ಕೊಣನೂರು: ಉದ್ಘಾಟನೆ ಭಾಗ್ಯ ಕಂಡ ಜ್ಞಾನಜ್ಯೋತಿ ಭವನ

ಕೊಣನೂರು: ಪಟ್ಟದ ಕಾವೇರಿ ಹೊಳೆ ಬೀದಿಯಲ್ಲಿ ಹೊಸದಾಗಿ ತಲೆಎತ್ತಿದ ಜ್ಞಾನಜ್ಯೋತಿ ಭವನ ಕಟ್ಟಡ ಸೋಮವಾರ ಸಡಗರ ಸಂಭ್ರಮಗಳಿಂದ ವಿದ್ಯುಕ್ತವಾಗಿ ಉದ್ಘಾಟನೆ ಭಾಗ್ಯ ಕಂಡಿತು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜ್ಞಾನಜ್ಯೋತಿ ಭವನ ಕಟ್ಟಡದ ಉಧ್ಘಾಟನೆ ನೆರವೇರಿದ ಸಮಾರಂಭದಲ್ಲಿ  ಶ್ರೀ ಶಿವ ಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವದಿಸಿ, ಜನ ಸಾಮಾನ್ಯರಿಗೆ ಆಧ್ಯಾತ್ಮದ ಜ್ಞಾನವನ್ನು ನೀಡುವ ಮೂಲಕ ಅವರು ಸನ್ಮಾರ್ಗದಲ್ಲಿ ನಡೆದು ಬದುಕಿನಲ್ಲಿ ಸಾಕ್ಯಾತ್ಕಾರವನ್ನು ಪಡೆಯುವಂತೆ ಶ್ರಮಿಸುತ್ತಿರುವ ಏಕೈಕ ಸಂಸ್ಥೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಎಂದು ತಿಳಿಸಿದರು.

ಸಂಸ್ಥೆಯ ಮೀಡಿಯಾ ವಿಭಾಗದ ಮುಖ್ಯಸ್ಥ ರಾಜಯೋಗಿ ಬ್ರಹ್ಮಕುಮಾರ ಕರುಣಾ ಮಾತನಾಡಿ 85 ವರ್ಷಗಳಿಂದ 147 ದೇಶಗಳಲ್ಲಿ ಸತ್ಸಂಗಗಳ ಮುಖೇನ ಆಧ್ಯಾತ್ಮಿಕ ಶಿಕ್ಷಣವನ್ನು ನೀಡುತ್ತಿದೆ. ಉಚಿತವಾಗಿ ಧ್ಯಾನ,ಯೋಗ ಶಿಕ್ಷಣಗಳನ್ನು ನೀಡುತ್ತಾ ಬರುತ್ತಿದೆ ಎಂದರು.

ಸಂಸ್ಥೆಯ ಲೆಕ್ಕಪತ್ರ ವಿಭಾಗದ ಮುಖ್ಯಸ್ಥ ರಾಜಯೋಗಿ ಬಿ.ಕೆ. ಲಲಿತ್ ಮಾತನಾಡುತ್ತಾ ಆಧ್ಯಾತ್ಮಿಕ ಜ್ಞಾನವು ಮುನುಷ್ಯನಲ್ಲಿನÀ ಮಾನಸಿಕ ಮತ್ತು ದೈಹಿಕ ಅಸ್ಥಿರತೆಯನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ. ನೂತನವಾಗಿ ನಿರ್ಮಾಣವಾಗಿರುವ ಭವನವು ಸ್ಥಳೀಯರಲ್ಲಿ ಭಕ್ತಿ, ಮೌಲ್ಯ ಮತ್ತು ಸಾತ್ವಿಕ ಗುಣಗಳನ್ನು ಮೈಗೂಡಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಜ್ಞಾನಜ್ಯೋತಿ ಭವನವನ್ನು ರಾಜಯೋಗಿ ಬ್ರಹ್ಮಕುಮಾರ ಕರುಣಾ ಉಧ್ಘಾಟಿಸಿದರು, ರಾಜಯೋಗಿ ಬಿ.ಕೆ.ಲಲಿತ್, ಬ್ರಹ್ಮಕುಮಾರಿ ಲಕ್ಷಿö್ಮÃ, ಮೋಹನ , ರಂಗನಾಥ್, ಧನಲಕ್ಚ್ಮೀ, ಡಾ. ದಿನೇಶ್ ಭೈರೇಗೌಡ, ಡಾ. ಮೋಹನ್ ಮಲ್ಲಪ್ಪ, ಉದ್ಯಮಿ ಕೃಷ್ಣೇಗೌಡ, ವಿಜಯಕುಮಾರ್ ಮೊದಲಾದವರು ಇದ್ದರು.

Post a Comment

0 Comments