ ಆಂಜನೇಯ ಸ್ವಾಮಿ 53 ನೇ ಲಕ್ಷ ದೀಪೋತ್ಸವ ಸಡಗರ

ಅರಕಲಗೂಡು:  ಪಟ್ಟಣದ ಪೇಟೆ ಶನೇಶ್ವರ ಮತ್ತು ಆಂಜನೇಯ ಸ್ವಾಮಿ ದೇವಾಲಯದಲ್ಲಿ 53 ನೇ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಶನಿವಾರ  ವಿಜೃಂಭಣೆಯಿಂದ  ಸಾಗಿತು. 

ಬೆಳಿಗ್ಗೆ ದೇವಾಲಯದಲ್ಲಿ ಸುಪ್ರಭಾತ ಸೇವೆ, ದೀಪಾರಾಧನೆ ಬಳಿಕ ಚಿಲು ಮೆ ಮಠದಲ್ಲಿ ಗಂಗಾಪೂಜೆ ನಡೆಸಿ  ಬೆಳ್ಳಿ ರಥದಲ್ಲಿ ಶನಿದೇವರ ಮೂರ್ತಿಯ ಉತ್ಸವವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ  ನಡೆಸಲಾಯಿತು. 

ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ  ಅಭಿಷೇಕ ಹಾಗೂ ವಿವಿಧ ಪೂಜೆಗಳು ನೆರವೇರಿದವು. ನಂತರ ಗೋಪೂಜೆ, ಗಣಪತಿ, ನವಗ್ರಹ, ಶನಿಶಾಂತಿ, ಕಲಾಭಿವೃದ್ದಿ ಹೋಮ,ಪೂರ್ಣಾಹುತಿ ಮಹಾಮಂಗಳಾರತಿ ಮುಂತಾದ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಯಿತು. ಹುಬ್ಬಳ್ಳಿಯ ಮಂಜುನಾಥ್ ಭಟ್ , ಅರ್ಚಕರಾದ ಶ್ರೀನಿವಾಸ್, ರವಿಕುಮಾರ್  ಹೋಮ ಮತ್ತು ಪೂಜಾ ಕಾರ್ಯಗಳನ್ನು ನಡೆಸಿದರು. ಭಕ್ತರಿಗೆ ಅನ್ನದಾಸೋಹ  ಏರ್ಪಡಿಸಲಾಗಿತ್ತು.

ಶಾಸಕ  ಎ.ಟಿ.ರಾಮಸ್ವಾಮಿ, ಪಪಂ ಅಧ್ಯಕ್ಷ ಹೂವಣ್ಣ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ದೇವಲಾಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ರಾತ್ರಿ ದೀಪಾರಾಧನೆ ಮತ್ತು ರಾಜಾ ವಿಕ್ರಮ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು. 
ಕೋಟೆ  ಐತಿಹಾಸಿಕ ಲಕ್ಷ್ಮೀ ನರಸಿಂಹಸ್ವಾಮಿ, ಪುರಾಣ ಪ್ರಸಿದ್ದ  ಅಮೃತೇಶ್ವರ ಸ್ವಾಮಿ ಮತ್ತು ವೀರಭಧ್ರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಕಾರ್ತೀಕ  ಅಮಾವಾಸ್ಯೆ ಪ್ರಯುಕ್ತ ಲಕ್ಷ ದೀಪೋತ್ಸವ ಹಾಗೂ ವಿವಿಧ ಪೂಜಾಕಾರ್ಯಗಳು ನಡೆದವು.

Post a Comment

0 Comments