ಅರಕಲಗೂಡು: ಶಾಸಕರ ಅಣತಿಯಂತೆ ತಹಸೀಲ್ದಾರ್ ಕಾರ್ಯನಿರ್ವಹಿಸುತ್ತಿದ್ದು ನೋಂದವರಿಗೆ ಅತಿವೃಷ್ಟಿ ಪರಿಹಾರ ನ್ಯಾಯಯುತವಾಗಿ ಧಕ್ಕುತ್ತಿಲ್ಲ, ಎಷ್ಟೋ ಮಂದಿಗೆ ಇದು ಗೊತ್ತಾಗದೆ ವಂಚಿತರಾಗಿದ್ದಾರೆ. ಅತಿವೃಷ್ಟಿಯಿಂದ ಹಾನಿಗೊಳಗಾಗಿ ಪರಿಹಾರ ದೊರಕದ ಸಂತ್ರಸ್ಥರನ್ನು ತಾಲ್ಲೂಕು ಕಚೇರಿಗೆ ಕರೆದೊಯ್ಯುವ ಮೂಲಕ ಅಧಿಕಾರಿಗಳ ಗಮನ ಸೆಳೆಯುವುದಾಗಿ ಬಿಜೆಪಿ ಹಮ್ಮಿಕೊಂಡಿದೆ ಎಂದು ಮುಖಂಡ ಯೋಗಾರಮೇಶ್ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿಮ ತಾಲ್ಲೂಕಿನಲ್ಲಿ ಈ ಬಾರಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಕಾರಣ ಬೆಳೆ , ಮನೆಗಳು ಹಾಗೂ ಸಾರ್ವಜನಿಕ ಆಸ್ತಿ ಗಳಿಗೆ ತೀವ್ರ ಹಾನಿಯಾಗಿದೆ, ಸರ್ಕಾರ ಪರಿಹಾರದ ಹಣ ಬಿಡುಗಡೆ ಮಾಡಿದರೂ ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದ ಜನರಿಗೆ ತಲುಪುತ್ತಿಲ್ಲ ಎಂದು ಆರೋಪಿಸಿದರು.
ಹಾನಿ ಸಂಭವಿಸಿದ ಕೂಡಲೆ ಕಂದಾಯ ಸಚಿವ ಆರ್.ಆಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ನೀರಾವರಿ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿ ಪರಿಹಾರದ ಕ್ರಮಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಸಚಿವವರ ಎದುರು ತಲೆಯಾಡಿಸುವ ಅಧಿಕಾರಿಗಳು ಸಚಿವರು ತೆರಳುತ್ತಿದ್ದಂತೆ ನಿರ್ಲಕ್ಷತೆಯನ್ನು ಮುಂದುವರೆಸುತ್ತಾರೆ. ಅದರಲ್ಲೂ ಕೆಳ ಹಂತದ ಅಧಿಕಾರಿಗಳ ಧೋರಣೆ ವಿಪರೀತವಾಗಿದೆ. ಹಾನಿಗೊಳಗಾದ ಬಡವರು, ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಅಧಿಕಾರಿಗಳು ಶಾಸಕರ ಮಾತಿನಂತೆ ನಡೆಯುತ್ತಾ ತಾರತಮ್ಯ ಎಸಗುತ್ತಿದ್ದಾರೆ,
ಸರ್ಕಾರ ಅಗತ್ಯವಾದ ಹಣವನ್ನು ಬಿಡುಗಡೆ ಮಾಡಿದ್ದರೂ ಬಹಳಷ್ಟು ಜನ ಸಂತ್ರಸ್ಥರಿಗೆ ತಕ್ಷಣದ ಪರಿಹಾರದ ಹಣವೂ ದೊರೆತಿಲ್ಲ. ಜನರು ಸರ್ಕಾರವನ್ನು ದೂಷಿಸುತ್ತಿದ್ದಾರೆ. ಹೀಗಾಗಿ ಸಂತ್ರಸ್ಥರಿಗೆ ನೆರವು ದೊರಕಿಸುವ ಸಂಗಡ ಅಧಿಕಾರಿಗಳ ನಿರ್ಲಕ್ಷದ ಕುರಿತು ಗಮನ ಸೆಳೆಯಲು ಸೆ 16 ಶುಕ್ರವಾರ ಪರಿಹಾರ ದೊರಕದ ಸಂತ್ರಸ್ಥರನ್ನು ತಾಲ್ಲೂಕು ಕಚೇರಿಗೆ ಕರೆದೊಯ್ದು ತಹಶೀಲ್ದಾರ್ ಅವರ ಗಮನ ಸೆಳೆಯುವ ಕಾರ್ಯವನ್ನು ಪಕ್ಷ ಹಮ್ಮಿಕೊಂಡಿದೆ. ಹಾನಿಗೊಳಗಾಗಿ ಪರಿಹಾರ ದೊರಕದಿರುವ ಸಂತ್ರಸ್ಥರು ತಾಲ್ಲೂಕು ಕಚೇರಿ ಆವರಣಕ್ಕೆ ಹಾಜರಾಗುವಂತೆ ಮನವಿ ಮಾಡಿದರು.
ಪಕ್ಷದ ಮುಖಂಡರಾದ ವಿಶ್ವನಾಥ್, ಲೋಕೇಶ್, ಪಿ.ಟಿ.ಕೇಶವೇಗೌಡ, ಸೂರ್ಯ, ಮಹಧೇವ್, ಖಂಡೇಶ್ವರ್ ಕುಮಾರ್ ಇದ್ದರು.
0 Comments