18ಎಆರ್‌ಕೆ1..
ಒಳ್ಳೆಯ ಕೆಲಸಗಳನ್ನ ಮಾಡಿದರೂ ಕಾಲೆಳೆಯಲಾಗುತ್ತಿದೆ; ವಿರೋಧಿ ಗಳಿಗೆ ಛೂ ಬಾಣ ಬಿಟ್ಟ ಅಧ್ಯಕ್ಷ ಎ.ಟಿ. ರಾಮಸ್ವಾಮಿ
ಅರಕಲಗೂಡು: ತಾಲೂಕಿನ ಸುಕ್ಷೇತ್ರ ಶ್ರೀ ಅರಸೀಕಟ್ಟೆ ಅಮ್ಮ ದೇವತೆ ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸಿ ಮರದಲ್ಲಿ ರಾಗಿ ತೂರುವ ಮೂಲಕ ಚಾಲನೆ ನೀಡಿದರು.
ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಮಾತನಾಡಿ, ಸುಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದೆ. ಸಮಿತಿಯ ಸೇವಾ ಕಾರ್ಯಗಳನ್ನು ಸಹಿಸದೆ ಕೆಲವು ವಿರೋಧಿಗಳು ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ, ಇದು ಆರೋಗ್ಯಕರ ಬೆಳವಣಿಗೆಯಲ್ಲ. ದೇವಸ್ಥಾನ ಸಮಿತಿಯ ಸುಪರ್ದಿಗೆ ಬಂದ ನಂತರ ಆದಾಯ ಸೋರಿಕೆ ತಡೆಗಟ್ಟಲಾ ಪಾಗಿದೆ. ಸಮಿತಿಯ ಪಾರದರ್ಶಕ ಆಡಳಿತದಿಂದಾಗಿ ಕೋಟಿಗಟ್ಟೆ ತೆರಿಗೆ ಹಣ ಈಗ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದೆ ಎಂದು ಹೇಳಿದರು.
ಇದೀಗ 200ಕ್ಕೂ ಹೆಚ್ಚು ಎಚ್‌ಐವಿ ಚುಚ್ಚುಮದ್ದು ನೀಡಿದ್ದು, 1000 ಮಕ್ಕಳು ಹೆಸರು ನೊಂದಾಯಿಸಿಕೊAಡಿದ್ದಾರೆ. 9ರಿಂದ 14 ವರ್ಷದ ವರೆಗಿನ ಎಲ್ಲಾ ಮಕ್ಕಳಿಗೂ ದಿನಾಂಕ ನಿಗದಿಪಡಿಸಿ ಉಚಿತವಾಗಿ ಚುಚ್ಚುಮದ್ದು ನೀಡುವ ಕೆಲಸವನ್ನು ಸಮಿತಿ ಮಾಡಲಿದೆ ಎಂದರು.
ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ತೇಜೂರು ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಅರಮೇರಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಹೊಳೆನರಸೀಪುರ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಶಾಲು, ವೃತ್ತ ನಿರೀಕ್ಷಕ ವಸಂತ್, ಗ್ರಾಪಂ ಸದಸ್ಯರು, ಭಕ್ತರು, ಸಮಿತಿಯ ಕಾರ್ಯದರ್ಶಿ ಮಾದಾಪುರ ಕೃಷ್ಣೇಗೌಡ, ಪದಾಧಿಕಾರಿಗಳು ಇದ್ದರು.
0 Comments