ಸಾಲು ಮರದ ತಿಮ್ಮಕ್ಕ ಉದ್ಯಾನವನಕ್ಕೆ ಸೌಲಭ್ಯ ಕಲ್ಪಿಸಲು ಕರವೇ ಒತ್ತಾಯ

ಅರಕಲಗೂಡು: ಪಟ್ಟಣ ಹೊರ ವಲಯದ ಸಾಲು ಮರದ ತಿಮ್ಮಕ್ಕ ಉದ್ಯಾನವನಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ತಾಲೂಕು ಕರವೇ ಕಾರ್ಯಕರ್ತರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಉದ್ಯಾನವನದಲ್ಲಿ ಜಮಾಯಿಸಿದ ಕಾರ್ಯಕರ್ತರು ಮೂಲಭೂತ ಸೌಕರ್ಯಗಳನ್ನು ಒದಗಿಸದೆ ನಿರ್ಲಕ್ಷö್ಯ ವಹಿಸಿದ್ದಾರೆ ಎಂದು ಅಧಿಕಾರಿಗಳ ಘೋಷಣೆ ಕೂಗಿದರು.

ಹೆಸರಿಗಷ್ಟೇ ಉದ್ಯಾನವನ ನಿರ್ಮಿಸಲಾಗಿದೆ ಹೊರತು ಇಲ್ಲಿ ಏನೊಂದು ಸೌಲಭ್ಯಗಳಿಲ್ಲ. ಉದ್ಯಾನವನಕ್ಕೆ ಬರುವ ಪ್ರವಾಸಿಗರಿಗೆ ಕುಡಿಯಲು ಸಪರ್ಮಕವಾದ ನೀರಿನ ವ್ಯವಸ್ಥೆ ಇಲ್ಲ. ಪಾರ್ಕ್ನಲ್ಲಿ ಹುಲ್ಲುಗಾವಲು ಹರಡಿದ್ದು ಹಾವು ಹಲ್ಲಿಗಳ ಅವಾಸ ಸ್ಥಾನವಾಗಿದ್ದು ಜನರು ಕಾಲಿಡಲು ಭಯ ಪಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಬAಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಅಗತ್ಯ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಕರವೇ ತಾಲೂಕು ಘಟಕದ ಅಧ್ಯಕ್ಷ ಕುಶಾಲ್, ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಪ್ರಸನ್ನ ಕುಮಾರ್, ತಾಲೂಕು ಉಪಾಧ್ಯಕ್ಷ ಸುಹೆಬ್ ಅಹಮದ್, ಪ್ರವೀಣ್, ಅಕಿಫ್, ಕುಮಾರ್ ಪಾಲ್ಗೊಂಡಿದ್ದರು.

Post a Comment

0 Comments