ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ಅರಕಲಗೂಡು : ತಾಲೂಕಿನ ಕೊಣನೂರು ಹೋಬಳಿ ಸಿದ್ದಾಪುರ ಗೇಟ್ ಸರ್ಕಲ್ ನಲ್ಲಿ ರೈತರಿಗೆ ಆಗಿರುವ ಅನ್ಯಾಯ ಹಾಗೂ ಈ ಹಿಂದೆ ಸೂಕ್ತ ಪರಿಹಾರ ಹಣ ನೀಡುವ ವಿಚಾರದಲ್ಲಿ ತಾರತಮ್ಯವಾಗಿರುವುದನ್ನು ಕಂಡಿಸಿ, ಸುವರ್ಣ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷರಾದ ಎಸ್ ರಾಘವೇಂದ್ರ ಗೌಡ್ರು ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಸುವರ್ಣ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷರಾದ ಎಸ್ ರಾಘವೇಂದ್ರ ಗೌಡ್ರು ಮಾತಾನಾಡಿ, ಸೂಕ್ತ ಪರಿಹಾರ ನೀಡುವ ಭರವಸೆಯನ್ನು ನೀಡಿ, ಅದರಂತೆ ನಡೆದುಕೊಳ್ಳದೇ ಏಕಾಏಕಿ ರಸ್ತೆ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಕೆಶಿಪ್ -3 ಯೋಜನೆ ಅಡಿಯಲ್ಲಿ ರಸ್ತೆ ಅಗಲೀಕರಣ ಮಾಡುತ್ತಿರುವ ರಾಜ್ಯ ಸರ್ಕಾರ ರೈತರಿಂದ ಜಮೀನು ಸ್ವಾಧೀನ ಪಡಿಸಿಕೊಳ್ಳುತ್ತಿರುವ ಅಧಿಕಾರಿಗಳು ಪರಿಹಾರದ ಮೊತ್ತದಲ್ಲಿ ಸಾಕಷ್ಟು ತಾರತಮ್ಯ ಉಂಟಾಗಿದ್ದು ಈ ವಿಚಾರ ತಿಳಿಸಿ ಅಳಲನ್ನು ತೋಡಿಕೊಂಡಾಗ ಕಳೆದ 4 ತಿಂಗಳಿAದ ಸುಮಾರು 9 ಬಾರಿ ಹೋರಾಟ ಮಾಡಿರುತ್ತಾರೆ. ಈ ಸಮಸ್ಯೆಗೆÀ ಸಂಬAಧಪಟ್ಟAತೆ ಕ್ಷೇತ್ರದ ಶಾಸಕರು, ತಹಸೀಲ್ದಾರ್, ಜಿಲ್ಲಾಧಿಕಾರಿ ರವರಿಗೆ ಮತ್ತು ಸಂಸದರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಈಗಾಗಲೇ ಮನವಿ ಮಾಡಿದರು. ಅಧಿಕಾರಿಗಳು ಕೆಶಿಪ್ ರಸ್ತೆಗೆ ಸಂಬAಧಪಟ್ಟAತೆ ಇರುವ ಎಲ್ಲಾ ಅಧಿಕಾರಿಗಳು ಉಡಾಫೆ ಉತ್ತರಗಳನ್ನು ನೀಡುತ್ತಿದ್ದಾರೆ ಇದೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದಂಥಹ ಎಂ.ಆರ್. ಗಿರೀಶ್ ಗೌಡ, ವಿಮಲ್ ಶೀಗೋಡು, ಆಟೋ ಮಂಜು, ಸ್ವಾಮಿಗೌಡ್ರು, ಆನಂದ್, ಬಶೀರ್ ಅಹ್ಮದ್, ರಾಮಕೃಷ್ಣೇ ಗೌಡ್ರು, ಶಂಕರೇಗೌಡ, ವಸಂತ, ಜೀವನ್, ಸತೀಶ್, ಸ್ವಾಮಿ, ದಾಸಯ್ಯ, ಸಣ್ಣ ಸ್ವಾಮಯ್ಯ, ಶ್ರೀಮತಿ ರಾಮಮ್ಮ, ರಮೇಶ್, ಜವರ ಶೆಟ್ಟಿ, ಗಿರೀಶ್, ಮಂಜು, ಸಂತು ಪೂಜಾರಿ ಇನ್ನಿತರರು ಪಾಲ್ಗೊಂಡಿದ್ದರು.

ಸಂಪಾದಕ - ರವಿ

Post a Comment

0 Comments