ರಾಮೇಶ್ವರಕ್ಕೆ ಭಕ್ತರ ನಿಷೇಧವಾಯ್ತು ನೋಡಿ : ನತದೃಷ್ಟ ಆಡಳಿತಮಯ!!

ಅರಕಲಗೂಡು:   ದಕ್ಷಿಣ ಕಾಶಿ ಎಂದೇ ಪ್ರಖ್ಯಾತ ಪಡೆದಿರುವ ರಾಮನಾಥಪುರ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ರಾಜಗೋಪುರ, ಗರ್ಭಗುಡಿಯ ಕೆಲವು ಭಾಗ  ಕುಸಿದು ಬೀಳುತ್ತಿದ್ದು ಕೆಲವು ದಿವಸಗಳ ಕಾಲ ಜಿಲ್ಲಾಧಿಕಾರಿಗಳವರ ಅದೇಶದಂತೆ ದೇವಾಲಯಕ್ಕೆ ಸಾರ್ವಜನಿಕವಾಗಿ ನಿರ್ಭಂದಿಸಲಾಗಿದೆ ಎಂದು ಇಲ್ಲಿಯ ನಾಡಕಚೇರಿ ಉಪತಹಸಿಲ್ದಾರ್ ಸಿ. ಸ್ವಾಮಿ ತಿಳಿಸಿದರು.

ರಾಮನಾಥಪುರ ಶ್ರೀ ದೇವಾಲಯಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು
 ಕಾವೇರಿ ನದಿ ದಂಡೆಯಲ್ಲಿರುವ 
 ಶ್ರೀರಾಮೇಶ್ವರ ದೇವಸ್ಥಾನದ ಗೋಪುರದ ವಿಗ್ರಹಗಳು ಮಳೆಯಿಂದ ಶೀತವುಂಟಾಗಿ ಹಾನಿಯಾಗಿದ್ದರಿಂದ ಸ್ಥಳಕ್ಕೆ ತಹಶೀಲ್ದಾರರಾದ ವೈ.ಎಂ.ರೇಣುಕುಮಾರ್ ಭೇಟಿ ನೀಡಿ ಪರಿಶೀಲಿಸಿ  ಮಾನ್ಯ ಜಿಲ್ಲಾಧೀಕಾರಿಗಳಿಗೆ ವರದಿ  ಮಾಡಿದ್ದರ ಮೇರೆ ಮಾನ್ಯ ಜಿಲ್ಲಾಧೀಕಾರಿಗಳ ಆದೇಶದಂತೆ ತಾತ್ಕಾಲಿಕವಾಗಿ ಹೆಚ್ಚು ಮಳೆ ಬಿದ್ದ ಕಾರಣ ದೇವಸ್ಥಾನದ ಗೋಪುರ ಹಾಗೂ ದೇವಸ್ಥಾನದ ಸುತ್ತ ಇರುವ ಪೌಳಿ ಹಾಗೂ ಗರ್ಭ ಗುಡಿ ದೇವಸ್ಥಾನ ಶಿತಿಲಗೊಂಡಿದ್ದು ಸದರಿ ದೇವಸ್ಥಾನದ ದುರಸ್ಥಿಯಾಗುವವರೆಗೆ ಯಾವುದೇ ಅಹಿತಕರ ಘಟನೆ ಹಾಗೂ ಪ್ರಾಣಹಾನಿ ಸಂಭವಿಸದಂತೆ ತಾತ್ಕಲಿಕವಾಗಿ ದೇವಸ್ಥಾನಕ್ಕೆ ಸಾರ್ವಜನಿಕರಿಗೆ ಹಾಗೂ ಭಕ್ತಾಧಿಗಳಿಗೆ ಪ್ರವೇಶ ನಿರ್ಭಂದಿಸಲು ಆದೇಶಿಸಿರುವಂತೆ  ಸಾರ್ವಜನಿಕರು ಹಾಗೂ ಭಕ್ತಾಧಿಗಳು ಸಹಕರಿಸಬೇಕೆಂದು ಉಪತಹಶೀಲ್ದಾರರಾದ ಸಿ.ಸ್ವಾಮಿ  ತಿಳಿಸಿದರು. 

ಕಾವೇರಿ ನದಿ ಸ್ವಚ್ಚತಾ 
 ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಮಾತನಾಡಿ ಈಗಾಗಲೇ  ಮೈಸೂರು ಪ್ರಾಚ್ಯವಸ್ತು ಇಲಾಖೆಯಿಂದ 4 ಕೋಟಿ, 80  ಲಕ್ಷ ರೂ ವೆಚ್ಚದಲ್ಲಿ  ಹಣ ಬಿಡುಗಡೆಗೆ ಸರ್ಕಾರಕ್ಕೆ ಕಳಿಹಿಸಿದ್ದು ಶ್ರೀಘವೇ ಹಣ ಬಿಡುಗಡೆ ಮಾಡಿಸುವಂತೆ ಶಾಸಕ ಡಾ. ಎ.ಟಿ. ರಾಮಸ್ವಾಮಿ ಅವರು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಶ್ರೀಘವೇ ಸಂಬಂಧಿಸಿದ ಅಧಿಕಾರಿಗಳು ದೇವಾಲಯದ ಜೀಣ್ಣೋದ್ದಾರ ಮಾಡಿಸುವಂತೆ ಒತ್ತಾಯಿಸಿದರು.

ಈ ಸಂಧರ್ಭದಲ್ಲಿ  ದೇವಸ್ಥಾನದ ಸಮಿತಿ ಸದಸ್ಯರಾದ ರಘು ಎಂ.ಎನ್. ಕುಮಾರಸ್ವಾಮಿ  ರಾಘುಪಂಚಾಯಿತಿ ಸದಸ್ಯರಾದ ಸಿದ್ದಯ್ಯ .ಗ್ರಾಮಲೆಕ್ಕಾಧಿಕಾರಿಗಳಾದ ಕೆ.ಜೆ.ಧರ್ಮೇಶ್.ಹಾಗೂ ಗ್ರಾಮಸಹಾಯಕರಾದ ರಾಜಯ್ಯ, ಅಭಿ., ರಮೇಶ  ಗ್ರಾಮಸ್ಥರು ಹಾಗೂ ಇತರರು ಹಾಜರಿದ್ದರು.

                 ಸಂಪಾದಕ - ರವಿ

Post a Comment

0 Comments