ಅರಕಲಗೂಡು: ತಾಲೂಕಿನ ರಾಮನಾಥಪುರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ರಕ್ಷಣಾ ತಡೆಗೋಡೆ ಕಾಮಗಾರಿ ನನೆಗುದಿಗೆ ಬೀಳದೆ ಪ್ರಗತಿ ಹಂತದಲ್ಲಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.
ರಾಮನಾಥಪುರದಲ್ಲಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಮಳೆಗಾದಲ್ಲಿ ಕಾವೇರಿ ಹೊಳೆ ಉಕ್ಕೇರಿ ಪ್ರವಾಹದ ನೀರು ಜನಸವತಿ ಪ್ರದೇಶಕ್ಕೆ ನುಗ್ಗುವುದನ್ನು ತಪ್ಪಿಸುವ ಸಲುವಾಗಿ ನದಿಗೆ ಅಡ್ಡಲಾಗಿ 1 ಕೋಟಿ ರೂ ವೆಚ್ಚದಲ್ಲಿ ರಕ್ಷಣಾ ತಡೆಗೋಡೆ ನಿರ್ಮಿಸಲಾಗಿದ್ದು ಗೇಟ್ ಅಳವಡಿಸುವ ಕಾರ್ಯ ಬಾಕಿ ಉಳಿದಿದೆ ಎಂದರು.
ಈ ಬಾರಿ ಮುಂಚಿತವಾಗಿ ಮುಂಗಾರು ಮಳೆ ಸುರಿದ ಪರಿಣಾಮ ಜೀವನದಿ ಕಾವೇರಿ ಭರ್ತಿಯಾಗಿ ಹರಿಯುತ್ತಿದೆ. ಹೀಗಾಗಿ ನಾಲೆಗಳಿಗೆ ನೀರು ಹರಿಸಲಾಗಿದ್ದು ರೈತರು ಬೆಳೆಗಳನ್ನು ಬೆಳೆಯಲು ಅನುಕೂಲವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಲತಾ ಸಣ್ಣಸ್ವಾಮಿ, ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಸಿದ್ದಯ್ಯ, ಮೋಹನ್, ಪುಷ್ಪ, ಮಾಜಿ ಅಧ್ಯಕ್ಷರಾದ ಕಾಳೇಗೌಡ, ಚಿಕ್ಕಣ್ಣಶೆಟ್ಟಿ, ಹಾರಂಗಿ ಮಹಾ ಮಂಡಲ ಅಧ್ಯಕ್ಷ ಚೌಡೇಗೌಡ, ಇಂಜಿನಿಯರ್ ಜಯರಾಂ, ಉಪ ತಹಸೀಲ್ದಾರ್ ಸಿ. ಸ್ವಾಮಿ, ಜಿಪಂ ಮಾಜಿ ಸದಸ್ಯ ಅಪ್ಪಣ್ಣ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.
ಸಂಪಾದಕ - ರವಿ
0 Comments