ಕೊಣನೂರು ಮಲ್ಲಿಪಟ್ಟಣ ಭಾಗ ಪರಿಶೀಲನೆ ಚುರುಕು : ಸಿಗುವುದೇ ನ್ಯಾಯ

ಅರಕಲಗೂಡು: ತಾಲೂಕಿನ ಕೊಣನೂರು ಮತ್ತು ಮಲ್ಲಿಪಟ್ಟಣ ಹೋಬಳಿಯಲ್ಲಿ ಹೇಮಾವತಿ ಜಲಾಶಯ ಯೋಜನೆ ಅಕ್ರಮ ಭೂ ಮಂಜೂರಾತಿ ಕುರಿತಂತೆ ವ್ಯಾಪಕ ತನಿಖೆ ಕಾರ್ಯ ಕೈಗೊಳ್ಳಲಾಗಿದೆ.

ಶುಕ್ರವಾರ ಕೊಣನೂರು ಹೋಬಳಿಯ ಕಡುವಿನ ಹೊಸಹಳ್ಳಿ, ಬೀರನಹಳ್ಳಿ ಕಾವಲು, ಚಿಕ್ಕಬೊಮ್ಮನಹಳ್ಳಿ, ಹೆಗ್ಗತ್ತೂರು, ಸುಳುಗೋಡು ಸೋಮವಾರ ಗ್ರಾಮದಲ್ಲಿ ಪರಿಶಿಲನಾ ಕಾರ್ಯ ನಡೆಯಿತು. 

ಮಲ್ಲಿಪಟ್ಟಣ ಹೋಬಳಿ ವ್ಯಾಪ್ತಿಯ ಮಾಗೋಡು, ದಾಸನಪುರ, ಬೀಜಗಟ್ಟ, ಕೊಳ್ಳಂಗಿ, ಸಿಂಗನಕುಪ್ಪೆ, ಹೊಂಡರವಳ್ಳಿ, ಇಟಾಪಟ್ಟಣ, ಅರಸಿಕಟ್ಟೆ ಕಾವಲ್ ಗ್ರಾಮಗಳಲ್ಲಿ ಗುರುವಾರ ಎಚ್‌ಆರ್‌ಪಿ ಯಿಂದ ಮಂಜೂರಾಗಿರುವ ಭೂಮಿ ಕುರಿತಂತೆ ಪರಿಶೀಲನಾ ಕಾರ್ಯ ನಡೆಯಿತು.
ಸಿಪಿಐ ಸತ್ಯ ನಾರಾಯಣ ನೇತೃತ್ವದಲ್ಲಿ ಪೋಲಿಸರು, ಕಂದಾಯ ಇಲಾಖೆ ಅಧಿಕಾರಿಗಳ ನೆರವಿನೊಂದಿಗೆ ಎಚ್.ಆರ್.ಪಿ ಯೋಜನೆಯಲ್ಲಿ ಮಂಜೂರಾಗಿರುವ ಜಮಿನುಗಳಿಗೆ ತೆರಳಿ ಭೂಮಿ ಯಾರ ಒಡೆತನದಲ್ಲಿದೆ, ಹಿಡುವಳಿ ನಡೆಸುತ್ತಿರುವವರು ಯಾರು ಮುಂತಾಗಿ ಮಾಹಿತಿ ಪಡೆದು ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಭೂ ಮಾಲಿಕರಿಗೆ ಸೂಚನೆ ನೀಡಲಾಯಿತು.
ಮಲ್ಲಿಪಟ್ಟಣ ಹೋಬಳಿ ಕಂದಾಯ ನಿರೀಕ್ಷಕ ಶಶಿಧರ್, ಕೊಣನೂರು ಹೋಬಳಿ ರಾಜಸ್ವ ನಿರೀಕ್ಷಕ ಮಂಜುನಾಥ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಾದÀ ಹರೀಶ್, ಗೀತಾ, ಸೌಮ್ಯ, ಹುಸೇನ್, ನಾಗರಾಜ್, ಮೋಹನ್ ನಾಯ್ಕ, ರೇಖಾ, ಪುನೀತ್ ಹಾಜರಿದ್ದರು.

ಆಕ್ರಮ ಭೂ ಮಂಜೂರಾತಿ ಕುರಿತಂತೆ ಹಾಸನದಲ್ಲಿ ದೂರು ದಾಖಲಾಗಿದೆ. 100 ಕಡತಗಳ ಕುರಿತು ಮಹಜರ್ ಕಾರ್ಯ ನಡೆಸಲು ತಮಗೆ ವಹಿಸಲಾಗಿದೆ. ಇದರಲ್ಲಿ ತಾಲೂಕಿನ 25 ಹಾಗೂ ಯಸಳೂರಿನ 75 ಕಡತಗಳಿದ್ದು ಪರಿಶೀಲನಾ ಕಾರ್ಯ ಕೈಗೊಂಡಿರುವುದಾಗಿ ಸಿಪಿಐ ಸತ್ಯನಾರಾಯಣ ತಿಳಿಸಿದರು.

                   ಸಂಪಾದಕ - ರವಿ

Post a Comment

0 Comments