ಜನಪದ ಕಲಾನಿಧಿ ದೇವಾನಂದ ವರಪ್ರಸಾದ್ ಗೆ ೨೦೨೧ರ ದಸರಾ ಪ್ರಶಸ್ತಿ ಪ್ರದಾನ ಮಾಡಿದ ರಾಮಸ್ವಾಮಿ

ಅರಕಲಗೂಡು: ನಾಡದೇವಿ ಅನುಗ್ರಹದಿಂದ ಜಗತ್ತನ್ನು ಕಾಡುತ್ತಿದ್ದ ಕರೊನಾ ಮಹಾಮಾರಿ ಮೂರನೇ ಅಲೆ ಬಾಧೆ ಕ್ಷೀಣಿಸಿರುವುದು ನಾಡದೇವಿಗೆ ಇರುವ ಶಕ್ತಿಯ ಪ್ರತೀಕವಾಗಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ಬನ್ನಿ ಮಂಟಪ ಆವರಣದಲ್ಲಿ ಆಯೋಜಿಸಿದ್ದ ಅರಕಲಗೂಡು ದಸರಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದು, ಮುಸ್ಲಿಂ, ಕ್ರೆöÊಸ್ತರು ಎಂಬ ಭಿನ್ನ ಭೇದವಿಲ್ಲದೆ ನಾವೆಲ್ಲ ಈ ನಾಡಿನ ಮಕ್ಕಳು ಎನ್ನುವ ಭಾವನೆಯಿಂದ ನಾಡಹಬ್ಬ ಆಚರಿಸಿರುವುದು ನಮ್ಮೆಲ್ಲರ ಸುದೈವ. ನಾಡದೇವಿ ನಮ್ಮಲ್ಲಿ ಸಹೋದರತೆ, ಸೌಹಾರ್ದತಾ ಭಾವನೆಯನ್ನು ಇನ್ನು ಹೆಚ್ಚೆಚ್ಚು ಮೂಡಿಸಲಿ. ಜನರ ಸಂಕಷ್ಟಗಳನ್ನು ದೂರಮಾಡಿ ನಾಡಿನಲ್ಲಿ ಸಮೃದ್ಧಿ ನೆಲೆಸುವಂತೆ ದೇವಿ ಆಶೀರ್ವದಿಸಲಿ ಎಂದು ಆಶಿಸಿದರು.
ದೊಡ್ಡಮಠಧ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಯುವಕರಿಗೆ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳು ಆಗಲಿ, ಅರಕಲಗೂಡಿನ ಕೀರ್ತಿ ಎಲ್ಲೆಡೆ ಹಬ್ಬುವಂತಾಗಲಿದೆ. ನಮ್ಮೆಲ್ಲರು ಬದುಕು ಭವಿಷ್ಯ ಹರ್ಷದಾಯಕವಾಗಲಿ ಎಂದು ತಿಳಿಸಿದರು.

ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಅರೇಮಾದನಹಳ್ಳಿ ವಿಶ್ವಕರ್ಮ ಮೂಲ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ದಸರಾ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಚಿಲುಮೆ ಮಠದ ಮಠಾಧೀಶ ಶ್ರೀ ಜಯದೇವ ಸ್ವಾಮೀಜಿ, ಬಸವಾಪಟ್ಟಣ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ತೊರೆನೂರು ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ಫಾದರ್ ಜಾನ್ ವಿ ನಟರಾಜ್, ಪಪಂ ಅಧ್ಯಕ್ಷ ಹೂವಣ್ಣ, ಉಪಾಧಕ್ಷ ನಿಖಿಲ್ ಕುಮಾರ್, ಸದಸ್ಯರಾದ ಪ್ರದೀಪ್ ಕುಮಾರ್, ಅನಿಕೇತನ್, ಬಾಸಿದ್, ಅನಸೂಯ, ಮುಖ್ಯಾಧಿಕಾರಿ ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಏಕತಾರಿ ಸಾಂಸ್ಖತಿಕ ಸಂಘಟನೆ ಅಧ್ಯಕ್ಷ ಹಾಗೂ ಜನಪದ ಕಲಾವಿದ ದೇವಾನಂದ ವರಪ್ರಸಾದ್ ಅವರಿಗೆ 2021ನೇ ಅರಕಲಗೂಡು ದಸರಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗೀತ ಗಾಯನ ಸ್ಪರ್ಧೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾದ ತಾಲ್ಲೂಕಿನ ಕಣಿಯಾರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕಿ ಎನ್.ಎಸ್. ನಾಗಮಣಿ ಹಾಗೂ ಖೇಲೋ ಇಂಡಿಯಾ ಯೂತ್ಸ್ ಗೇಮ್ ನಲ್ಲಿ ರಾಜ್ಯ ಮಹಿಳಾ ವಾಲೀಬಾಲ್ ತಂಡದ ನಾಯಕಿಯಾಗಿದ್ದ ತಾಲೂಕಿನ ಹನ್ಯಾಳು ಗ್ರಾಮದ ಪ್ರೀತಿ ಅವರಿಗೆ ತಲಾ 15 ಸಾವಿರ ರೂ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಪರಿಸರ ಪೋಷಣಾ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದ ಬಸವಾಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 20 ಸಾವಿರ ರೂ, ದ್ವೀತೀಯ ಸ್ಥಾನ ಪಡೆದ ಕಾಳೇನಹಳ್ಳಿ ಸರ್ಕಾರಿ ಪ್ರೌಢ ಶಾಲೆಗೆ 15 ಸಾವಿರ ರೂ, ಮೂರನೆ ಸ್ಥಾನ ಪಡೆದ ಕೊಣನೂರು ಸಮುದಾಯ ಆಸ್ಪತ್ರೆಗೆ 10 ಸಾವಿರ ರೂ ಹಗದು ಬಹುಮಾನ ನೀಡಲಾಯಿತು.
ಸಂಪಾದಕ ರವಿ

Post a Comment

0 Comments