ಹಾಸನ : ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವಾಲಯದಲ್ಲಿ ಇರಿಸಲಾಗಿದ್ದ ಹುಂಡಿ ಹಣ ಹಾಗೂ ವಿಶೇಷ ಟಿಕೆಟ್ ಮತ್ತಿತರ ಮೂಲಗಳಿಂದ ಒಟ್ಟಾರೆ 1,54,37,940 ಹಣ ಸಂಗ್ರಹವಾಗಿದೆ .
ಹಾಸನಾಂಬಾ ದೇವಾಲಯದ ಆವರಣದಲ್ಲಿ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾದ ದೇವಾಲಯದ ಹುಂಡಿ ಎಣಿಕೆ ಹಣ ಕಾರ್ಯ ಸಂಜೆ 4.30 ಕ್ಕೆ ಮುಗಿದಿದ್ದು,ಹುಂಡಿಯಲ್ಲಿ 83,89,770, ಸಿದ್ದೇಶ್ವರ ದೇವಾಲಯದ ಹುಂಡಿಯಲ್ಲಿ- 6,50,355 ಸೇರಿದಂತೆ ಹುಂಡಿಯಲ್ಲಿ 90,40,125 ರೂ ಸಂಗ್ರಹವಾಗಿದೆ. ಅಲ್ಲದೆ ಟಿಕೆಟ್ ಮಾರಾಟದಿಂದ 63,97,815 ರೂ ಸಂಗ್ರಹವಾಗದೆ ಎಂದು ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್ ತಿಳಿಸಿದ್ದಾರೆ.
ಹಾಗೂ ಜಾತ್ರ ಮಹೋತ್ಸವದ ಯಶಸ್ಸಿಗೆ ಸಹಕರಿಸಿದ ಜನಪ್ರತಿನಿಧಿಗಳು ,ಸಂಘ ಸಂಸ್ಥೆ ಗಳು ,ಮಾಧ್ಯಮ ಪ್ರತಿನಿಧಿಗಳು ಸಾರ್ವಜನಿಕರು ಹಾಗೂ ಹಣ ಎಣಿಕೆ ಕಾರ್ತವ್ಯದಲ್ಲಿ ತೊಡಗಿದ ಎಲ್ಲಾ ಅಧಿಕಾರಿ,ಸಿಬ್ಬಂದಿ, ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಅರ್.ಗಿರೀಶ್ ಮತ್ತು ಉಪ ವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಬಿ.ಎ ಜಗದೀಶ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಸಂಪಾದಕ - ರವಿ
0 Comments