ತಾಲೂಕು ಆಡಳಿತ, ಅರಣ್ಯ ಇಲಾಖೆಯಲ್ಲಿ ತಾಂಡವಾಡುತ್ತಿರೋ ಭ್ರಷ್ಟಾಚಾರಕ್ಕೆ ಕಡಿವಾಣ ಇಲ್ಲ; ಮಾಜಿ ಮಂತ್ರಿ ಕಿಡಿ

ಅರಕಲಗೂಡು: ಮಾತೆತ್ತಿದರೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಶಾಸಕರು ತಾಲೂಕಿನ ಕೆಲವು ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವ್ಯವಸ್ಥೆ ತಡೆಯಲು ಯಾಕಾಗಿ ಮನಸ್ಸು ಮಾಡುತ್ತಿಲ್ಲ ಎಂದು‌ ಮಾಜಿ ಸಚಿವ ಎ. ಮಂಜು ಕಿಡಿಕಾರಿದ್ದಾರೆ.

ತಾಲೂಕು ಆಡಳಿತದಲ್ಲಿ ಭ್ರಷ್ಟಾಚಾರ ನಿಂತಿಲ್ಲ. ಇತ್ತೀಚೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸೀಬಳ್ಳಿ ರೈತರೊಬ್ಬರಿಂದ ಲಂಚಕ್ಕೆ ಪೀಡಿಸಿರುವ ಆಡಿಯೋ ವೈರಲ್ ಆದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಛೇಡಿಸಿದರು. 

ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆ ಭ್ರಷ್ಟಾಚಾರ ಕುರಿತು ಧ್ವನಿ ಎತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಧಿಕಾರಿಗಳ ಮನೆ ಮಠ ಹಾಳು ಮಾಡಿ, ಅವರ ಹೆಂಡತಿ ಮಕ್ಕಳು ಈಗಲೂ ರಾಮಸ್ವಾಮಿ ಗೆ ಶಾಪ ಹಾಕುತ್ತಿದ್ದಾರೆ. ಶಾಪಕ್ಕೆ ಗುರಿಯಾಗಿದ್ದ ಶಾಸಕರಿಗೆ ಭ್ರಷ್ಟಾಚಾರ ನಿಯಂತ್ರಿಸಲು ಈಗೇನಾಗಿದೆ. ಆಗಲೂ ಎ.ಟಿ. ರಾಮಸ್ವಾಮಿ ಈಗಲೂ ಅದೇ ಹೆಸರಿದೆ. ಅವರ ಹೆಸರಲ್ಲೇನು ಬದಲಾಗಿದೆಯೇ ಎಂದು ಗುದ್ದು ನೀಡಿದರು.

ಈ ಸಂದರ್ಭದಲ್ಲಿ ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಇದ್ದರು.

Post a Comment

0 Comments