ಅರಕಲಗೂಡು, ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ: ಬೆಂಬಲಿಗರ ಸಂಭ್ರಮಾಚರಣೆ!..

ಅರಕಲಗೂಡು: ಸಂಕ್ರಾಂತಿ ಹಬ್ಬದ ಸಡಗರದ ನಡುವೆ ಕಾಂಗ್ರೆಸ್ ಕಾರ್ಯಕರ್ತರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕದ ಸಿಹಿ ಸುದ್ದಿ ಸಿಕ್ಕಿದ ಸಂಭ್ರಮ!...

ಅರಕಲಗೂಡು ಬ್ಲಾಕ್ ಕಾಂಗ್ರೆಸ್  ಸಮಿತಿ ಅಧ್ಯಕ್ಷರಾಗಿ ಕಬ್ಬಳಿಗೆರೆ ಗ್ರಾಮದ ಕೆ.ಟಿ. ಸೋಮಶೇಖರ್  ಹಾಗೂ  ವಿಧಾನ ಸಭಾ ವ್ಯಾಪ್ತಿಯ ಹಳ್ಳಿ ಮೈಸೂರು ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜೇಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್ ನೇಮಕಮಾಡಿದ್ದಾರೆ. ಪಕ್ಷದ ಬಲವರ್ಧನೆ ಮತ್ತು ಸಂಘಟನೆಗೆ ಶ್ರಮಿಸುವಂತೆ ಸೂಚಿಸಿದ್ದಾರೆ. 
ಸಂಭ್ರಮಾಚರಣೆ: ನೂತನವಾಗಿ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ  ಕೆ. ಟಿ. ಸೋಮಶೇಖರ್ ಮತ್ತು ರಾಜೇಗೌಡ ಅವರನ್ನು ಪಟ್ಟಣದಲ್ಲಿ ಮಂಗಳವಾರ  ಸಂಜೆ ಕಾಂಗ್ರೆಸ್ ಕಾರ್ಯಕರ್ತರು  ಹರ್ಷೋದ್ಘಾರಗಳೊಂದಿಗೆ ಬರಮಾಡಿಕೊಂಡರು. ಅನಕೃ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಿದರು. ಸೋಮಶೇಖರ್ ಹಾಗೂ ರಾಜೇಗೌಡ ಮಾತನಾಡಿ,   ಪಕ್ಷ ವಹಿಸಿರುವ  ಜವಬ್ದಾರಿಯನ್ನು ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು  ಕ್ಷೇತ್ರದಲ್ಲಿ ಪಕ್ಷವನ್ನು  ಸಂಘಟಿಸಿ  ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲಿ ಜಯಗಳಿಸುವಂತೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
 ಪಪಂ ಉಪಾಧ್ಯಕ್ಷ ಸುಬಾನ್ ಷರೀಪ್,  ಯೋಜನಾ ಪ್ರಾದಿಕಾರದ ಅಧ್ಯಕ್ಷ ಗುರುಮೂರ್ತಿ, ಐಎನ್ ಟಿಯುಸಿ  ಅಧ್ಯಕ್ಷ  ಎ. ಎಸ್. ರಂಗನಾಥ್,  ಬಗರ್ ಹುಕುಂ ಸಮಿತಿ ಸದಸ್ಯರಾದ ಎಸ್. ಎಲ್. ಗಣಪತಿ, ಪುಟ್ಟಯ್ಯ, ಕೆಡಿಪಿ ಸದಸ್ಯ ಸುರೇಶ್, ಮುಖಂಡರಾದ ದಶರಥ, ನಿಂಗರಾಜ್, ಸತ್ಯರಾಜ್, ಸಲೀಮ್ ಭಾಗವಹಿಸಿದ್ದರು.

Post a Comment

0 Comments