ವೇತನವಿಲ್ಲದೆ ಬದುಕುವುದು ಹೇಗೆ? ವಲಯ ಅರಣ್ಯಾಧಿಕಾರಿ ವಿರುದ್ದ ಆಕ್ರೋಶ

ಅರಕಲಗೂಡು : ವರ್ಷವಿಡೀ  ಗೊಬ್ಬಳಿ ಅರಣ್ಯ ನರ್ಸರಿಯಲ್ಲಿ ಕೂಲಿ ಕೆಲಸ ಮಾಡಿದರು ಸಂಬಳ ನೀಡುತ್ತಿಲ್ಲ ವಿಷ ಕುಡಿಯುವುದು ಒಂದೇ ಬಾಕಿ ಉಳಿದಿರುವುದು‌ ಎಂದು ಅರಣ್ಯ ಇಲಾಖೆ ದಿನಗೂಲಿ ನೌಕರರು ಅರಕಲಗೂಡು ವಲಯ ಅರಣ್ಯ ಅಧಿಕಾರಿಗಳ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು 

ಕಳೆದ ಇಪ್ಪತೈದು ವರ್ಷಗಳಿಂದ  ದಿನಗೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಸರ್ಕಾರ ಯಾವುದೇ ಸವಲತ್ತುಗಳನ್ನು ನೀಡದೆ ಅರಣ್ಯ ಇಲಾಖೆ ಅಧಿಕಾರಿಗಳು ವಂಚನೆ ಮಾಡಿಕೊಂಡು ದಬ್ಬಾಳಿಕೆಯಿಂದ ನಮ್ಮಗಳ ಕೈಗಳಿಂದ ಕೆಲಸ ಮಾಡಿಸಿಕೊಳ್ಳತ್ತಿದ್ದಾರೆ  ನ್ಯಾಯಯುತವಾಗಿ ಸರ್ಕಾರದ ಸವಲತ್ತುಗಳನ್ನು ಒದಗಿಸಿಕೊಂಡಿ ಎಂದರೇ ಕೆಲಸದಿಂದ ತೆಗೆದು ಹಾಕುವ ಬೆದರಿಕೆಯನ್ನು ಹಾಕುತ್ತಾರೆ ಇತ್ತ ತಿಂಗಳ ಸಂಬಳವನ್ನು ಸಹ ಸರಿಯಾಗಿ ನೀಡಿದೆ ಗುತ್ತಿಗೆ ಆಧಾರ ನೌಕರರು ನೀವು ಅನುದಾನ ಬಂದ ನಂತರ ಹಾಕುತ್ತಿವೆ ಎಂದು ಎದುರಿಸಿ ಗದರಿಸುತ್ತಾರೆ ಎಂದು ಗೊಬ್ಬಳಿ   ನರ್ಸರಿ ಕೂಲಿ ಕಾರ್ಮಿಕರು ಇಂದು ತಾಲ್ಲೂಕು ವಲಯ ಅರಣ್ಯ ಅಧಿಕಾರಿಗಳ ಕಛೇರಿ ಮುಂದೆ ವಿಷದ ಬಾಟಲ್ ನೊಂದಿಗೆ  ಧರಣಿ ಸತ್ಯಾಗ್ರಹ ನೆಡಸಿದರು  

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜಗದೀಶ್ ಮಾತನಾಡಿ ಇಪ್ಪತ್ತು ಇಪ್ಪತ್ತೈದು ವರ್ಷಗಳಿಂದ ೧೩ ಜನ ದಿನಗೂಲಿ ನೌಕರರು ದುಡಿಮೆ ಮಾಡುತ್ತಿದ್ದರು ಇಲಾಖೆಯ ಯಾವುದೇ ಸವಲತ್ತುಗಳು  ಸಿಗುತ್ತಿಲ್ಲ ದಿನಗೂಲಿ ನೌಕರರಿಗೆ ಸರ್ಕಾರ  ಸಾವಿರ + ಸಾವಿರ ಎಂಬ ಹೊಸ ಯೋಜನೆ ಅಡಿಯಲ್ಲಿ ವೇತನ ನೀಡಬೇಕು ಎಂಬ ಆದೇಶ ಹೋರಾಡಿಸಿತ್ತು ಆದರೆ ವಲಯ ಅರಣ್ಯ ಇಲಾಖೆ ಅದಿಕಾರಿ ಅರುಣ್ ಕೇವಲ ೬ ಜನಕ್ಕೆ ಸೌಲಭ್ಯ ದೊರಕುವಂತೆ ಮಾಡಿ ಉಳಿದ 7 ಜನಕ್ಕೆ ಅನ್ಯಾಯ ಎಸಗಿದ್ದಾರೆ ಇನ್ನೂ ಗುತ್ತಿಗೆ ಆಧಾರದ ನೌಕರರು ಎಂದು ವರ್ಷವಿಡೀ ಸಂಬಳ ನೀಡದೆ ಶೋಷಣೆ ಮಾಡುತ್ತಿದ್ದು ನಮ್ಮಗಳನ್ನು ವಿಷಸೇವಿಸು ಸ್ಥಿತಿಗೆ ತಳ್ಳುತ್ತಿದ್ದಾರೆ  ಸರ್ಕಾರದ ಆದೇಶದಂತೆ ದಿನಗೂಲಿ ನೌಕರರಿಗೆ ವೇತನ ನೀಡದೆ  ಹನ್ನೆರಡು ಸಾವಿರ ಹಣ ನೀಡಿ ಅನ್ಯಾಯ ಮಾಡುತ್ತಿದ್ದಾಗ ಕೇಳಿದರೆ ದರ್ಪದಿಂದ ವರ್ತಿಸುತ್ತಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಪ್ರತಿಭಟನೆ ನೇತೃತ್ವ ವಹಿಸಿದ ಕೆ .ಆರ್. ಎಸ್  ಪಕ್ಷದ ತಾಲ್ಲೂಕು   ಪ್ರದಾನ ಕಾರ್ಯಧರ್ಶೀ ಪ್ರಕಾಶ್ ಮಾತನಾಡಿ ಅರಣ್ಯ ಇಲಾಖೆ ಅಧಿಕಾರಿಗಳು   ದಿನಗೂಲಿ ನೌಕರರಿಗೆ ಸರಿಯಾದ ರೀತಿಯಲ್ಲಿ ಸಂಬಳ ನೀಡುತ್ತಿಲ್ಲ ಇದನ್ನು ತಕ್ಷಣವೇ ಬಗ್ಗೆ  ಪರಿಹರಿಸಬೇಕು ಇಲ್ಲವಾದರೆ ವಲಯ ಅರಣ್ಯ ಇಲಾಖೆ ಅಧಿಕಾರಿ ವಿರುದ್ಧ ಉಗ್ರ ಹೋರಾಟ ನೆಡಸಲಾಗುವುದು ಎಂದು ಎಚ್ಚರಿಕೆ ನೀಡಿದರು

Post a Comment

0 Comments