ಕೋವಿಡ್ ಸಂಕಷ್ಟದಲ್ಲಿರೋ ಅರ್ಚಕರಿಗೆ ದಿನಸಿ ಕಿಟ್ ಕೊಟ್ಟ ಸರ್ಕಾರ

ಅರಕಲಗೂಡು: ಕೊರೊನಾ ಸೋಂಕಿನಿAದ ಸಮಾಜದ ಎಲ್ಲ ವರ್ಗಗಳ ಜನರಂತೆ ಅರ್ಚಕ ವರ್ಗದವರೂ ಸಂಕಷ್ಟಕ್ಕೆ ಸಿಲುಕಿದ್ದು ಇವರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ದಿನಸಿ ಕಿಟ್ ಗಳನ್ನು ವಿತರಣೆ ಮಾಢುತ್ತಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಮುಜರಾಯಿ ದೇವಾಲಯಗಳ ಅರ್ಚಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಆದಾಯ ಇರುವ 5 ದೇವಾಲಯಗಳ ನಿಧಿಯಿಂದ ಸಿ ವರ್ಗದ ದೇವಾಲಯಗಳ ಅರ್ಚಕರಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ತಾಲೂಕಿನಲ್ಲಿ 348 ಜನ ಅರ್ಚಕರಿಗೆ ವಿತರಣೆ ಮಾಡಲಾಗುತ್ತಿದೆ ಎಂದರು. 

ಕೋವಿಡ್ ಸಾಂಕ್ರಾಮಿಕ ರೋಗವಾಗಿದ್ದು ಇದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಬಹಳ ಮುಖ್ಯವಾಗಿದೆ. ಎರಡು ಅಲೆಗಳು ಈಗಾಗಲೇ ಅಪ್ಪಳಿಸಿದ್ದು ಇದರಿಂದ ಬಹಳಷ್ಟು ಜನರು ತೊಂದರೆಗೆ ಒಳಗಾಗಿದ್ದಾರೆ. ಸದ್ಯದಲ್ಲೆ ಮೂರನೇ ಅಲೆ ಬರಲಿದ್ದು ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯವಾಗಿದೆ. ಜನರು ಹೆಚ್ಚಿನ ಎಚ್ಚರ ವಹಿಸುವುದು ಅಗತ್ಯ ಎಂದರು. ಇದೇ ವೇಳೆ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಮೂವರು ರೈತರ ಕುಟುಂಬಕ್ಕೆ ಪರಿಹಾರ ಧನದ ಆದೇಶ ಪತ್ರವನ್ನು ಶಾಸಕರು ವಿತರಿಸಿದರು.

ತಹಸೀಲ್ದಾರ್ ರೇಣುಕುಮಾರ್, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ಕೆ. ರಮೇಶ್ ಕುಮಾರ್, ಜಿಲ್ಲಾ ಆಗಮಿಕ ಪರಿಷತ್ ಸದಸ್ಯರಾದ ರಕ್ಷಿತ್ ಭಾರಧ್ವಾಜ್, ಅನಂತ ನಾರಾಯಣ್ ಮತ್ತಿತರರು ಇದ್ದರು.


                                                                                    -ಸಂಪಾದಕ - ರವಿ

Post a Comment

0 Comments