ಅರಕಲಗೂಡು: ತಾಲ್ಲೂಕಿನಲ್ಲಿ ಪಾಲಿಟೆಕ್ನಿಕ್ ಕೇಂದ್ರ ತೆರೆಯಲು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಡಿ. ದೇವರಾಜ ಅರಸು ಭವನ, ಪಶು ವೈದ್ಯಕೀಯ ಇಲಾಖೆಯ ಪಾಲಿ ಕ್ಲಿನಿಕ್ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಬಾರ್ಡ್ ಯೋಜನೆ ಕಟ್ಟಡಗಳನ್ನು ಸೋಮವಾರ ಉದ್ಘಾಟಿಸಿ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು,
ತಾವು ಉಸ್ತುವಾರಿ ಸಚಿವರಾದ ಬಳಿಕ ಜಿಲ್ಲೆಯಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿರುವುದಾಗಿ ಹೇಳಿದರು. ಪಶು ವೈದ್ಯರು ಮತ್ತು ಸಿಬ್ಬಂಧಿ ಕೊರತೆ ನೀಗಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಜಾನುವಾರುಗಳಿಗೆ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ದೊರೆಯಲು ಅನುಕೂಲವಾಗುವಂತೆ ಮೋಬಲ್ ಚಿಕಿತ್ಸಾ ವಾಹನ ಹಾಗೂ ಜಾನುವಾರುಗಳನ್ನು ಆಸ್ಪತ್ರೆಗೆ ಕರೆತರಲು ನೆರವಾಗುವಂತೆ ಆಂಬುಲೆನ್ಸ್ ವಾಹನವನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕೇಂದ್ರ ಸರ್ಕಾರದ ಕೌಶಲ್ಯ ಭಾರತ್ ಯೋಜನೆಯಡಿ ಟಾಟಾ ಟೆಕ್ನಾಲಜಿಸ ಸಹಯೋಗದಲ್ಲಿ ಹೊಸ ವೃತ್ತಿಪರ ಕೋರ್ಸ್ ಹಾಗೂ ಕಂಪ್ಯೂಟರ್ ಲ್ಯಾಭ್ ಗಳು ಸಿದ್ದಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆಯಾಗಲಿದ್ದು ಇದು ಗ್ರಾಮೀಣ ಭಾಗದ ಯುವ ಜನರಿಗೆ ಉದ್ಯೋಗ ಭದ್ರತೆ ಇದಗಿಸಲಿದೆ. ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ ದೆವರಾಜ ರಸು ಹೆಸರಿನಲ್ಲಿ ಉತ್ತಮ ಭವನ ನಿರ್ಮಾಣಗೊಂಡಿರುವುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ ಕೋವಿಡ್ ಸಂಕಷ್ಟದ ನಡುವೆಯೂ ತಾಲ್ಲೂಕಿನಲ್ಲಿ ಅಭಿವೃದ್ದಿಗೆ ಹೆಚ್ಚಿನ ಗಮನ ಹರಿಸಲಾಗಿದೆ. ರೂ ಒಂದು ಕೋಟಿ ವೆಚ್ಚದಲ್ಲಿ ಅರಸು ಭವನ ಹಾಗೂ ರೂ 2.4 ಕೋಟಿ ವೆಚ್ದದ ಪಶು ವೈದ್ಯಕೀಯ ಪಾಲಿಕ್ಲಿನಿಕ್ ಕಟ್ಟಡ ಹಾಗೂ ರೂ2.77 ಕೋಟಿ ವೆಚ್ಚದ ಕೈಗಾರಿಕಾ ತರಬೇತಿ ಸಂಸ್ಥೆಯ ನಬಾರ್ಡ್ ಯೋಜನೆಯ ಕಟ್ಟಡ ಗಳನ್ನುಗುಣಮಟ್ಟದ ಕಾಮಗಾರಿ ನಡೆಸಿ ಕೇವಲ ಒಂದು ವರ್ಷದಲ್ಲೆ ನಿರ್ಮಾಣ ಮಾಡಲಾಗಿದೆ.
ತಾಲ್ಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗ ಉನ್ನತ ಶಿಕ್ಷಣಕ್ಕೆ ನೆರವಾಗುವಂತೆ ಪಾಲಿಟೆಕ್ನಿಕ್ ತೆರೆಯುವಂತೆ ಸಚಿವರಲ್ಲಿ ಮನವಿ ಮಾಡಿರುವುದಲ್ಲದೆ ಸದನದಲ್ಲೂ ಪ್ರಸ್ತಾಪಿಸಿದ್ದು ಈ ಕುರಿತು ಸಚಿವರು ಗಮನ ಹರಿಸುವಂತೆ ಮನವಿ ಮಾಢಿದರು.
ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಮಾತನಾಡಿದರು. ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಪಂ ಸಿಇಒ ಕಾಂತರಾಜ್, ಎಸ್ ಪಿ ಶ್ರೀನಿವಾಸ್ ಗೌಡ, ತಾಪಂ ಅಧ್ಯಕ್ಷ ಹೂವಣ್ಣ, ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಗೀತಾ, ರಶ್ಮಿ, ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್, ಪಶುಪಾಲನಾ ಇಲಾಖೆಯ ಡಾ.ಕೆ.ಆರ್. ರಮೇಶ್, ಡಾ .ಸುಂದರೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಹಾಕಪ್ಪ ಲಮಾಣಿ ಉಪಸ್ಥಿತರಿದ್ದರು.
0 Comments