ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯರು ದಂಗೆ ಏಳಬೇಕಿತ್ತು? ರೈತ ಸಂಘದ ಯೋಗಣ್ಣ ಕಳವಳ

ಅರಕಲಗೂಡು: ವಿಕೃತಕಾಮಿ ಕೃತ್ಯ ಎಸಗಿರುವ ವಿಡಿಯೋಗಳನ್ನು ನೋಡಿಯೂ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯರು ದಂಗೆ ಏಳದಿರುವುದು ದುರಾದೃಷ್ಟಕರವೆನಿಸಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ವಿ. ಯೋಗಣ್ಣ ಕಳವಳ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೂಗತ ಪಾತಕಿಯಂತೆ ವಿದೇಶದಲ್ಲಿ ಎಲ್ಲೋ ಅಡಗಿ ಕುಳಿತು ಮೇ 31ಕ್ಕೆ ಎಸ್ ಐಟಿ ಮುಂದೆ ಶರಣಾಗುವುದಾಗಿ ವಿಡಿಯೋ ಹರಿಬಿಡುತ್ತಿರುವ ವಿಕೃತಕಾಮಿ ಪ್ರಜ್ವಲ್ ರೇವಣ್ಣ ನಡೆ ಖಂಡನೀಯವಾಗಿದೆ. 

ಸಂಸತ್ ಸದಸ್ಯ ಸ್ಥಾನದ ಘನತೆ ಮರೆತಿರುವ ಈತನನ್ನು ಬಂಧಿಸದಿರುವುದು ಈ ನೆಲದ ಕಾನೂನು ಶಕ್ತಿಯನ್ನು ಅಣಕಿಸುವಂತಿದೆ. ಮಹಿಳೆಯರ ರಕ್ಷಣೆ ಬಗ್ಗೆ ಕೇಂದ್ರ ಸರ್ಕಾರ ವರ್ತನೆ ಬರಿ ಬೂಟಾಟಿಕೆ ಎಂಬುದು ಸಾಬೀತಾಗಿದೆ. ವಿಕೃತಕಾಮಿ ಬಂಧನಕ್ಕೆ ಆಗ್ರಹಿಸಿ ಕೆಲ ಪ್ರಗತಿಪರ ಚಿಂತಕರು, ಹೋರಾಟಗಾರರು ಧ್ವನಿ ಎತ್ತದೆ ವಿಮುಖರಾಗುತ್ತಿರುವ ಸಂಗತಿ ನಿಜಕ್ಕೂ ಶೋಚನೀಯವಾಗಿದೆ. ವಿಕೃತಕಾಮಿ ಎಸಗಿರುವ ವಿಡಿಯೋ ನೋಡಿಯೂ ಕೋಟ್ಯಾಂತರ ಮಹಿಳೆಯರು ದಂಗೆ ಏಳದಿರುವುದು ದುರಾದೃಷ್ಟಕರ. 
ಇದೊಂದು ರೀತಿ ಭ್ರಷ್ಟಾಚಾರಿಗಳನ್ನು ನೋಡಿಯೂ ಕೂಡ ಭ್ರಷ್ಟ ರಾಜಕಾರಣಿಗಳಿಗೆ ಹಾಗೂ ಅತ್ಯಾಚಾರಿಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ. ಈತನನ್ನು ಬಂಧಿಸಿ ಕಾನೂನು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ರಾಜ್ಯ ಜನಪರ ಚಳವಳಿಗಳ ಒಕ್ಕೂಟ ಮೇ 30ರಂದು ಹಮ್ಮಿಕೊಂಡಿರುವ ನಮ್ಮೆಲ್ಲರ ಹೋರಾಟದ ನಡಿಗೆ ಹಾಸನದ ಕಡೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಬೆಂಬಲಿಸಿ ತಾಲೂಕಿನ ವಿವಿಧ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ತಾಲೂಕು ಛಲವಾದಿ ಮಹಾಸಭಾ ಉಪಾಧ್ಯಕ್ಷ ಎ.ವಿ. ಲಿಂಗರಾಜು ತಿಳಿಸಿದರು.

ವಿಕೃತಕಾಮಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಸಹಕರಿಸಿದೆ ಕೇಂದ್ರ ಸರ್ಕಾರ ತಪ್ಪಿತಸ್ಥ ಆರೋಪಿ ಬೆಂಬಲಿಸಿ ಈ ನೆಲದ ಕಾನೂನಿಗೆ ಅಗೌರವ ತೋರುತ್ತಿರುವುದು ಖಂಡನೀಯ ಎಂದು ಮಂಗಳವಾರ 
ದಸಂಸ ಮುಖಂಡ ನಿಂಗರಾಜು ಗೋಷ್ಠಿಯಲ್ಲಿದ್ದರು.

Post a Comment

0 Comments